Asianet Suvarna News Asianet Suvarna News

ವನ್ಯಜೀವಿ ಸಂರಕ್ಷಿಸಿ ಅಭಿಯಾನ: ತರೀಕೆರೆಯಲ್ಲಿ ಪ್ರಕಾಶ್ ರೈ ಜನಜಾಗೃತಿ

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಜಂಟಿ ಸಹಯೋಗದಲ್ಲಿ,  ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಆಭಯಾರಣ್ಯದಲ್ಲಿ ‘ವನ್ಯಜೀವಿ ಸಂರಕ್ಷಿಸಿ ಅಭಿಯಾನ’ ನಡೆಯಿತು. ಈ ಅಭಿಯಾನದ ರಾಯಭಾರಿಯಾಗಿರುವ ನಟ ಪ್ರಕಾಶ್ ರಾಜ್ ಹಾಗೂ ಚಿತ್ರನಟಿ ಸಂಯುಕ್ತ ಹೊರನಾಡು 2 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಆಭಯಾರಣ್ಯದಲ್ಲಿ  ತಂಗಿದ್ದರು.

Save Wildlife Campaign at Tarikere

ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಜಂಟಿ ಸಹಯೋಗದಲ್ಲಿ,  ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಆಭಯಾರಣ್ಯದಲ್ಲಿ ‘ವನ್ಯಜೀವಿ ಸಂರಕ್ಷಿಸಿ ಅಭಿಯಾನ’ ನಡೆಯಿತು.

ಈ ಅಭಿಯಾನದ ರಾಯಭಾರಿಯಾಗಿರುವ ನಟ ಪ್ರಕಾಶ್ ರಾಜ್ ಹಾಗೂ ಚಿತ್ರನಟಿ ಸಂಯುಕ್ತ ಹೊರನಾಡು 2 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಭದ್ರಾ ಹುಲಿ ಸಂರಕ್ಷಿತ ಆಭಯಾರಣ್ಯದಲ್ಲಿ  ತಂಗಿದ್ದರು.

ಮೊದಲ ದಿನ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜನರಿಗೆ ವನ್ಯ ಜೀವಿಗಳ ಮಹತ್ವ ಕುರಿತು ತಿಳಿಸಿದರು. ಅಲ್ದೆ ವನ್ಯ ಜೀವಿಗಳು ಹಾಗೂ ಮಾನವರ ನಡುವಿನ ಸಂಘರ್ಷದ ಪ್ರದೇಶಗಳಿಗೆ ಭೇಟಿ ನೀಡಿದರು. ನಂತರ ಸಂಜೆ ವೇಳೆಗೆ ಸಫಾರಿಯ ಪ್ರವಾಸ ಮುಗಿಸಿ ಭದ್ರಾ ಹಿನ್ನೀರಿನಲ್ಲಿ ಇರುವ ಬೋಟಿಂಗ್'ನಲ್ಲಿ ಪಾಲ್ಗೊಂಡರು.

ವನ್ಯಜೀವಿ ಸಂರಕ್ಷಿಸಿ ಅಭಿಯಾನದ 2 ನೇ ದಿನ ಪ್ರಕಾಶ್ ರಾಜ್ ಮತ್ತವರ ತಂಡ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಪರಿಸರ ಮತ್ತು ವನ್ಯಜೀವಿಗಳ ಬಗೆಗಿನ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡರು.

ಲಕ್ಕವಳ್ಳಿ ಗ್ರಾಮ ಪಂಚಾಯ್ತಿಗೆ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯ್ತಿ ಎಂಬ ಪ್ರಶಸ್ತಿ ಪ್ರಧಾನ ಹಾಗೂ ಲಕ್ಕವಳ್ಳಿ ಗ್ರಾಮದ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ನಡೆಸಿದ ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ನಟ ಪ್ರಕಾಶ್ ರಾಜ್ ಬಹುಮಾನಗಳನ್ನು ವಿತರಿಸಿದರು.

ವರದಿ: ರಾಜೇಶ್ ಕಾಮತ್

Follow Us:
Download App:
  • android
  • ios