news
By Suvarna Web desk | 06:32 PM March 13, 2018
ಆಧಾರ್ ಜೋಡಣೆಯ ಗಡುವು ವಿಸ್ತರಿಸಿದ ಸುಪ್ರಿಂ ಕೋರ್ಟ್, ಸಮಾಜಕಲ್ಯಾಣ ಯೋಜನೆಗಳಿಗೆ ಕಡ್ಡಾಯ

Highlights

ಮೊದಲು ಮಾರ್ಚ್ 31ರವರೆಗೂ ಗಡುವು ನೀಡಲಾಗಿತ್ತು. ಆದಾಗ್ಯೂ ಸಮಾಜ ಕಲ್ಯಾಣ ಯೋಜನೆಗಳಿಗೆ ಕಾಯಿದೆ 7 ಅನ್ವಯ ಕಡ್ಡಾಯಗೊಳಿಸಲಾಗಿದೆ

ನವದೆಹಲಿ(ಮಾ.13): ಬ್ಯಾಂಕ್ ಖಾತೆಗಳು, ಮೊಬೈಲ್, ಪಾನ್ ಕಾರ್ಡ್, ಪಾಸ್'ಪೋರ್ಟ್ ಸೇರಿದಂತೆ ವಿವಿಧ ಸೇವೆಗಳಿಗೆ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಗಳ ಗಡುವನ್ನು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ವಿಸ್ತರಿಸಿದೆ.

ಈ ಮೊದಲು ಮಾರ್ಚ್ 31ರವರೆಗೂ ಗಡುವು ನೀಡಲಾಗಿತ್ತು. ಆದಾಗ್ಯೂ ಸಮಾಜ ಕಲ್ಯಾಣ ಯೋಜನೆಗಳಿಗೆ ಕಾಯಿದೆ 7ರ ಅನ್ವಯ ಕಡ್ಡಾಯಗೊಳಿಸಲಾಗಿದೆ. ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಸೂಚಿಸಿದೆ.

ಮಾರ್ಚ್ 31ರವರೆಗೆ ಗಡುವು ನೀಡಿದ ಕಾರಣ ಮೊಬೈಲ್ ಕಂಪನಿಗಳು ಸೇರಿದಂತೆ ಹಲವು ಸೇವೆಗಳ ಕಂಪನಿಗಳು ತಮ್ಮ ಗ್ರಾಹಕರಿಗೆ  12 ಸಂಖ್ಯೆಗಳ ಆಧಾರ್ ಜೋಡಣೆಗೊಳಿಸಬೇಕೆಂದು ತಮ್ಮ ಗ್ರಾಹಕರಿಗೆ ಕರೆ, ಸಂದೇಶಗಳ ಮೂಲಕ ಸೂಚಿಸುತ್ತಿದ್ದವು. ಇತ್ತೀಚಿಗಷ್ಟೆ ಕೈಗಾರಿಕಾ ಸಂಸ್ಥೆ ಅಸೋಚಾಮ್ ಗಡುವನ್ನು ವಿಸ್ತರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿತ್ತು. ಮಾರ್ಚ್ 2017ರ ವೇಳೆಗೆ ಭಾರತದಲ್ಲಿ 114 ಕೋಟಿ ಭಾರತಿಯರು ಆಧಾರ್ ಕಾರ್ಡ್'ಅನ್ನು ಹೊಂದಿದ್ದಾರೆ. 102 ಕೋಟಿ ಮಂದಿ ನೋಂದಾಯಿಸಿದ್ದಾರೆ.

Show Full Article


Recommended


bottom right ad