Asianet Suvarna News Asianet Suvarna News

ಕಿವಿಯಲ್ಲಿ ಹತ್ತಿ ಇಟ್ಟು ಓದ್ತಿದ್ದ ಆಟೋ ಚಾಲಕನ ಮಗ 21ನೇ ವರ್ಷಕ್ಕೆ ಐಎಎಸ್ ಆದ ಕತೆ!

ಜನರೇಟರ್ ಕಿರಿಕಿರಿ ಸಾಧನೆಯ ಹಾದಿಗೆ ಮುಳುವಾಗಲಿಲ್ಲ| ಕಿವಿಗೆ ಹತ್ತ ಇಟ್ಟುಕೊಂಡು ಜಗತ್ತು ಮರೆತ ಹಠವಾದಿ| 21ನೇ ವಯಸ್ಸಿಗೆ ಐಎಎಸ್ ಆದ ಹಠವಾದಿಯ ಕತೆ ಕೇಳಿ| ಆಟೋರೀಕ್ಷಾ ಚಾಲಕನ ಮಗ ಐಎಎಸ್ ಆಗಿ ಹೊರ ಹೊಮ್ಮಿದ ರೋಚಕ ಕತೆ| ಪರಿಶ್ರಮಿಗಳಿಗೆ ಮಾದರಿ ಐಎಎಸ್ ಗೋವಿಂದ್ ಜೈಸ್ವಾಲ್|

Story Of Son of Auto Driver Who Secures 21st Rank in UPSC
Author
Bengaluru, First Published Mar 27, 2019, 1:55 PM IST

ಉಸ್ಮಾನ್‌ಪುರ್(ಮಾ.27): ಕಿವಿಯ ಪರದೆಗೆ ಕಿರಿಕಿರಿ ಉಂಟು ಮಾಡುವ ಜನರೇಟರ್ ಶಬ್ಧ, ಮನಸ್ಸಿನ ಪರದೆಯಲ್ಲಿ ಉಜ್ವಲ ಭವಿಷ್ಯದ ಕನಸಿನ ಮೆರವಣಿಗೆ. ಕಿವಿಗೆ ಹತ್ತಿ ಇಟ್ಟುಕೊಂಡು ಓದಿ ಐಎಎಸ್ ಪಾಸಾಗುವ ಮೂಲಕ ಕನಸನ್ನು ನನಸನ್ನಾಗಿಸಿಕೊಂಡ ಗೋವಿಂದ್ ಜೈಸ್ವಾಲ್ ಎಂಬ ಹಠವಾದಿಯ ಕತೆ ಇದು.

ಉತ್ತರ ಪ್ರದೇಶದ ಸಣ್ಣ ಹಳ್ಳಿಯೊಂದರ ತರುಣನೋರ್ವ UPSC ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಪಡೆದು ಐಎಎಸ್ ಆಗುವ ತನ್ನ ಕನಸನ್ನು ನನಸನ್ನಾಗಿಸಿಕೊಂಡ. ಅದೂ ಕೇವಲ 21 ನೇ ವಯಸ್ಸಿಗೆ ಐಎಎಸ್ ಹುದ್ದೆ ಅಲಂಕರಿಸಿದ ಅಂದರೆ ಆತನ ಹಠದ ಕುರಿತು ಬರೆಯಲು ಪದಗಳೆಲ್ಲಿವೆ ಹೇಳಿ.

ಕಡುಬಡತನದ ಹಿನ್ನೆಲೆಯುಳ್ಳ ಗೋವಿಂದ್ ಜೈಸ್ವಾಲ್ ತಂದೆ ಆಟೋರೀಕ್ಷಾ ಓಡಿಸುತ್ತಾರೆ. ಇರುವ ಪುಟ್ಟ ಮನೆಯಲ್ಲೇ ಗೋವಿಂದ್ ಓದು ಪ್ರಾರಂಭಿಸಿದರು. ತಂದೆ-ತಾಯಿಯ ಕಷ್ಟ ಅರಿತಿದ್ದ ಗೋವಿಂದ್, ಓದು ಮಾತ್ರ ತಮ್ಮನ್ನು ಬಡತನದಿಂದ ಪಾರು ಮಾಡಬಹುದು ಎಂಬುದನ್ನು ಅರಿತಿದ್ದರು.

ಇನ್ನು ಗೋವಿಂದ್ ಜೈಸ್ವಾಲ್ ಅವರಿಗೆ ಮೂರು ಜನ ಅಕ್ಕಂದಿರಿದ್ದು, ಎಲ್ಲರ ಆರೈಕೆಯಲ್ಲಿ ಮನೆಯ ಅತ್ಯಂತ ಪ್ರೀತಿಪಾತ್ರ ಮಗನಾಗಿ ಬೆಳೆದ ಹುಡುಗ. ಜೀವನದ ಕಷ್ಟಗಳನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಅರಿತಿದ್ದ ಗೋವಿಂದ್, ಎಲ್ಲವನ್ನೂ ಎದುರಿಸುವ ವಾಗ್ದಾನ ಮಾಡಿದ್ದರು.

ಅದರಂತೆ ಪದವಿ ಬಳಿಕ ಊರು ಬಿಟ್ಟು ದೆಹಲಿ ಸೇರಿಕೊಂಡ ಜೈಸ್ವಾಲ್, ಐಎಎಸ್‌ ಕೋಚಿಂಗ್ ಪಡೆದು 2006ರಲ್ಲಿ UPSC ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಗೋವಿಂದ್ 48ನೇ ಸ್ಥಾನ ಪಡೆದು ಐಎಎಸ್ ಶ್ರೇಣಿ ಗಳಿಸಿದ್ದರು.

ಒಟ್ಟಿನಲ್ಲಿ ಬಡತನವನ್ನೂ ಮೀರಿ ಉಜ್ವಲ ಭವಿಷ್ಯದ ಕನಸನ್ನು ನನಸಾಗಿಸಿಕೊಂಡ ಗೋವಿಂದ್ ಜೈಸ್ವಾಲ್, ಪರಿಶ್ರಮ ಮತ್ತು ಏಕಾಗ್ರತೆಯಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ಇತರ ಹಠವಾದಿಗಳಿಗೆ ಕಳುಹಿಸಿದ್ದಾರೆ.

Follow Us:
Download App:
  • android
  • ios