Asianet Suvarna News Asianet Suvarna News

ಜನ ಮತ್ತೆ ಬದಲಾವಣೆ ಬಯಸುತ್ತಿದ್ದಾರಾ?

ಲೋಕಸಭಾ ಚುನಾವಣೆ ಸಮೀಪದಲ್ಲಿದೆ. ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಪ್ರಚಾರಕ್ಕಿಳಿದಿವೆ. ಈ ಸಂದರ್ಭದಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ 5 ವರ್ಷದಲ್ಲಿ ಸರ್ಕಾರದ ಸಾಧನೆ ಏನು ಎಂಬ ಬಗ್ಗೆ ಟೈಮ್ಸ್‌ ನೌ ನೊಂದಿಗೆ ಮಾತನಾಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

Smriti Irani speaks on Loksabha Elections 2019 in a interview
Author
New Delhi, First Published Jan 25, 2019, 11:50 AM IST

ಮೈತ್ರಿ ಮಾತು ಕೇಳಿಬರುತ್ತಿದೆ. ತಮಾಷೆ ಎಂದರೆ ಎನ್‌ಡಿಎ v/sಯುಪಿಎ, ಎನ್‌ಡಿಎ v/sಮಹಾಗಠ ಬಂಧನ್‌, ಎನ್‌ಡಿಎ v/s ತೃತೀಯ ರಂಗ ಇವುಗಳಲ್ಲಿ ಯಾವುದು ಎಂದೇ ಅವರಲ್ಲಿ ಸ್ಪಷ್ಟತೆ ಇಲ್ಲ. ಅಷ್ಟಕ್ಕೂ ಅವರೇನು ದೇಶಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆಯೇ ಇಲ್ಲ. ಅಧಿಕಾರಕ್ಕಾಗಿ, ರಾಜಕೀಯವಾಗಿ ಪಾರಾಗಲು.

1. ಈ ಆರು ತಿಂಗಳ ವಿದ್ಯಮಾನವನ್ನು ಗಮನಿಸಿದಾಗ ಜನರು ಮತ್ತೆ ಬದಲಾವಣೆ ಬಯಸುತ್ತಿದ್ದಾರೆ ಎಂದೆನಿಸುತ್ತಾ?

2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು 7ಕ್ಕಿಂತಾ ಕಡಿಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಸದ್ಯ ಸೋತ 3 ರಾಜ್ಯಗಳನ್ನು ಹೊರತುಪಡಿಸಿದರೂ 18 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದರರ್ಥ ಏನು? ಬಿಜೆಪಿ 2014ಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಜನರ ಸೇವೆ ಮಾಡುತ್ತಿದೆ. 5 ವರ್ಷದಲ್ಲಿ 10 ರಾಜ್ಯಗಳಲ್ಲಿ ಬಿಜೆಪಿ ವಿಸ್ತಾರಗೊಂಡಿದೆ. 5 ವರ್ಷದಿಂದೀಚೆಗೆ ನಡೆದ ವಿಧಾನಸಭೆ, ಮುನ್ಸಿಪಲ್‌ ಎಲೆಕ್ಷನ್‌ ಅನ್ನೂ ಕೂಡ ಮೋದಿಗೆ ಸವಾಲು ಎಂದು ಪರಿಗಣಿಸಲಾಗುತ್ತಿದೆ. ಆದರೆ ನಿಜವಾದ ಫೈಟ್‌ ಇರುವುದು 2019ರ ಚುನಾವಣೆಯಲ್ಲಿ. ಇನ್ನೊಂದು ವಿಷಯ ಎಂದರೆ ಭಾರತೀಯ ಜನತಾ ಪಾರ್ಟಿಯ ಪ್ರತಿಯೊಬ್ಬ ಕಾರ್ಯಕರ್ತರೂ ಜನಸಾಮಾನ್ಯರಿಗೆ ಲಭ್ಯವಿದ್ದಾರೆ. ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಇದನ್ನು ವಿಪಕ್ಷಗಳಿಂದ ನಿರೀಕ್ಷಿಸಲು ಸಾಧ್ಯವೇ?

2) ಅನಕ್ಷರಸ್ಥರಿಗೆ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ಏನು ಕ್ರಮ ಕೈಗೊಂಡಿದ್ದೀರಿ?

ಭಾರತೀಯ ಜನತಾ ಪಾರ್ಟಿ ದೇಶದ ಉತ್ತಮ ಭವಿಷ್ಯಕ್ಕಾಗಿಯೇ ಪ್ರತಿಯೊಂದೂ ಕಾರ್ಯಗಳನ್ನು ಮಾಡುತ್ತಿದೆ. ಕೇವಲ ಟ್ವೀಟರ್‌, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ ನಮ್ಮ ಸಂಘಟಕರು ಪ್ರತಿ ಬೂತ್‌ಗಳಲ್ಲೂ, ಪ್ರತಿ ಗ್ರಾಮ ಮಟ್ಟದಲ್ಲಿಯೂ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ. ನಮ್ಮ ಕಾರ್ಯಕರ್ತರು, ಸ್ಥಳೀಯ ರಾಜಕಾರಣಿಗಳು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ.

3) ದೇಶದ ರೈತರು ಮತ್ತು ದೇಶದ ಜನತೆ ಏಳಿಗೆಗೆ ಬಿಜೆಪಿ ಸಾಕಷ್ಟುಕ್ರಮ ಕೈಗೊಂಡಿದೆ ಎನ್ನುತ್ತಿದ್ದೀರಿ. ಹಾಗಿದ್ದೂ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಸರ್ಕಾರ ವಿರುದ್ಧ ಬೃಹತ್‌ ಪ್ರತಿಭಟನೆಗಳೇಕೆ ನಡೆಯುತ್ತಿವೆ?

ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ಇಷ್ಟುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದೇ ಸಮಯಕ್ಕೆ ಸಮಸ್ಯೆಗಳೆಲ್ಲಾ ಪರಿಹಾರವಾಗಲು ಸಾಧ್ಯವಿಲ್ಲ. ನೀವು ರೈತರ ಸಮಸ್ಯೆಗಳ ಬಗ್ಗೆ ಹೇಳಿದಿರಿ. ರೈತ ಚಳುವಳಿ ಮತ್ತು ರಾಜಕೀಯದ ಇತಿಹಾಸವನ್ನು ಗಮನಿಸುವುದಾದರೆ ಡಾ.ಸ್ವಾಮಿನಾಥನ್‌ ಅವರು ರೈತರ ಅಭಿವೃದ್ಧಿಗೆ ಕೆಲ ಕ್ರಮಗಳನ್ನು ಸೂಚಿಸಿದ್ದರು. ಆದರೆ ಅದು ಇದುವರೆಗೂ ಜಾರಿಯಾಗಿರಲಿಲ್ಲ. ಆದರೆ ನಮ್ಮ ಸರ್ಕಾರ ಆ ಪ್ರಯತ್ನದಲ್ಲಿದೆ. ಎಂಎಸ್‌ಪಿ ದರದಲ್ಲಿ 1.5 %ರಷ್ಟುಏರಿಕೆ ಮಾಡಿದೆ. ಇಂತಹ ಕಾರ್ಯಗಳು ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ಅಲ್ಲದೆ ಉತ್ತಮ ನೀರಾವರಿ ಮತ್ತು ಬೆಳೆ ವಿಮೆ ಜಾರಿಗೂ ಸರ್ಕಾರ ಸಾಕಷ್ಟುಕೆಲಸ ಮಾಡಿದೆ. 5 ವರ್ಷದಲ್ಲಿ ಸುಮಾರು 14 ಕೋಟಿಗೂ ಹೆಚ್ಚು ರೈತರು ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿಯಲ್ಲಿ ವೈಜ್ಞಾನಿಕತೆಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಜಿಲ್ಲೆಗಳಲ್ಲೂ ಕೃಷಿ ವಿಜ್ಞಾನ ಕೇಂದ್ರಗಳು ಸ್ಥಾಪನೆಯಾಗಿವೆ. ರೈತರ ಸಮಸ್ಯೆಗಳನ್ನು ತಾತ್ಕಾಲಿಕ ಶಮನ ಮಾಡುವ ಬದಲಾಗಿ ದೀರ್ಘಕಾಲಿಕ ಪರಿಹಾರದೆಡೆಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.

4) ನಾಲ್ಕೂವರೆ ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಯಾರಿಗೂ ಶಿಕ್ಷೆಯಾಗಿಲ್ಲ ಏಕೆ?

ಸರ್ಕಾರ ಯಾರ ಪರವಾಗಿಯೂ ಇಲ್ಲ. ಎಲ್ಲಾ ಕ್ರಿಮಿನಲ್‌ ಪ್ರಕರಣಗಳಲ್ಲಿ ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಪ್ರಗತಿಯಲ್ಲಿದೆ. ದಶಕಗಳ ಬಳಿಕ ಸಜ್ಜನ್‌ ಕುಮಾರ್‌ ಅವರಿಗೆ ಶಿಕ್ಷೆಯಾಗಿದೆ. ಇನ್ನು ಹಲವಾರು ಪ್ರಕರಣಗಳ ಬಗ್ಗೆ ತನಿಖೆಯಾಗುತ್ತಿದೆ. ಭಾರತೀಯ ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ. ಇನ್ನು ದೇಶವನ್ನು ಕೊಳ್ಳೆ ಹೊಡೆದವರ ಬಗ್ಗೆ ಸರ್ಕಾರ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತದೆ. ಸರ್ಕಾರ ಆ ಪ್ರಯತ್ನದಲ್ಲಿದೆ.

5) ರಫೇಲ್‌ ವಿಚಾರ ಏಕೆ ಪಾರದರ್ಶಕವಾಗಿ ನಡೆಯಲು ಸಾಧ್ಯವಿಲ್ಲ?

ಹೌದು ರಫೇಲ್‌ ವಿಚಾರದಲ್ಲಿ ಬಹುತೇಕ ಭಾರತೀಯರ ಮನಸ್ಥಿತಿ ಇದೇ ರೀತಿ ಇದೆ. ಕಾಂಗ್ರೆಸ್‌ ಎತ್ತಿದ್ದ ಎಲ್ಲಾ ಆರೋಪಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟವಾಗಿ ಉತ್ತರಿಸಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡ ಕೇಂದ್ರದ ನಿರ್ಧಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದೆ. ಈ ಬಗ್ಗೆ ವಿತ್ತ ಮಂತ್ರಿಗಳು ಮತ್ತು ಸ್ವತಃ ನರೇಂದ್ರ ಮೋದಿ ಕೂಡ ಮಾತನಾಡಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ಇರುವ, ಸೇನಾ ಹಿತಾಸಕ್ತಿ ಇರುವ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ನಮ್ಮ ಸರ್ಕಾರಕ್ಕೆ ದೇಶದ, ಸೇನೆಯ ಹಿತಾಸಕ್ತಿಯೇ ಮುಖ್ಯ.

6) ಬಿಜೆಪಿ ಮೈತ್ರಿ ಪಕ್ಷಗಳು ಒಬ್ಬರ ನಂತರ ಇನ್ನೊಬ್ಬರು ತೊರೆಯುತ್ತಿರುವುದೇಕೆ?

2014ರ ವೇಳೆಗೆ ಬಿಜೆಪಿ ಮೈತ್ರಿ ಪಕ್ಷಗಳ ಸಂಖ್ಯೆ 16-17 ಇತ್ತು. ಸದ್ಯ ಅದೀಗ 35ಕ್ಕೆ ಏರಿಕೆಯಾಗಿದೆ. ಕೆಲವರು ಬಿಜೆಪಿ ಬಿಟ್ಟು ಹೋಗುತ್ತಿದ್ದಾರೆ. ಕೆಲವರು ಮಹಾಗಠಬಂಧನದ ರಾರ‍ಯಲಿಯಲ್ಲೂ ಪಾಲ್ಗೊಂಡಿದ್ದರು. ತಮಾಷೆ ಎಂದರೆ ಎನ್‌ಡಿಎ v/sಯುಪಿಎ, ಎನ್‌ಡಿಎ v/sಮಹಾಗಠಬಂಧನ್‌, ಎನ್‌ಡಿಎ v/s ತೃತೀಯ ರಂಗ ಇವುಗಳಲ್ಲಿ ಯಾವುದು ಎಂದೇ ಅವರಲ್ಲಿ ಸ್ಪಷ್ಟತೆ ಇಲ್ಲ. ಅಷ್ಟಕ್ಕೂ ಅವರೇನು ದೇಶಕ್ಕಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆಯೇ ಇಲ್ಲ. ಅಧಿಕಾರಕ್ಕಾಗಿ, ರಾಜಕೀಯವಾಗಿ ಪಾರಾಗಲು.

7) ಜನಸಂಖ್ಯಾ ನಿಯಂತ್ರಣಕ್ಕೆ ಎನ್‌ಡಿಎ ಸರ್ಕಾರ ಕೈಗೊಂಡ ಕ್ರಮ ಏನು?

ಇದು ಆರೋಗ್ಯ ಇಲಾಖೆಯಡಿ ಬರುತ್ತದೆ. ಜನಸಂಖ್ಯಾ ಹೆಚ್ಚಳ ಭಾರತ ಅತಿದೊಡ್ಡ ಸವಾಲು. ಅದರೊಂದಿಗೆ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣವೂ ಮತ್ತೊಂದು ಸವಾಲು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬೇಟಿ ಪಢಾವೋ, ಬೇಟಿ ಬಚಾವೋ ಆಂದೋಲನ ಅರಂಭಿಸಿದ ನಂತರದಲ್ಲಿ 104 ಜಿಲ್ಲೆಗಳ ಲಿಂಗಾನುಪಾತದಲ್ಲಿ ಚೇತರಿಕೆ ಕಂಡುಬರುತ್ತಿದೆ. ಇನ್ನು ಗರ್ಬಿಣಿಯರ ಆರೋಗ್ಯ ವಿಚಾರದಲ್ಲಿ ಸರ್ಕಾರ ಗಮನಾರ್ಹ ಕಾನೂನು ಜಾರಿಗೆ ತಂದಿದ್ದು, ಉದ್ಯೋಗಸ್ಥ ಮಹಿಳೆಯರು 26 ತಿಂಗಳು ಸಂಬಳ ಸಹಿತ ರಜೆ ಪಡೆಯುತ್ತಿದ್ದಾರೆ. ಇನ್ನು ಆಯುಷ್ಮಾನ್‌ ಭಾರತ ಆರೋಗ್ಯ ವಿಮಾ ಯೋಜನೆಯು ಅಸಂಖ್ಯಾತ ಬಡವರಿಗೆ ಆಶ್ರಯವಾಗಿ ನಿಂತಿದೆ. 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನ ಇದರ ಪ್ರಯೋಜನ ಪಡೆಯಬಹುದಾಗಿದೆ.

8) 2 ಕೋಟಿ ಉದ್ಯೋಗ ಭರವಸೆ ಈಡೇರಿಲ್ಲ, .15 ಲಕ್ಷವನ್ನು ಪ್ರಜೆಗಳ ಬ್ಯಾಂಕ್‌ ಖಾತೆಗೂ ಹಾಕಿಲ್ಲ..

ನೂತನವಾಗಿ ಸಂಘಟಿತ ಉದ್ಯೋಗಕ್ಕೆ ಸೇರಿದ್ದರೆ 12% ಇಪಿಎಫ್‌ ಲಾಭಾಂಶವನ್ನು ಸರ್ಕಾರವೇ ಭರಿಸಲಿದೆ ಎಂದು 2016ರಲ್ಲಿ ಮೋದಿ ಘೋಷಿಸಿದ್ದರು. ಇದು ಅಸಂಖ್ಯಾತ ಜನರು ಸಂಘಟನಾತ್ಮಕ ಕ್ಷೇತ್ರದಲ್ಲಿ ಕಾಲಿಡಲು ನೆರವಾಯಿತು. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಆ ಸಂಖ್ಯೆ 1 ಕೋಟಿ ತಲುಪಿದೆ. ಇಪಿಎಫ್‌ಒ ಸ್ಕೀಮ್‌ ಅಡಿಯಲ್ಲಿ 1 ಲಕ್ಷ ಜನರು ನೂತನವಾಗಿ ನೋಂದಣಿಯಾಗಿದ್ದಾರೆ. 4 ವರ್ಷದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರಿಗೆ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ದೊರೆತಿದೆ. ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ರಸ್ತೆ ಸಂಪರ್ಕ ಒದಗಿಸಲಾಗಿದೆ. ಶೇ.100ರಷ್ಟುಗ್ರಾಮೀಣ ಭಾಗಗಳಿಗೆ ವಿದ್ಯುತ್‌ ಕಲ್ಪಿಸಲಾಗಿದೆ. ಎನ್‌ಡಿಎ ಸರ್ಕಾರ ಡಿಜಿಟಲೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ದೇಶದ ಬಹುತೇಕ ಜನರು ಬ್ಯಾಂಕ್‌ ಖಾತೆಯನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಹಿಂದೆಂದಿಗಿಂತಲೂ ಸಬಲವಾಗಿವೆ. ಸರ್ಕಾರ ಮತ್ತು ಪ್ರಜೆಗಳ ನಡುವೆ ನೇರವಾಗಿ ಸಂಪರ್ಕ ಸಾಧ್ಯವಾಗುತ್ತಿದೆ.

9) 2019ರಲ್ಲಿ ಸಂಪೂರ್ಣ ಬಹುಮತ ಬಂದೇ ಬರುತ್ತದೆಂಬ ವಿಶ್ವಾಸ ಇದೆಯೇ?

ಹೌದು. ಏಕೆಂದರೆ ಅಭಿವೃದ್ಧಿಯನ್ನು ಬಯಸುವ ಮತದಾರರ ಮೇಲೆ ನನಗೆ ವಿಶ್ವಾಸವಿದೆ. ಏಕೆಂದರೆ ನೂತನ ಭಾರತಕ್ಕಾಗಿ, ದೇಶದ ಭವಿಷ್ಯಕ್ಕಾಗಿ ಅವರು ನಮಗೆ ಮತ ಹಾಕೇ ಹಾಕುತ್ತಾರೆ ಎಂಬ ನಂಬಿಕೆ ನನಗಿದೆ.

10) ನೀವು ಜವಳಿ ಸಚಿವಾಲಯಕ್ಕಿಂತ ರಾಹುಲ್‌ ಗಾಂಧಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇಕೆ?

ಹಾಗೇನಿಲ್ಲವಲ್ಲ. ನಾನವರನ್ನು ಭೇಟಿ ಮಾಡಿದ್ದು 2014ರಲ್ಲಿ. ಆಗ ಅವರು ನನ್ನ ಪ್ರತಿಸ್ಪರ್ಧಿ. ಈ ಬಾರಿಯೂ ಪಕ್ಷ ನಿರ್ಧರಿಸಿದರೆ ಅಮೇಠಿಯಿಂದ ಸ್ಪರ್ಧಿಸುತ್ತೇನೆ. ಒಂದಂತೂ ಸ್ಪಷ್ಟಈ ಬಾರಿ ಕಾಂಗ್ರೆಸ್‌ ಆ ಕ್ಷೇತ್ರವನ್ನು ಕಳೆದುಕೊಳ್ಳಲಿದೆ. ಏಕೆಂದರೆ 2014ರಲ್ಲಿ ಕೇವಲ 25ದಿನ ಮಾತ್ರ ಅಮೇಠಿ ಪ್ರಚಾರಕ್ಕೆ ಹೋಗಿದ್ದೆ. 5 ವಿಧಾನಸಭಾ ಕ್ಷೇತ್ರದಲ್ಲಿ 4 ಬಿಜೆಪಿ ಗೆದ್ದಿತ್ತು. ಸ್ಥಳೀಯ ಚುನಾವಣೆಗಳಲ್ಲಿ ಒಂದು ಸೀಟನ್ನೂ ಗೆದ್ದಿರಲಿಲ್ಲ. ಹಾಗಾಗಿ ಈ ಬಾರಿಯೂ ನಾವೇ ಜಯಗಳಿಸುತ್ತೇವೆಂಬ ವಿಶ್ವಾಸ ನನಗಿದೆ.

11) ಬಾಯಿಗೆ ಬಂದಂತೆ ಮಾತನಾಡುವವರ ವಿರುದ್ಧ ಪಕ್ಷದ ಕ್ರಮ ಏನು?

ಪಕ್ಷದ ರಾಷ್ಟಾ್ರಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ, ದೇಶದ ಜನತೆಗ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದಕ್ಕಾಗಿಯೇ ಪಕ್ಷದಲ್ಲಿ ಸಮಿತಿ ಇದೆ. ಅಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

Follow Us:
Download App:
  • android
  • ios