Asianet Suvarna News Asianet Suvarna News

ಈ ಕಾರಣಕ್ಕಾಗಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸಿದ್ರಂತೆ!

'ಅಂಬಿ ನಿಂಗ್ ವಯಸ್ಸಾಯ್ತೋ!' ಅಭಿನಯಿಸುವ ಹೊತ್ತಿಗೆ ಅವರು ಆನಾರೋಗ್ಯದಿಂದಾಗಿ ಅಂಬರೀಶ್ ಸಾಕಷ್ಟು ಆಯಾಸಗೊಂಡಿದ್ದರು. ಹಾಗಾಗಿಯೇ ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದ್ದರು. ಇಷ್ಟಾಗಿಯೂ ಅವರು ಈ ಚಿತ್ರದಲ್ಲಿ ಎರಡು ಕಾರಣಳಿಗೆ ಅಭಿನಯಿಸಿದ್ದರು.

Sandalwood rebel star Ambareesh went in ambulance to watch his last movie
Author
Bangalore, First Published Nov 25, 2018, 10:48 AM IST

ಬಹು ದಿನಗಳ ನಂತರ ಅಂಬರೀಶ್ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ ಚಿತ್ರ 'ಅಂಬಿ ನಿಂಗ್ ವಯಸ್ಸಾಯ್ತೋ!' ಇದು ತಮಿಳಿನ 'ಪವರ್ ಪಾಂಡಿ 'ಚಿತ್ರದ ರಿಮೇಕ್. ಅಂಬರೀಶ್ ಈ ಚಿತ್ರದಲ್ಲಿ ಅಭಿನಯಿಸಲು ಕಾರಣ ಸೂಪರ್ ಸ್ಟಾರ್ ರಜನಿಕಾಂತ್. ಈ ಸಿನಿಮಾದಲ್ಲಿ ಅಭಿನಯಿಸುವ ಹೊತ್ತಿಗೆ ಅವರು ಆನಾರೋಗ್ಯದಿಂದಾಗಿ ಸಾಕಷ್ಟು ಆಯಾಸಗೊಂಡಿದ್ದರು. ಹಾಗಾಗಿಯೇ ಸಾಕಷ್ಟು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದ್ದರು. 

ಇದನ್ನೂ ಓದಿ: ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಆಲ್‌ಮೋಸ್ಟ್‌ ನನ್ನ ಕೊನೆಯ ಚಿತ್ರ ಎಂದಿದ್ದ 'ಜಲೀಲಾ'!

ಇಷ್ಟಾಗಿಯೂ ಅವರು 'ಅಂಬಿ ನಿಂಗ್ ವಯಸ್ಸಾಯ್ತೋ!' ಚಿತ್ರದಲ್ಲಿ ಎರಡು ಕಾರಣಳಿಗೆ ಅಭಿನಯಿಸಿದ್ದರು. ಅದರಲ್ಲಿ ಮೊದಲಿಗಿದ್ದ ಕಾರಣ ನಟ ಸೂಪರ್ ಸ್ಟಾರ್ ರಜನಿಕಾಂತ್. ಎರಡನೇ ಕಾರಣ ನಟ ಕಿಚ್ಚ ಸುದೀಪ್. ತಮಿಳಿನ 'ಪವರ್ ಪಾಂಡಿ' ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದೇವೆ ಅಂದಾಗ ಅದರಲ್ಲಿ ಅಂಬರೀಶ್ ಅವರೇ ಅಭಿನಿಯಿಸಿದರೆ ಚೆಂದ. ಅವರಾದರೆ ಆ ಪಾತ್ರಕ್ಕೆ ನ್ಯಾಯ ಸಿಗುತ್ತದೆ ಅಂತ ರಜನಿಕಾಂತ್ ಸಲಹೆ ಕೊಟ್ಟಿದ್ದರಂತೆ. ರಜನಿಕಾಂತ್ ಮಾತುಗಳಿಂದ ಪ್ರೇರಿತರಾಗಿದ್ದ ಅಂಬರೀಶ್, ಆಯ್ತು ನಾನೇ ಸಿನಿಮಾ ಮಾಡುತ್ತೇನೆ ಅಂತ ನಟ ಕಿಚ್ಚ ಸುದೀಪ್ ಅವರಿಗೆ ಭರವಸೆ ಕೊಟ್ಟಿದ್ದರು.

ಇದನ್ನೂ ಓದಿ: ಅಭಿಮಾನಿಗಳಿಗೆ ಅಂಬಿ ಬರೆದ ಕೊನೆಯ ‘ಭಾವುಕ’ ಪತ್ರ 

ಅಲ್ಲಿಂದಲೇ 'ಅಂಬಿ ನಿಂಗ್ ವಯಸ್ಸಾಯ್ತೋ!' ಶುರುವಾಗಿತ್ತು. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಅಂಬರೀಶ್ ಐದಾರು ಬಾರಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ನಿಗದಿತ ಸಮಯಕ್ಕೆ ಚಿತ್ರದ ಚಿತ್ರೀಕರಣ ಮುಗಿಸಿಕೊಟ್ಟಿದ್ದರು. ಅದು ರಜನಿಕಾಂತ್ ಸಲಹೆಯ ಕಣದಿಂದಲೋ, ಸುದೀಪ್ ಮೇಲಿನ ಪ್ರೀತಿಯಿಂದಲೋ, ಚಿತ್ರದ ನಿರ್ಮಾಣಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದರು. ಸಿನಿಮಾ ಹೀಗಿರಬೇಕು, ಇಂತಿರಬೇಕು ಅಂತಲೂ ಸಲಹೆ ನೀಡಿದ್ದರು. 

ಇದನ್ನೂ ಓದಿ: ’ಜಲೀಲಾ’ ನಿಂದ 'ಭೀಷ್ಮ': 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಬಿ ನಟನೆ!

ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದ್ದ ಸಂದರ್ಭದಲ್ಲಿ ಅಂಬರೀಶ್ ಆಸ್ಪತ್ರೆಗೆ ದಾಖಲಾಗಿದ್ದರು. ರಿಲೀಸ್‌ಗೂ ಎರಡು ದಿನ ಮುಂಚೆ ಕಲಾವಿದರ ಸಂಘದಲ್ಲಿ ಆ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಿಂದ ಆ್ಯಂಬ್ಯುಲೆನ್ಸ್ ಮೂಲಕವೇ ಹೋಗಿ, ಆ ಸಿನಿಮಾ ನೋಡಿ ಬಂದಿದ್ದರು. 15 ವರ್ಷ ನಂತರ ಅವರು ಪೂರ್ಣ ಪ್ರಮಾಣದಲ್ಲಿ ಸಿನಿಮಾ ನೋಡಿದ ಸಂದರ್ಭವೂ ಅದೇ ಆಗಿತ್ತು. ಆ ಸಂದರ್ಭದಲ್ಲಿ ಮಾತನಾಡುತ್ತಾ ಇದು ನನ್ನ ಕಡೆ ಸಿನಿಮಾ ಅಂತ ಹೇಳಿಕೊಂಡು ಭಾವುಕರಾಗಿದ್ದರು. ಕಾಕತಾಳೀಯವೋ ಏನೋ ಅದು ಅವರ ಕಡೆಯ ಸಿನಿಮಾವೇ ಆಗಿ ಹೋಯಿತು.

Follow Us:
Download App:
  • android
  • ios