Asianet Suvarna News Asianet Suvarna News

ಆಮಿತ್ ಶಾ ಪುತ್ರನ ಅವ್ಯವಹಾರ ಪ್ರಕರಣ; ತನ್ನ ನಿಲುವು ಸ್ಪಷ್ಟಪಡಿಸಿದ ಆರ್'ಎಸ್'ಎಸ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಪುತ್ರನ ವಿರುದ್ಧ ಕೇಳಿ ಬಂದಿರುವ ಅವ್ಯವಹಾರ ಆರೋಪಕ್ಕೆ ಆರ್’ಎಸ್’ಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಒಂದು ಆರೋಪಕ್ಕೆ ಸೂಕ್ತ ಪುರಾವೆಗಳಿದ್ದರೆ ಅವರನ್ನು ತನಿಖೆ ನಡೆಸಿ ಎಂದು ಹೇಳಿದೆ.

RSS Makes Its Stand Clear On Amit Shah  Son

ನವದೆಹಲಿ (ಅ.12):  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಪುತ್ರನ ವಿರುದ್ಧ ಕೇಳಿ ಬಂದಿರುವ ಅವ್ಯವಹಾರ ಆರೋಪಕ್ಕೆ ಆರ್’ಎಸ್’ಎಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಒಂದು ಆರೋಪಕ್ಕೆ ಸೂಕ್ತ ಪುರಾವೆಗಳಿದ್ದರೆ ಅವರನ್ನು ತನಿಖೆ ನಡೆಸಿ ಎಂದು ಹೇಳಿದೆ.

ಇಂದು ಭೂಪಾಲ್’ನಲ್ಲಿ ನಡೆದ ಸಭೆಯಲ್ಲಿ ಆರ್’ಎಸ್’ಎಸ್ ಮುಖ್ಯ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಯಾರ ವಿರುದ್ದವೇ ಭ್ರಷ್ಟಾಚಾರ ಆರೋಪ ಕೇಳಿಬಂದರೂ ತನಿಖೆ ನಡೆಸಬೇಕು. ಆದರೆ ಪ್ರಾಥಮಿಕ ತನಿಖೆಯನ್ನು ಭ್ರಷ್ಟಾಚಾರ ಎಸಗಿರುವುದಕ್ಕೆ ಸೂಕ್ತ ಪುರಾವೆಗಳಿರಬೇಕು ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಜಯ್ ಶಾ ಅವರ ಮಾಲಕತ್ವದ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆ ಆರಂಭಗೊಂಡಿದ್ದು 2004ರಲ್ಲಿ. ಜಯ್ ಶಾ ಮತ್ತು ಜಿತೇಂದ್ರ ಶಾ ಅವರು ಈ ಸಂಸ್ಥೆಯ ನಿರ್ದೇಶಕರು. ಕೃಷಿ ಉತ್ಪನ್ನ ಸೇರಿದಂತೆ ಹೋಲ್'ಸೇಲ್ ಆಮದು ಮತ್ತು ರಫ್ತು ನಡೆಸುವುದು ಸಂಸ್ಥೆಯ ವ್ಯವಹಾರ. 2013-14ರವರೆಗೂ ಟೆಂಪಲ್ ಎಂಟರ್'ಪ್ರೈಸ್ ಸಂಸ್ಥೆಗೆ ಯಾವುದೇ ಸ್ಥಿರಾಸ್ತಿ ಇರಲಿಲ್ಲ. 2013 ಮತ್ತು 2014ರ ಹಣಕಾಸು ವರ್ಷಗಳಲ್ಲಿ ಸಂಸ್ಥೆಯು 6,230 ಮತ್ತು 1,724 ರೂಪಾಯಿ ನಷ್ಟ ಕೂಡ ಅನುಭವಿಸಿತ್ತು. 2014-15ರ ವರ್ಷದಲ್ಲಿ ಅದರ ಆದಾಯವು 50 ಸಾವಿರ ರೂಪಾಯಿ ಇತ್ತು. ಆದರೆ, 2015-16ರ ವರ್ಷದಲ್ಲಿ ಆದಾಯ ಪ್ರಮಾಣ ಏಕ್'ದಂ 80.5 ಕೋಟಿ ರೂಪಾಯಿಗೆ ಏರಿಕೆಯಾಯಿತು. ಹೆಚ್ಚೂಕಡಿಮೆ 16 ಸಾವಿರ ಪಟ್ಟು ದಿಢೀರ್ ಏರಿಕೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ.

Follow Us:
Download App:
  • android
  • ios