Asianet Suvarna News Asianet Suvarna News

ಹೊರಗೆ ಲೇಡೀಸ್ ಬಾರ್, ಒಳಗೆ ಲೈವ್ ಬ್ಯಾಂಡ್!

ಲೈವ್'​ಬ್ಯಾಂಡ್  ಬ್ಯಾನ್ ಆಗಿ ಎಷ್ಟೋ ವರ್ಷ ಆಯ್ತು.  ದಾಖಲೆಗಳಲ್ಲಿ ಹುಡುಕಿದರೂ  ಸಿಗಲ್ಲ. ವಿಧಾನಸೌಧದ ಮೂಲೆಗಳಲ್ಲಿನ ದಾಖಲೆಗಳಲ್ಲಿ ಸಿಗಲ್ಲ. ಕಾನೂನು ಪುಸ್ತಕಗಳಲ್ಲಿ ಸಿಗಲ್ಲ. ಆದರೆ, ಬೆಂಗಳೂರಲ್ಲಿ ಓಪನ್ ಆಗಿಯೇ ನಡೆಯುತ್ತೆ ಗರ್ಮಾ ಗರಂ ದಂಧೆ. ಆ ದಂಧೆಯ ವಿರುದ್ಧ ಸಮರ ಸಾರಿದೆ ಸುವರ್ಣ ನ್ಯೂಸ್. ಸುವರ್ಣ ನ್ಯೂಸ್ ರಹಸ್ಯ ಕ್ಯಾಮೆರಾ ಕಣ್ಣಿಗೆ ಈ ಬಾರಿ ಬಿದ್ದಿರೋದು ಲೈವ್​ಬ್ಯಾಂಡ್ಸ್.

Suvarna News Exclusive Sting Operation in Live band

ಬೆಂಗಳೂರು (ನ.21): ಲೈವ್'​ಬ್ಯಾಂಡ್  ಬ್ಯಾನ್ ಆಗಿ ಎಷ್ಟೋ ವರ್ಷ ಆಯ್ತು.  ದಾಖಲೆಗಳಲ್ಲಿ ಹುಡುಕಿದರೂ  ಸಿಗಲ್ಲ. ವಿಧಾನಸೌಧದ ಮೂಲೆಗಳಲ್ಲಿನ ದಾಖಲೆಗಳಲ್ಲಿ ಸಿಗಲ್ಲ. ಕಾನೂನು ಪುಸ್ತಕಗಳಲ್ಲಿ ಸಿಗಲ್ಲ. ಆದರೆ, ಬೆಂಗಳೂರಲ್ಲಿ ಓಪನ್ ಆಗಿಯೇ ನಡೆಯುತ್ತೆ ಗರ್ಮಾ ಗರಂ ದಂಧೆ. ಆ ದಂಧೆಯ ವಿರುದ್ಧ ಸಮರ ಸಾರಿದೆ ಸುವರ್ಣ ನ್ಯೂಸ್. ಸುವರ್ಣ ನ್ಯೂಸ್ ರಹಸ್ಯ ಕ್ಯಾಮೆರಾ ಕಣ್ಣಿಗೆ ಈ ಬಾರಿ ಬಿದ್ದಿರೋದು ಲೈವ್​ಬ್ಯಾಂಡ್ಸ್.


ಲೈವ್ ಬ್ಯಾಂಡ್ ಅಂದರೆ ಇದು ಮೇಲ್ನೋಟಕ್ಕೆ ಬಾರ್​ಗಳು.  ಒಳ ಹೊಕ್ಕರೆ ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು, ಕುಣೀತಾ ಇರ್ತಾರೆ. ಕುಡಿಯೋಕೆ ಬಿಯರ್ ಬೇಕಾ..? ವ್ಹಿಸ್ಕಿ ಬೇಕಾ..? ಕುಡೀರಿ. ಆದರೆ, ಇವರ ಡ್ಯಾನ್ಸ್​ನ್ನೂ ನೋಡಿಕೊಂಡು ಕುಡಿಯಬೇಕಂದ್ರೆ, ಒಂದಕ್ಕೆ 10 ಪಟ್ಟು ದುಡ್ಡು ಕೊಡಲೇಬೇಕು. ಅಷ್ಟೇ ಅಲ್ಲ,  ಕಿಕ್ ಏರಿದ ಮೇಲೆ ಕಾಮಕುದುರೆ ಏರಬೇಕೆಂದರೆ ಅದೇ ಹುಡುಗಿಯರು ನಿಮಗೆ ದುಡ್ಡಿಗೂ ಸಿಗ್ತಾರೆ. ಒನ್ ನೈಟ್ ಸ್ಟಾಂಡ್ ಫಾರ್ ಮನಿ. ಆ ದಂಧೆಯನ್ನ ಸುಪ್ರೀಂಕೋರ್ಟ್ ಬ್ಯಾನ್ ಮಾಡಿ ವರ್ಷಗಳೇ ಆಗಿ ಹೋಗಿದೆ. ಆದರೂ ಇದು ನಡೀತಾ ಇದೆ. ಇವರು ಇದಕ್ಕೆಲ್ಲ ಕೃಪಾಕಟಾಕ್ಷದಂತೆ ಬಳಸಿಕೊಂಡಿರೋದು ಹೈಕೋರ್ಟ್ ನೀಡಿದ್ದ ತೀರ್ಪನ್ನ. ಹೈಕೋರ್ಟ್​, ಲೇಡಿಸ್ ಬಾರ್​'ಗೆ ಪರ್ಮಿಷನ್ ಕೊಟ್ಟಿದೆ. ಆದರೆ, ಲೇಡಿಸ್ ಬಾರ್​ನಲ್ಲಿ ಹತ್ತಾರು ಕಂಡೀಷನ್ ಹಾಕಿದೆ. ಡ್ರೆಸ್​ಕೋಡ್, ಕುಡುಕರ ವರ್ತನೆ, ಟೈಮಿಂಗು ಎಲ್ಲದಕ್ಕೂ ಕಂಡೀಷನ್ ಇವೆ. ಆದರೆ, ಕೆಲವು ಬಾರ್​ಗಳು  ಲೇಡಿಸ್ ಬಾರ್ ಹೆಸರಲ್ಲಿ ಲೈಸೆನ್ಸ್ ಪಡೆದು ನಡೆಸುತ್ತಾ ಇರೋದು ಮಾತ್ರ  ಲೈವ್​ ಬ್ಯಾಂಡ್.  ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಬಯಲಾಗಿರೋದು ಇದೇ ದಂಧೆ.  ಲೈವ್ ಬ್ಯಾಂಡ್ ದಂಧೆ.

 

ಅಂದಹಾಗೆ ಇಂಥಾದ್ದೊಂದು ದಂಧೆಯ ಬಗ್ಗೆ ಸುವರ್ಣ ನ್ಯೂಸ್​ಗೆ ಮಾಹಿತಿ ಕೊಟ್ಟಿದ್ದು ಕೆಲವು ಕಾಲೇಜು ವಿದ್ಯಾರ್ಥಿಗಳು. ಈ ಬಗ್ಗೆ ಪೊಲೀಸರಿಗೆ ತಿಳಿಸಿಯೂ ಪ್ರಯೋಜನವಾಗದ ಅವರಿಗೆ ಆಸರೆಯಾಗಿ ಕಂಡಿದ್ದು ಸುವರ್ಣ ನ್ಯೂಸ್. ವಿದ್ಯಾರ್ಥಿಗಳ ಮಾಹಿತಿಯನ್ನ ಸೀಕ್ರೆಟ್ ಆಗಿಟ್ಟಿದೆ ಸುವರ್ಣ ನ್ಯೂಸ್.  ಮುಂದಿನ ಹೊಣೆ ಹೊತ್ತು ಫೀಲ್ಡಿಗಿಳಿದಾಗ ನಮಗೂ ಬೆಚ್ಚಿ ಬೀಳುವಂತೆ ಒಂದೊಂದೇ ದಂಧೆಗಳು ಹೊರಬೀಳುತ್ತಾ ಬಂದವು.

 

Follow Us:
Download App:
  • android
  • ios