Asianet Suvarna News Asianet Suvarna News

ಶರತ್ ಹತ್ಯೆಯ ಹಿಂದಿನ ಸತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟ ಆರೋಪಿಗಳು

ಐಟಿ ಅಧಿಕಾರಿ ಪುತ್ರ ಶರತ್​​ ಕೊಲೆಗೈದ  ಆರೋಪಿಗಳನ್ನ  ಪೊಲೀಸರು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕೆಲವು ಸತ್ಯಗಳನ್ನ ಹೋರಹಾಕಿದ್ದಾರೆ.

Sharath Muder Accused Revealed Secret behind the Sharath Murder

ಬೆಂಗಳುರು (ಸೆ.24): ಐಟಿ ಅಧಿಕಾರಿ ಪುತ್ರ ಶರತ್​​  ಕೊಲೆಗೈದ  ಆರೋಪಿಗಳನ್ನ  ಪೊಲೀಸರು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್​​ ಹತ್ಯೆಯ ಹಿಂದಿನ ಕೆಲವು ಸತ್ಯಗಳನ್ನ ಹೋರಹಾಕಿದ್ದಾರೆ.

ಶರತ್​’ ನನ್ನ ಕಿಡ್ನಾಪ್​​​ ಮಾಡಲು ವಿಶಾಲ್​​ ಅಂಡ್​ ​ ಟಿಂ ತಿಂಗಳ ಹಿಂದೆಯೇ ಬಾರ್​ನಲ್ಲಿ ಎರಡು ಬಾರಿ ಮಿಟಿಂಗ್​ ನಡೆಸಿತ್ತಂತೆ. ಶರತ್​​ ಅಕ್ಕನ ಜೊತೆ ಸಲುಗೆ ಬೆಳಸಿದ್ದ ಪ್ರಕರಣದ ಪ್ರಮುಖ ಆರೋಪಿ ವಿಶಾಲ್​​ , ಶರತ್​​  ತಂದೆಯಾಗಿರೋ ಐಟಿ ಅಧಿಕಾರಿ  ನಿರಂಜನ್​​ ಬಳಿ ಹೆಚ್ಚು ಹಣವಿರೋದನ್ನ ಪತ್ತೆ ಹಚ್ಚಿದ್ದನಂತೆ.  ಈ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ಹೆಚ್ಚು ಭಾರಿ ಶರತ್​​ ಮನೆಗೆ ವಿಶಾಲ್​ ಹೋಗಿ ಬರುತ್ತಿದ್ದನಂತೆ.

ಶರತ್​​ನನ್ನು ಕಿಡ್ನಾಪ್​​ ಮಾಡಿದ್ದ ದಿನವೇ ಕಿಡ್ನಾಪರ್ಸ್ ಶರತ್​​ , ತಂದೆ ಮತ್ತು ಅಕ್ಕನ  ಮೊಬೈಲ್​​ ‘ಗೆ ಮೇಸೆಜ್​ ಕಳುಹಿಸೋ ಮೂಲಕ 50 ಲಕ್ಷಕ್ಕೆ ಬೇಡಿಕೆಯಿಡುತ್ತಾರೆ. ತಕ್ಷಣ ಗಾಬರಿಗೊಂಡ ಶರತ್​​ ತಂದೆ ನಿರಂಜನ್ ಮೆಸೆಜ್​​ ಬಂದ ಕೇಲವೇ ಕ್ಷಣಗಳಲ್ಲಿ ​​ ಜ್ಞಾನಭಾರತಿ ಪೊಲೀಸ್​​ ಠಾಣೆಗೆ ಹೋಗಿ ಮಗನನ್ನ ಉಳಿಸಿಕೊಡುವಂತೆ ದೂರನ್ನ ಕೊಡುತ್ತಾರೆ. ಇಂಟ್ರಸ್ಟೆಟಿಂಗ್​​ ಅಂದ್ರೆ ಶರತ್​​ ತಂದೆ ಜೊತೆಯಲ್ಲೆ ಕಿಡ್ನಾಪ್​ನ ಮಾಸ್ಟರ್​ ಮೈಂಡ್​ ಹಾಗೂ ಪ್ರಕರಣದ ಪ್ರಮುಖ ಆರೋಪಿ ವಿಶಾಲ್​​ ಕೂಡ ಹೋಗಿ ಪೊಲೀಸ್​ ಠಾಣೆಯಲ್ಲಿ ಡ್ರಾಮ ಮಾಡಿರ್ತಾರೆ. ಅದ್ಯಾವಾಗ ನಿರಂಜನ್​ ಪೊಲೀಸ್​ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಶರತ್​’ನನ್ನು ಮುಗಿಸುವಂತೆ ವಿಶಾಲ್​ ತನ್ನ ಟಿಂಗೆ ಸಿಗ್ನಲ್ ಕೊಟ್ಟಿರ್ತಾನೆ.  ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್​​ ಮೊಬೈಲ್​​ನಿಂದ ಶರತ್​​  ಮೊಬೈಲ್​ಗೆ 50 ಲಕ್ಷ ಕೋಡೋದಿಕ್ಕೆ ಆಗಲ್ಲ 10 ಲಕ್ಷ ಕೋಡುತ್ತೇವೆ ಶರತ್​ನನ್ನ ಬಿಟ್ಟುಬಿಡಿ ಎಂದು ಕೊಲೆಗಡುಕರಿಗೆ ಮೆಸೇಜ್​ ಕಳಿಸ್ತಾರೆ. ಆದ್ರೆ ಪೊಲೀಸರ ಮೇಸೆಜ್​​ ತಲುಪವಷ್ಟರಲ್ಲೇ  ಕೋಲೆಗಡುಕರು ಶರತ್​ನನ್ನ ಕೊಲೆ ಮಾಡಿರ್ತಾರೆ. ​

 ಶರತ್​​ ಕಿಡ್ನಾಪ್​​ ಆದ ದಿನದಿಂದಲೂ ಶರತ್​​ ಮೊಬೈಲ್​​  ನೆಟ್​​ವರ್ಕ್​​ ಎಲ್ಲಿದೆ ಅನ್ನೋದನ್ನ ಪತ್ತೆ ಹಚ್ಚೋಕೆ ಪೊಲೀಸರು ಹರಸಾಹಸಪಡುತ್ತಿದ್ದರು.  ಅಷ್ಟಾರಲ್ಲಾಗಲೇ ಶರತ್​​ನನ್ನ ಕಿಡ್ನಾಪ್​​ ಮಾಡಿದ  ದಿನವೇ ಶರತ್​ನನ್ನು ಕೊಲೆಗೈದು ಶರತ್​​ ದೇಹದ ಜೊತೆ ಶರತ್​​ ಮೊಬೈಲ್​​ನ  ಕೆರೆಗೆ ಬಿಸಾಡಿರ್ತಾರೆ. ಇನ್ನು ಪೊಲೀಸರು ಶರತ್​​ ದೇಹವನ್ನ ಹುಡುಕಲು ತೆಗೆದುಕೊಂಡಿದ್ದು ಮಾತ್ರ ಬರೋಬ್ಬರಿ ಹತ್ತು ದಿನಗಳು  ಒಟ್ನಲ್ಲಿ ಕಿಡ್ನಾಪ್​​ ಹಿಂದಿನ ಅಸಲಿ ಸತ್ಯಗಳನ್ನ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ರೆ, ತಲೆಮರೆಸಿಕೊಂಡಿರೋ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow Us:
Download App:
  • android
  • ios