Asianet Suvarna News Asianet Suvarna News

ಮಂಡ್ಯಕ್ಕೆ ರಮ್ಯಾ ಬೈ ಬೈ!

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಮಾಜಿ ಸಂಸದೆ ರಮ್ಯಾ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತದಾನ ಮಾಡದೆ ಸುದ್ದಿಯಾಗಿದ್ದರು. ಇದೀಗ ಜಿಲ್ಲೆಯೊಂದಿಗಿನ ಸಂಬಂಧದ ಕೊಂಡಿಯನ್ನೂ ಕಳಚಿಕೊಳ್ಳುವ ಮೂಲಕ ಇಲ್ಲಿಂದ ದೂರ ಸರಿಯುವ ಲಕ್ಷಣಗಳು ಸ್ಪಷ್ಟವಾಗಿವೆ.

Ramya Goodbye To Mandya
Author
Bengaluru, First Published Dec 4, 2018, 7:29 AM IST

ಮಂಡ್ಯ :  ಚಿತ್ರತಾರೆ, ಮಾಜಿ ಸಂಸದ ಅಂಬರೀಷ್‌ ನಿಧನರಾದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಬಾರದೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ ಇದೀಗ ಮಂಡ್ಯದಲ್ಲಿದ್ದ ಬಾಡಿಗೆ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿಕೊಂಡು ಹೋಗಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಅವರು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮತದಾನ ಮಾಡದೆ ಸುದ್ದಿಯಾಗಿದ್ದರು. ಇದೀಗ ಜಿಲ್ಲೆಯೊಂದಿಗಿನ ಸಂಬಂಧದ ಕೊಂಡಿಯನ್ನೂ ಕಳಚಿಕೊಳ್ಳುವ ಮೂಲಕ ಇಲ್ಲಿಂದ ದೂರ ಸರಿಯುವ ಲಕ್ಷಣಗಳು ಸ್ಪಷ್ಟವಾಗಿವೆ.

ಭಾನುವಾರ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಬಾಡಿಗೆ ನಿವಾಸಕ್ಕೆ ಬಂದ ಎರಡು ಲಾರಿಗಳಿಗೆ, ಮನೆಯಲ್ಲಿದ್ದ ವಸ್ತುಗಳನ್ನು ತುಂಬುತ್ತಿರುವ ದೃಶ್ಯಗಳನ್ನು ನೋಡಿದ ಜನರು ಅಲ್ಲಿ ಜಮಾಯಿಸಿದರು. ಆಗ ರಮ್ಯಾ ಮನೆ ಖಾಲಿ ಮಾಡುವ ವಿಷಯ ತಿಳಿಯಿತು. ಆದರೆ ಆಕೆ ಬಂದಿರಲಿಲ್ಲ. ವಸ್ತುಗಳನ್ನು ಸಾಗಿಸುವ ಗುತ್ತಿಗೆದಾರ ಕಂಪನಿ ಭದ್ರತಾ ಸಾಮಾನುಗಳನ್ನು ತುಂಬಿಕೊಂಡು ಹೋದರು. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಪೊಲೀಸ್‌ ಭದ್ರತೆ ಪಡೆಯಲಾಗಿತ್ತು.

ಗೆದ್ದಾಗ ಮನೆ ಮಾಡಿದರು: 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ರಮ್ಯಾ ನಗರದಲ್ಲಿ ಮನೆ ಮಾಡಿದ್ದರು. ಅಷ್ಟೇ ಏಕೆ ಇಲ್ಲಿ ಮತದಾನ ಮಾಡುವ ಅವಕಾಶ ಮಾಡಿಕೊಂಡು ಜನರನ್ನು ನಂಬಿಸಿದರು. ಆದರೆ ಒಂದು ಬಾರಿ ಬಂದು ಮತ ಹಾಕಲಿಲ್ಲ. ನಾನೀಗ ಮಂಡ್ಯದಲ್ಲೇ ಮನೆ ಮಾಡಿದ್ದೇನೆ. ಇಲ್ಲಿನ ಎಲ್ಲಾ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು.

ನೋಟ್‌ ಬ್ಯಾನ್‌ ವೇಳೆ ವಿಫಲ ಅಭಿಯಾನ: 2014ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ ಬೆಂಗಳೂರಿಗೆ ಹೋದರು. ಬಳಿಕ ವರ್ಷಗಟ್ಟಲೆ ಇತ್ತ ತಿರುಗಿಯೂ ನೋಡಲಿಲ್ಲ. 2016ರ ನವೆಂಬರ್‌ನಲ್ಲಿ ನೋಟ್‌ಬ್ಯಾನ್‌ ಆದ ನಂತರ ಪ್ರಚಾರಕ್ಕಾಗಿ ಮಂಡ್ಯದಲ್ಲಿ ಸಾಕಷ್ಟುಅಭಿಯಾನ ಮಾಡಿ ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡಿ ವಿಫಲವಾದರು.

ಈ ಪ್ರಯತ್ನ ವಿಫಲರಾದಾಗ ಇಂಗ್ಲೆಂಡ್‌ನಲ್ಲಿ ರಾಜಕೀಯ ಶಾಸ್ತ್ರ ಅಭ್ಯಾಸ ಮಾಡಿ ಬಂದ ಮಂಡ್ಯದಲ್ಲಿ ರಾಜಕೀಯ ಮಾಡುವ ಆಶಯದಿಂದ ರಮ್ಯಾ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದರು. ಒಂದು ವರ್ಷಗಳ ನಂತರ ಈಗ ವಿದ್ಯಾಭ್ಯಾಸ ಮುಗಿಸಿ ವಾಪಸ್‌ ಬಂದಿದ್ದೇನೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಮನೆಯ ವಾಸ್ತು ಬದಲಾಯಿಸಿಕೊಂಡು ಮನೆಗೆ ಸೇರಿಕೊಂಡರು. ಕೆಲವರು ಖರೀದಿ ಮಾಡದರು ಎಂದು ಸುದ್ದಿ ಹಬ್ಬಿಸಿದರು. ಆದರೆ ಮನೆಯ ಮಾಲೀಕ ಸಾದತ್‌ ಅಲಿ ಖಾನ್‌ ನಾನೇಕೆ ಮನೆ ಮಾರಾಟ ಮಾಡಲಿ. ನನಗೆ 45 ಸಾವಿರ ರು. ಬಾಡಿಗೆ ಬರುತ್ತಿದೆ ಎಂದು ಹೇಳಿದರು. ಆದರೆ ಒಂದು ಬಾರಿಯೂ ಈ ಮನೆಯಲ್ಲಿ ವಾಸ ಮಾಡಿ ಜನರ ಕಷ್ಟಸುಖ ವಿಚಾರಿಸಲಿಲ್ಲ. ಬಾಡಿಗೆದಾರ ಮತ್ತು ಸೆಕ್ಯೂರಿಟಿಗಳು ಮಾತ್ರ ಸಂಬಳ ಪಡೆದು ಸಂತೃಪ್ತರಾಗಿದ್ದರು.

ಭವಿಷ್ಯದ ಲೆಕ್ಕಾಚಾರ: ಟಿಕೆಟ್‌ ಸಂದ2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾಗೆ ಮೈತ್ರಿಯಿಂದ ಭಗ್ನವಾದಂತಾಗಿದೆ. ಮೈತ್ರಿ ಮುಂದುವರಿದರೆ ಕಾಂಗ್ರೆಸ್‌ಗೆ ಮುಂದಿನ ಮಂಡ್ಯಲೋಕಸಭಾ ಟಿಕೆಟ್‌ ಸಿಗುವುದು ಅನುಮಾನವೇ ಸರಿ. ಆಗ ಅನಿವಾರ್ಯವಾಗಿ ಮನೆ ಖಾಲಿ ಮಾಡುವ ಬದಲು ಈಗಲೇ ಖಾಲಿ ಮಾಡುವುದು ಲೇಸು ಎಂದು ತಿಳಿದ ರಮ್ಯಾ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ರಮ್ಯಾಗೆ ರಾಜಕೀಯ ನೆಲೆ ಕಷ್ಟ. ಬೆಲೆಯೂ ಇಲ್ಲದಂತಾಗಿದೆ. ಒಟ್ಟಾರೆ ರಮ್ಯಾ ಪಾಲಿಗೆ ಇನ್ನು ಮುಂದೆ ಮಂಡ್ಯದ ರಾಜಕೀಯ ಬಾಗಿಲು ಮುಚ್ಚಿದಂತೆ ಆಯಿತು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

Follow Us:
Download App:
  • android
  • ios