news
By Suvarna Web desk | 09:29 PM March 13, 2018
ರೆಹಮಾನ್ ಖಾನ್ ‘ದಂಡ’ಯಾತ್ರೆ

Highlights

ತಮ್ಮ ಕೆಲ ಹಿಂಬಾಲಕರ ಜೊತೆಗೂಡಿ ಸಿದ್ದರಾಮಯ್ಯ, ಪರಮೇಶ್ವರ್, ಡಿ ಕೆ ಶಿವಕುಮಾರ್ ಅವರ ಕರ್ನಾಟಕ ಭವನದ ರೂಮ್‌ಗಳಿಗೆ ಎಡತಾಕುತ್ತಿದ್ದ ರೆಹಮಾನ್ ಖಾನ್ ಎಷ್ಟೇ ಪ್ರಯತ್ನಪಟ್ಟರೂ ರಾಜ್ಯ ನಾಯಕರು, ಹೈಕಮಾಂಡ್ ಕ್ಯಾರೇ ಅನ್ನಲಿಲ್ಲ.

ಹಿಂದೆ ಜಾಫರ್ ಷರೀಫ್ ವಿರುದ್ಧ ದೆಹಲಿಯಲ್ಲಿ ಬಂಡಾಯ ಹೂಡುವಾಗ ತಾನೇ ಮಜಬೂತಾದ ಮುಸ್ಲಿಂ ನಾಯಕ ಎಂದು ತೋರಿಸಿಕೊಳ್ಳುತ್ತಿದ್ದ ರೆಹಮಾನ್ ಖಾನ್ ಸ್ಥಿತಿ ಈ ಬಾರಿ ರಾಜ್ಯಸಭೆ ಟಿಕೆಟ್ ಲಾಬಿ ವೇಳೆ ಅಯ್ಯೋ ಎನಿಸುವಂತಿತ್ತು. ತಮ್ಮ ಕೆಲ ಹಿಂಬಾಲಕರ ಜೊತೆಗೂಡಿ ಸಿದ್ದರಾಮಯ್ಯ, ಪರಮೇಶ್ವರ್, ಡಿ ಕೆ ಶಿವಕುಮಾರ್ ಅವರ ಕರ್ನಾಟಕ ಭವನದ ರೂಮ್‌ಗಳಿಗೆ ಎಡತಾಕುತ್ತಿದ್ದ ರೆಹಮಾನ್ ಖಾನ್ ಎಷ್ಟೇ ಪ್ರಯತ್ನಪಟ್ಟರೂ ರಾಜ್ಯ ನಾಯಕರು, ಹೈಕಮಾಂಡ್ ಕ್ಯಾರೇ ಅನ್ನಲಿಲ್ಲ. ಕೊನೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಿಂದ ರಾಹುಲ್‌ಗೆ ಪತ್ರ ಬರೆಸಿ, ಸೋನಿಯಾಗೆ ಫೋನ್ ಮಾಡಿಸಿದರೂ ಟಿಕೆಟ್ ದಕ್ಕಲಿಲ್ಲ.

-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ

Show Full Article


Recommended


bottom right ad