Asianet Suvarna News Asianet Suvarna News

ವಾವ್...! ಬಾಹ್ಯಾಕಾಶದಿಂದ ಹೀಗೆ ಕಾಣುತ್ತೆ ಪಟೇಲರ 'ಏಕತಾ ಪ್ರತಿಮೆ'!

ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಿಸಲಾದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ 597 ಅಡಿ ಎತ್ತರದ 'ಏಕತಾ ಮೂರ್ತಿ'ಯ ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಫೋಟೋಗಳನ್ನು ಅಮೆರಿಕಾದ ಸ್ಕೈ ಲ್ಯಾಬ್ ಬಿಡುಗಡೆಗೊಳಿಸಿದೆ.

sky lab released first image of statue of unity from pace
Author
Ahmedabad, First Published Nov 18, 2018, 11:52 AM IST

ಅಮೆರಿಕಾದ ಕಂಪೆನಿಯೊಂದು ವಿಶ್ವದ ಅತಿದೊಡ್ಡ ಪ್ರತಿಮೆಯಾಗಿರುವ ಸರ್ದಾರ್ ಪಟೇಲರ ಏಕತಾ ಮೂರ್ತಿಯ ಬಾಹ್ಯಾಕಾಶದಿಂದ ಸುಂದರ ಫೋಟೋಗಳನ್ನು ಬಿಡುಗಡೆಗೊಳಿಸಿದೆ. ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ನಿರ್ಮಿಸಲಾದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್‌ರ 597 ಅಡಿ ಎತ್ತರದ 'ಏಕತಾ ಮೂರ್ತಿ'ಯ ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಫೋಟೋಗಳನ್ನು ಅಮೆರಿಕಾದ ಸ್ಕೈ ಲ್ಯಾಬ್ ಬಿಡುಗಡೆಗೊಳಿಸಿದೆ. ಫೋಟೋದಲ್ಲಿ ಈ ಪ್ರತಿಮೆ ಮೇಲಿನಿಂದ ಹೇಗೆ ಕಾಣುತ್ತದೆ ಎಂದು ನೋಡಬಹುದಾಗಿದೆ. ಇದರೊಂದಿಗೆ ಪ್ರತಿಮೆಯ ಬಳಿ ಹರಿಯುತ್ತಿರುವ ನರ್ಮದಾ ನದಿಯ ಸೌಂದರ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ: ಸರ್ದಾರ್ ಪ್ರತಿಮೆ ನಿರ್ಮಾಣದ ಹೆಮ್ಮೆ ಕನ್ನಡಿಗನದ್ದು!

ಕಾಕತಾಳೀಯವೆಂಬಂತೆ 2017ರಲ್ಲಿ ಇಸ್ರೋ ಒಂದೇ ಬಾರಿ 104 ಉಪಗ್ರಹಗಳನ್ನು ಉಡಾವಣೆಗೊಳಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಅಂದು ಲಾಂಚ್ ಮಾಡಿದ್ದ 104 ಉಪಗ್ರಹಗಳಲ್ಲಿ 88 ಸ್ಕೈ ಲ್ಯಾಬ್‌ನ ಅರ್ಥ್ ಇಮೇಜಿಂಗ್ ಡವ್ ಉಪಗ್ರಹಗಳಾಗಿದ್ದವು. ಅವುಗಳನ್ನು ಪಿಎಸ್‌ಎಲ್‌ವಿ ಮೂಲಕವೇ ಅಂತರಿಕ್ಷಕ್ಕೆ ಕಳುಹಿಸಲಾಗಿತ್ತು ಎಂಬುವುದು ಗಮನಾರ್ಹ.

ಇದನ್ನೂ ಓದಿ: ಏಕತಾ ಪ್ರತಿಮೆ ಅನಾವರಣ: ಉಕ್ಕಿನ ಮನುಷ್ಯನಿಗೆ ಸಂದ ನ್ಯಾಯ!

ಭಾರತವನ್ನು ಏಕೀಕರಣದ ಹರಿಕಾರ ಸರ್ದಾರ್ ವಲ್ಲಭಭಾಯಿ ಪಟೇಲರ ಗೌರವಾರ್ಥವಾಗಿ ಗುಜರಾತ್‌ನ ನರ್ಮದಾ ನದಿ ದಂಡೆಯಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಪ್ರತಿಮೆಯನ್ನು 2018ರ ಅಕ್ಟೋಬರ್ 31ರಂದು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು. ಈ ಮೂರ್ತಿ ನಿರ್ಮಿಸಲು 2989 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.

Follow Us:
Download App:
  • android
  • ios