Asianet Suvarna News Asianet Suvarna News

ಮೈತ್ರಿ ಸರ್ಕಾರದ ಭವಿಷ್ಯ ನುಡಿದ ಮಾಜಿ ಸಿಎಂ ಕೃಷ್ಣ!

ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಭವಿಷ್ಯ| ’ಭಿನ್ನಾಭಿಪ್ರಾಯಗಳ ನಡುವೆಯೇ ರಚನೆಯಾದ ಸರ್ಕಾರ ಇದು’| ಲೋಕಸಭೆ ರಿಸಲ್ಟ್‌ನಿಂದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರ| ವಂಶಪಾರಂಪರ್ಯ ವಿರೋಧಿಸಿ ಹೊರಬಂದೆ| ಮಂಡ್ಯ ಚುನಾವಣೆ ಒಕ್ಕಲಿಗರ ಸಂಘದ ಚುನಾವಣೆಯಲ್ಲ!

SM Krishna Speaks On JDS congress Coalition Government in an interaction
Author
Bangalore, First Published Apr 4, 2019, 9:03 AM IST

ಬೆಂಗಳೂರು[ಏ.04]: ಪ್ರಸಕ್ತ ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸರ್ಕಾರದ ಭವಿಷ್ಯ ತೀರ್ಮಾನಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಬೆಂಗಳೂರು ಪ್ರೆಸ್‌ಕ್ಲಬ್‌ ಮತ್ತು ವರದಿಗಾರರ ಕೂಟಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಏಕೈಕ ಕಾರಣಕ್ಕಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಸಾಕಷ್ಟುಭಿನ್ನಾಭಿಪ್ರಾಯಗಳ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿವೆ ಎಂದರು.

ಆದರೆ, ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಿಗೆ ಪರಸ್ಪರ ಹೊಂದಾಣಿಕೆ ಕಾಯ್ದುಕೊಳ್ಳುವುದೇ ದುಸ್ತರವಾಗಿದೆ. ಇದರಿಂದಾಗಿ ಆಡಳಿತಕ್ಕೆ ಹೆಚ್ಚು ಸಮಯ ನೀಡುತ್ತಿಲ್ಲ. ಚುನಾವಣಾ ಪೂರ್ವ ಹೊಂದಾಣಿಕೆ ಇದ್ದಾಗ ಮಾತ್ರ ಒಂದು ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ರಾಜ್ಯದಲ್ಲಿನ ಸರ್ಕಾರ ನಿರೀಕ್ಷಿತ ಮಟ್ಟದ ಸಾಧನೆ ತೋರಲಿಲ್ಲ. ಈ ಚುನಾವಣೆಯ ಫಲಿತಾಂಶ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಎಂದು ಹೇಳಿದರು.

ವಂಶಪಾರಂಪರ್ಯ ವಿರೋಧಿಸಿ ಹೊರಬಂದೆ:

ನಾನು ವಂಶಾಡಳಿತದ ಕಡು ವಿರೋಧಿ. ಜನ ಒಪ್ಪಿದರೆ ಮತ್ತು ನಾಯಕತ್ವ ವಹಿಸುವುದಕ್ಕೆ ಅರ್ಹತೆ ಇದ್ದರೆ ಅಭ್ಯಂತರವಿಲ್ಲ. ಆದರೆ ಅರ್ಹತೆ ಇಲ್ಲದೆಯೂ ಹುಟ್ಟಿನ ಕಾರಣಕ್ಕೆ ಅವಕಾಶ ನೀಡುವುದನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ನನ್ನ ಕುಟುಂಬದಿಂದ ಯಾರಾದರೂ ರಾಜಕೀಯ ಪ್ರವೇಶಿಸುತ್ತಾರೋ ಎಂಬುದು ಗೊತ್ತಿಲ್ಲ. ಅದು ಅವರಿಗೆ ಬಿಟ್ಟವಿಚಾರ. ಅರ್ಹತೆಯಿದ್ದವರನ್ನು ತಡೆಯಲು ಸಾಧ್ಯವಿಲ್ಲ. ಸದ್ಯ ಯಾರೂ ಆಸಕ್ತಿ ತೋರಿಲ್ಲ. ನನ್ನ ಸಹೋದರನ ಪುತ್ರ ಮಂಡ್ಯ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದರೂ ನನ್ನ ಹೆಸರು ಬಳಸಿಕೊಂಡು ಬೆಳೆಯಲು ಪ್ರಯತ್ನಿಸಲಿಲ್ಲ ಎಂದು ಇದೇ ವೇಳೆ ಕೃಷ್ಣ ತಿಳಿಸಿದರು.

ಕಾಂಗ್ರೆಸ್‌ ಪಕ್ಷ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬರೆದುಕೊಟ್ಟಆಸ್ತಿಯಂತೆ ಆಗಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ಅರ್ಹತೆ ಇತ್ತು. ಅವರೊಂದಿಗೆ ಕೆಲಸ ಮಾಡಲು ಮುಜುಗರ ಆಗಲಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಗಳ ನಂತರ ನಾನು ಆ ಪಕ್ಷದಲ್ಲಿ ಮುಂದುವರೆಯುವುದು ಸಾಧ್ಯವಿಲ್ಲ ಎಂಬುದು ಅರಿವಾದ ಬಳಿಕ ಪಕ್ಷ ತೊರೆಯಬೇಕಾಯಿತು ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪುತ್ರ ರಾಘವೇಂದ್ರ ಚುನಾವಣೆಗೆ ಸ್ಪರ್ಧಿಸಿದ್ದಾರೆ. ರಾಘವೇಂದ್ರ ಅವರು ಹತ್ತಾರು ವರ್ಷಗಳಿಂದ ಶಿವಮೊಗ್ಗದಲ್ಲೇ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಹಿಂದೆಯೂ ಸಂಸದರಾಗಿ, ಶಾಸಕರಾಗಿದ್ದವರು. ಅಲ್ಲಿ ಅವರಿಗೆ ಅಸ್ತಿತ್ವವಿದೆ. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಬೆಳೆಸಿದ್ದಾರೆ. ಶಿವಮೊಗ್ಗ ಸಾಕಷ್ಟುಅಭಿವೃದ್ಧಿಯಾಗಿದೆ ಎಂದು ಕೇಳಿದ್ದೇನೆ. ಬಹಳ ವರ್ಷಗಳ ನಂತರ ಇದೇ ತಿಂಗಳ 20ಕ್ಕೆ ಹೋಗಿ ಅಲ್ಲಿಗೇ ಖುದ್ದು ಭೇಟಿ ನೀಡಿ ನೋಡುತ್ತೇನೆ ಎಂದರು.

ನಾನು ಬಿಜೆಪಿ ಸೇರ್ಪಡೆಯಾಗುವುದಕ್ಕೆ ಪ್ರಧಾನಿ ಮೋದಿ ಅವರೇ ಕಾರಣ. ಇದರಲ್ಲಿ ಮುಚ್ಚುಮರೆಯೇನೂ ಇಲ್ಲ. ಅವರದು ವಂಶಪಾರಂಪರ್ಯ ರಾಜಕಾರಣವಲ್ಲ. ಗುಜರಾತಿನಲ್ಲಿ ಮೂರು ಬಾರಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿ ನಂತರ ದೇಶದ ನಾಯಕತ್ವ ವಹಿಸಿಕೊಂಡಿದ್ದಾರೆ. ಯಾವುದೇ ಕುರ್ಚಿ ಮೇಲೆ ಅವರ ಕರ್ಚೀಫ್‌ ಇಲ್ಲ. ಅದು ನನ್ನನ್ನು ಆಕರ್ಷಿಸಿತು. ಕಳೆದ ಐದು ವರ್ಷಗಳ ಕಾಲ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಅವರಿಗೆ ಇನ್ನೂ ಐದು ವರ್ಷಗಳ ಕಾಲ ಅವಕಾಶ ನೀಡಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ ಎಂದು ಕೃಷ್ಣ ತಿಳಿಸಿದರು.

ಮಂಡ್ಯ ಚುನಾವಣೆ ಒಕ್ಕಲಿಗರ ಸಂಘದ ಚುನಾವಣೆಯಲ್ಲ!:

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ. ಅದು ಈ ದೇಶದ ಭವಿಷ್ಯ ನಿರ್ಧರಿಸಬಲ್ಲ ಚುನಾವಣೆ ಎಂದು ಕೃಷ್ಣ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಡ್ಯದಲ್ಲಿ ನಡೆದಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ. ದೇಶದ ಚುನಾವಣೆ. ಇದನ್ನು ನಾವು ಭಾರತೀಯರಾಗಿ ನೋಡಬೇಕು. ಅದರಂತೆ ನೋಡುತ್ತಿದ್ದೇನೆ. ಇದರಲ್ಲಿ ವಿಪರ್ಯಾಸವೇನೂ ಇಲ್ಲ. ನಾನು ಮಂಡ್ಯಕ್ಕೆ ಪ್ರಚಾರಕ್ಕೆ ತೆರಳುತ್ತೇನೆ. ಅಲ್ಲಿ ಹೋದಾಗ ಎಲ್ಲವನ್ನೂ ಪ್ರಸ್ತಾಪಿಸುತ್ತೇನೆ ಎಂದರು.

ಮಂಡ್ಯದಲ್ಲಿ ಏನನ್ನು ಪ್ರಸ್ತಾಪಿಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ರಾಜ್ಯದ ಸಮ್ಮಿಶ್ರ ಸರ್ಕಾರದ ವಿರೋಧಿ. ಕಾಂಗ್ರೆಸ್‌ ವಿರೋಧಿ, ಜೆಡಿಎಸ್‌ ವಿರೋಧಿ. ಹೀಗಿರುವಾಗ ಮಂಡ್ಯ ಕ್ಷೇತ್ರದಲ್ಲಿ ನಾನು ಯಾವ ನಿಲುವು ತಳೆಯಬಹುದು ಎಂಬುದನ್ನು ನೀವೇ ಯೋಚಿಸಿ ಎಂದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios