Asianet Suvarna News Asianet Suvarna News

ಒಐಸಿ ಸಭೆಯಲ್ಲಿ ಸುಷ್ಮಾ ಸ್ವರಾಜ್: ಭಯೋತ್ಪಾದನೆ ವಿರುದ್ಧ ಗುಡುಗು!

ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್| ಒಐಸಿ ಸಮಾವೇಶಕ್ಕೆ ಭಾರತದ ಸುಷ್ಮಾ ಸ್ವರಾಜ್ ಗೌರವ ಅತಿಥಿ| ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದ ಸುಷ್ಮಾ| ‘ಭಯೋತ್ಪಾದನೆಗೆ ಹಣ,ಆಶ್ರಯ ನೀಡುವ ದೇಶಗಳ ಬಣ್ಣ ಬಯಲು ಮಾಡಬೇಕಿದೆ’| ಸುಷ್ಮಾ ಆಹ್ವಾನ ಖಂಡಿಸಿ ಸಭೆ ಬಹಿಷ್ಕರಿಸಿದ ಪಾಕಿಸ್ತಾನ|

Sushma Swaraj Points To Pak Hand In Terror At OIC Meet
Author
Bengaluru, First Published Mar 1, 2019, 4:30 PM IST

ಅಬುದಾಬಿ(ಮಾ.01): ಭಯೋತ್ಪಾದನೆಯಿಂದ ಹಿಂಸಾಚಾರ ಹೆಚ್ಚಾಗಿದ್ದು, ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಒಐಸಿ ಸಮಾವೇಶಕ್ಕೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೌರವ ಅತಿಥಿಯಾಗಿ ಭಾಗವಹಿಸಿದ್ದು, ಇಸ್ಲಾಂ ಧರ್ಮದಲ್ಲಿ ಶಾಂತಿಯನ್ನು ಹೇಳಿಕೊಡಲಾಗುತ್ತದೆ. ಆದರೆ ಕೆಲ ದೇಶಗಳು ಭಯೋತ್ಪಾದನೆಗೆ ಆಶ್ರಯ ನೀಡುತ್ತಿವೆ. ಭಯೋತ್ಪಾದನೆಗೆ ಹಣ ನೀಡುವ, ಆಶ್ರಯ ನೀಡುವ ದೇಶಗಳ ಬಣ್ಣ ಬಯಲು ಮಾಡಬೇಕಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.

ಭಾರತ ವಿವಿಧತೆಗಳಿಂದ ಕೂಡಿರುವ ರಾಷ್ಟ್ರವಾಗಿದೆ. ಭಾರತದಲ್ಲಿ ಎಲ್ಲಾ ಧರ್ಮ ಎಲ್ಲಾ ಸಂಸ್ಕೃತಿಯನ್ನು ಗೌರವಿಸಲಾಗುತ್ತದೆ. ರಾಷ್ಟ್ರಪತಿ ಮಹಾತ್ಮಾ ಗಾಂಧಿಜೀ ಅವರು ಜಗತ್ತಿಗೆ ಶಾಂತಿ ಪಾಠವನ್ನು ಬೋಧಿಸಿದರು. ಗಲ್ಫ್ ರಾಷ್ಟ್ರಗಳ ಜೊತೆಗೆ ನಮ್ಮ ಬಾಂಧವ್ಯ ಚೆನ್ನಾಗಿದೆ ಎಂದು ಈ ವೇಳೆ ಸುಷ್ಮಾ ಹೇಳಿದರು.

ಇನ್ನು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ಭಾರತಕ್ಕೆ ಆಹ್ವಾನ ನೀಡಿರುವುದನ್ನು ಖಂಡಿಸಿ ಪಾಕ್ ಸಮಾವೇಶವನ್ನು ಬಹಿಷ್ಕರಿಸಿದೆ.

Follow Us:
Download App:
  • android
  • ios