Asianet Suvarna News Asianet Suvarna News

ನೂತನ ಸಿಇಸಿ ಆಗಿಒ ಸುನೀಲ್ ಅರೋರಾ ಅಧಿಕಾರ ಸ್ವೀಕಾರ!

ನೂತನ ಸಿಇಸಿ ಸುನೀಲ್ ಅರೋರಾ ಅಧಿಕಾರ ಸ್ವೀಕಾರ! ಸುನೀಲ್ ಅರೋರಾ ನೇಮಕ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್! ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವ ಭರವಸೆ! ನೂತನ ಚುನಾವಣಾ ಆಯೋಗದ ಮುಖ್ಯ ಆಯ್ತುಕರ ಮುಂದಿದೆ ಸವಾಲು! ಸುನೀಲ್ ಅರೋರಾ ಮೇಲೆ 2019ರ ಲೋಕಸಭೆ ಚುನಾವಣೆ ನಡೆಸುವ ಜವಾಬ್ದಾರಿ

Sunil Arora Taken Charge as The New Chief Election Commissioner
Author
Bengaluru, First Published Dec 2, 2018, 3:11 PM IST

ನವದೆಹಲಿ(ಡಿ.02): ಚುನಾವಣಾ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಸುನೀಲ್ ಅರೋರಾ ಅಧಿಕಾರ ಸ್ವೀಕರಿಸಿದ್ದಾರೆ.
 
ಓ. ಪಿ. ರಾವತ್ ಅವರ ಅಧಿಕಾರ ಅವಧಿ ನಿನ್ನೆಗೆ ಮುಕ್ತಾಯಗೊಂಡಿದ್ದು, ಅವರ ಸ್ಥಾನಕ್ಕೆ ಸುನೀಲ್ ಅರೋರಾ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅರೋರಾ,  ಸಂವಿಧಾನದ ಆಶಯಕ್ಕೆ ತಕ್ಕಂತೆ ಆಯೋಗದಲ್ಲಿನ ಎಲ್ಲಾ ಸಿಬ್ಬಂದಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಅರೋರಾ ಅವರಿಗೆ 2019ರ ಲೋಕಸಭಾ ಚುನಾವಣೆ ಪ್ರಮುಖ ಸವಾಲಾಗಿದ್ದು, ಮುಂದಿನ ವರ್ಷವೇ ನಡೆಯಲಿರುವ ಜಮ್ಮು-ಕಾಶ್ಮೀರ, ಓಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಚುನಾವಣೆಯೂ ಪ್ರಮುಖ ಜವಾಬ್ದಾರಿಯಾಗಿದೆ.

2019ರ ಲೋಕಸಭಾ ಚುನಾವಣೆಗಾಗಿ ಈಗಾಗಲೇ ಆಂತರಿಕ ಸಿದ್ಧತೆಗಳನ್ನು ಆಯೋಗ ಆರಂಭಿಸಿದ್ದು, ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು ಎಂದು ಅರೋರಾ ಈ ವೇಳೆ ಭರವಸೆ ನೀಡಿದರು.

1980ರ ರಾಜಸ್ತಾನ ಕೇಡರ್ ನ ಐಎಎಸ್  ಅಧಿಕಾರಿಯಾಗಿರುವ ಅರೊರಾ,  ಹಣಕಾಸು,  ಯೋಜನಾ ಆಯೋಗ, ಜವಳಿ ಸೇರಿದಂತೆ ಹಲವು ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
 

Follow Us:
Download App:
  • android
  • ios