Asianet Suvarna News Asianet Suvarna News

ತಡ ಮಾಡಬೇಡಿ, ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಲಿ: ಸರ್ಕಾರದ ಮನವಿ!

ಭಾರತ ಹಾಗೂ ಚೀನಾದಂತಹ ದೇಶಗಳು ಜನಸಂಖ್ಯಾ ಸ್ಪೋಟದ ಸಮಸ್ಯೆ ಎದುರಿಸುತ್ತಿದ್ದರೆ, ಇಲ್ಲೊಂದು ದೇಶ ಜನಸಂಖ್ಯೆ ಕುಸಿತದಿಂದ ಚಿಂತೆಗೀಡಾಗಿದೆ. ಇದೇ ಕಾರಣದಿಂದ ತನ್ನ ದೇಶದ ದಂಪತಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಜನ್ಮ ನೀಡುವಂತೆ ಕೇಳಿಕೊಳ್ಳುತ್ತಿದೆ. ಅಷ್ಟಕ್ಕೂ ಆದೇಶ ಯಾವುದು? ಇಲ್ಲಿದೆ ವಿವರ

serbia govt appeals to people to have more babies
Author
Serbia, First Published Dec 10, 2018, 3:37 PM IST

ಯೂರೋಪ್ ನ ಸರ್ಬಿಯಾ ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಅಲ್ಲಿನ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿದೆ. ಇದೇ ಕಾರಣದಿಂದ ಸರ್ಕಾರವು ತನ್ನ ದೇಶದ ದಂಪತಿ ಬಳಿ 'ತಡ ಮಾಡಬೇಡಿ, ಮಕ್ಕಳಿಗೆ ಜನ್ಮ ನೀಡಿ' ಎಂದು ಮನವಿ ಮಾಡಿಕೊಳ್ಳುತ್ತಿದೆ. ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಸರ್ಕಾರವು 'ಮಕ್ಕಳ ಮಧುರವಾದ ಕೂಗು ಕೇಳೋಣ' ಎಂಬಿತ್ಯಾದಿ ಘೋಷಣೆಗಳನ್ನು ಮಾಡಲಾರಂಭಿಸಿದೆ. ಆದರೆ ಇಲ್ಲಿನ ಮಹಿಳೆಯರು ಮಾತ್ರ ದೇಶದ ಜನಸಮಖ್ಯೆ ಹೆಚ್ಚಿಸಲು ಉತ್ತಮ ಸಹಕಾರ ಬೇಕೇ ವಿನಃ ಪ್ರೇರಣೆ ನಿಡುವ ಶಬ್ಧಗಳಲ್ಲ ಎನ್ನುತ್ತಾರೆ.

ಸರ್ಬಿಯಾದ ಬಹುತೇಕ ನಾಗರಿಕರು ದೇಶ ತೊರೆದು ಹೋಗುತ್ತಿದ್ದಾರೆ. ಮತ್ತೊಂದೆಡೆ ಇಲ್ಲಿ ಶಿಶುಗಳ ಜನನ ಪ್ರಮಾಣವೂ ಶೀಘ್ರ ಗತಿಯಲ್ಲಿ ಕುಸಿಯಲಾರಂಭಿಸಿದೆ. ಇಲ್ಲಿ ಸರಾಸರಿ ಪ್ರತಿ ಎರಡು ಕುಟುಂಬಕ್ಕೆ ಮೂರು ಮಕ್ಕಳಿವೆ. ಇದು ಇಡೀ ಯೂರೋಪ್‌ನಲ್ಲೇ ಅತ್ಯಂತ ಕಡಿಮೆ ಎನ್ನಲಾಗಿದೆ. ಇದರಿಂದಾಗಿ ಸರ್ಬಿಯಾದ ಜನಸಂಖ್ಯೆ ಕುಸಿದು 7  ಲಕ್ಷ ಜನಸಂಖ್ಯೆಗೆ ಬಂದು ನಿಂತಿದೆ.

2050ರ ವೇಳೆಗೆ ಸರ್ಬಿಯಾದ ಜನಸಂಖ್ಯೆ ಶೇ. 15ರಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ಕಡಿಮೆ ಮಕ್ಕಳಿಗೆ ಜನ್ಮ ನೀಡುವ ಪ್ರವೃತ್ತಿಯನ್ನು ದೂರ ಮಾಡಲು ಇಲ್ಲಿನ ಸರ್ಕಾರವು ಹಲವಾರು ಆಫರ್ ಗಳನ್ನು ನೀಡಿದೆ. ಕಳೆದ ಜುಲೈನಲ್ಲಿ ಮಕ್ಕಳ ಜನಸಂಖ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಕಡಿಮೆ ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ ಎಂಬ ಪ್ರಕಟಣೆಯನ್ನೂ ಸರ್ಕಾರ ಹೊರಡಿಸಿತ್ತು.

Follow Us:
Download App:
  • android
  • ios