Asianet Suvarna News Asianet Suvarna News

ಆತ್ಮಹತ್ಯಾ ದಾಳಿ ಹಿನ್ನೆಲೆ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!

ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ| ಕೊಲಂಬೋ ಸೇರಿದಂತೆ ವಿವಿಧೆಡೆ ನಡೆದ ಆತ್ಮಹತ್ಯಾ ಬಾಂಬ್ ದಾಳಿ| ಆಂತರಿಕ ತುರ್ತು ಪರಿಸ್ಥಿತಿ ಹೇರಿ ಮೈತ್ರಿಪಾಲ ಸಿರಿಸೇನ ಘೋಷಣೆ| ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 24 ಜನರನ್ನು ಬಂಧನ|

Sri Lankan President Maithripala Sirisena to declare nationwide emergency
Author
Bengaluru, First Published Apr 22, 2019, 4:14 PM IST

ಕೊಲಂಬೋ(ಏ.22): ರಾಜಧಾನಿ ಕೊಲಂಬೋ ಸೇರಿದಂತೆ ದೇಶದ ವಿವಿಧೆಡೆ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ, ಶ್ರೀಲಂಕಾದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಆಂತರಿಕ ತುರ್ತು ಪರಿಸ್ಥಿತಿ ಹೇರಿ ಮೈತ್ರಿಪಾಲ ಸಿರಿಸೇನ ಘೋಷಣೆ ಹೊರಡಿಸಿದ್ದು, ದಾಳಿಗೆ ಕಾರಣರಾದವರನ್ನು ದೇಶದ ಕಾನೂನಿನ ಅನ್ವಯ ಶಿಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈಸ್ಟರ್ ಹಬ್ಬದ ನಿಮಿತ್ತ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ, ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿ ಸುಮಾರು 290ಕ್ಕೂ ಹೆಚ್ಚು ಜನ ದುರ್ಮಣಕ್ಕೀಡಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 24 ಜನರನ್ನು ಬಂಧಿಸಲಾಗಿದೆ.

Follow Us:
Download App:
  • android
  • ios