Asianet Suvarna News Asianet Suvarna News

ದೇಶದ ಜಿಡಿಪಿಯ ಶೇ.15 ಪಾಲು ಶತಕೋಟ್ಯಧೀಶ್ವರರ ಬಳಿ

ಭಾರತದಲ್ಲಿ ಬಡವರು ಬಡವರಾಗಿಯೇ ಹೋಗುತ್ತಿದ್ದಾರೆ. ಆದರೆ ಶ್ರೀಮಂತರ ಸಂಪತ್ತು ಅಧಿಕವಾಗುತ್ತಿದೆ. ಜಿಡಿಪಿಯ ಶೇ.15ರಷ್ಟುಸಂಪತ್ತು ದೇಶದ ಶತಕೋಟ್ಯಧೀಶ್ವರರರ ಬಳಿ ಇದೆ ಎಂದು ‘ಆಕ್ಸ್‌ಫಾಮ್‌ ಇಂಡಿಯಾ’ ಎಂಬ ಸಂಸ್ಥೆಯ ವರದಿ ಆತಂಕ ವ್ಯಕ್ತಪಡಿಸಿದೆ. 2017ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 101 ಶತಕೋಟ್ಯಧೀಶ್ವರರು ಇದ್ದಾರೆ.

Rich people of India shares 15 Percent of Indias GDP

ನವದೆಹಲಿ : ಭಾರತದಲ್ಲಿ ಬಡವರು ಬಡವರಾಗಿಯೇ ಹೋಗುತ್ತಿದ್ದಾರೆ. ಆದರೆ ಶ್ರೀಮಂತರ ಸಂಪತ್ತು ಅಧಿಕವಾಗುತ್ತಿದೆ. ಜಿಡಿಪಿಯ ಶೇ.15ರಷ್ಟುಸಂಪತ್ತು ದೇಶದ ಶತಕೋಟ್ಯಧೀಶ್ವರರರ ಬಳಿ ಇದೆ ಎಂದು ‘ಆಕ್ಸ್‌ಫಾಮ್‌ ಇಂಡಿಯಾ’ ಎಂಬ ಸಂಸ್ಥೆಯ ವರದಿ ಆತಂಕ ವ್ಯಕ್ತಪಡಿಸಿದೆ. 2017ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 101 ಶತಕೋಟ್ಯಧೀಶ್ವರರು ಇದ್ದಾರೆ.

‘ಶಠಿತೋಟ್ಯಧಿಪತಿಗಳು ಬಹುತೇಕ ಸಂಪತ್ತಿನ ಪಾಲನ್ನು ತಮ್ಮ ಬಳಿಯೇ ಕೂಡಿಟ್ಟುಕೊಂಡಿದ್ದಾರೆ. ಅವರು ‘ಸ್ನೇಹಿ ಬಂಡವಾಳಶಾಹಿತ್ವ’ ಹಾಗೂ ಆನುವಂಶಿಕ ಆಸ್ತಿಪಾಸ್ತಿಗಳಿಂದ ಶ್ರೀಮಂತರಾಗುತ್ತಲೇ ಸಾಗುತ್ತಿದ್ದಾರೆ. ಆದರೆ ಕೆಳಮಟ್ಟದ ಜನರು ತಮ್ಮ ಪಾಲು ಕುಸಿಯುತ್ತಿರುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದಾರೆ. 1991ರಲ್ಲಿ ಅಳವಡಿಸಿಕೊಂಡ ದೊಡ್ಡ ಪ್ರಮಾಣದ ಆರ್ಥಿಕ ಉದಾರೀಕರಣ ಹಾಗೂ ಅದಾದ ನಂತರದ ನೀತಿಗಳ ಪರಿಣಾಮ ಇದಾಗಿದೆ’ ಎಂದು ವರದಿ ಹೇಳಿದೆ.

5 ವರ್ಷದ ಹಿಂದೆ ಶತಕೋಟ್ಯಧೀಶರು ದೇಶದ ಜಿಡಿಪಿಯಲ್ಲಿ ಶೇ.10ರಷ್ಟುಪಾಲು ಹೊಂದಿದ್ದರು. ಅದು ಐದೇ ವರ್ಷದಲ್ಲಿ ಶೇ.5ರಷ್ಟುಏರಿ ಶೇ.15ಕ್ಕೆ ಹೆಚ್ಚಿದೆ. 2017ರಲ್ಲಿ ಭಾರತದ ಶೇ.1ರಷ್ಟುಧನಿಕರ ಬಳಿಯ ಸಂಪತ್ತು 20.9 ಲಕ್ಷ ಕೋಟಿ ರುಪಾಯಿಗಳಷ್ಟುಹೆಚ್ಚಿದೆ. ಇದೇ ವೇಳೆ 67 ಕೋಟಿ ಬಡ ಭಾರತೀಯರ ಸಂಪತ್ತು ಕೇವಲ ಶೇ.1ರಷ್ಟುಏರಿದೆ.

 

Follow Us:
Download App:
  • android
  • ios