Asianet Suvarna News Asianet Suvarna News

ಮೇಲ್ಜಾತಿ ಮಸೂದೆ ಮೇಲ್ಮನೆಯಲ್ಲೂ ಪಾಸ್, ಕಾನೂನಿಗೆ ಇನ್ನೊಂದೇ ಮೆಟ್ಟಿಲು

ಮೇಲ್ಜಾತಿ ಮೀಸಲಾತಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಈ ಮಸೂದೆ ಕಾನೂನಾಗಲು ಕಾನೂನಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇದೆ.

Rajya Sabha passes Reservation Bill granting 10% quota for upper caste
Author
Bengaluru, First Published Jan 9, 2019, 10:55 PM IST

ನವದೆಹಲಿ, [ಜ.09]: ತೀವ್ರ ವಿರೋಧದ ನಡುವೆ ರಾಜ್ಯಸಭೆಯಲ್ಲಿ ಮೇಲ್ವರ್ಗದ ಮೀಸಲು ಐತಿಹಾಸಿಕ ಮಸೂದೆ  ಅಂಗೀಕಾರವಾಗಿದೆ. 

ಇಂದು [ಬುಧವಾರ] ರಾತ್ರಿ ರಾಜ್ಯಸಭಾ ಕಲಾಪದಲ್ಲಿ ಈ ವಿಧೇಯಕವನ್ನ ಮಂಡನೆ ಮಾಡಲಾಗಿತ್ತು. ಸುದೀರ್ಘ ಚರ್ಚೆಯ ಬಳಿಕ ವೋಟಿಂಗ್ ಪ್ರಕ್ರಿಯೆ ನಡೆಯಿತು. 

ಮೇಲ್ವರ್ಗ ಮೀಸಲಾತಿ ಪಡೆಯಲು 3 ಮಾನದಂಡಗಳು, ಯಾರಿಗೆ ಲಾಭ? ಇಲ್ಲಿದೆ ಮಾಹಿತಿ

ಬಿಲ್ ಪರ ಹೆಚ್ಚು ಮತಗಳು ಬೀಳುವ ಮೂಲಕ ರಾಜ್ಯಸಭೆಯಲ್ಲಿಯೂ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ಬಿಲ್ ಪಾಸ್​ ಆಗಿದೆ. 

ಮಸೂದೆಯನ್ನು ಸಂಸದೀಯ ಸಮಿತಿ ಪರಾಮರ್ಶೆಗೆ ಕಳುಹಿಸಿಬೇಕು ಎಂಬ ವಿಪಕ್ಷಗಳು ಮಂಡಿಸಿದ್ದ ಕೋರಿಕೆಗೆ ಸೋಲುಂಟಾಯಿತು. 

ಮೇಲ್ವರ್ಗಕ್ಕೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲು!

ವಿಪಕ್ಷಗಳ ಈ ಕೋರಿಕೆಯ ವಿರುದ್ಧ 155 ಮತಗಳು ಮತ್ತು ಪರ 18 ಮತಗಳು ಚಲಾವಣೆಯಾಗುವ ಮೂಲಕ ಮೇಲ್ಜಾತಿಯವರಿಗೆ ಮೀಸಲಾತಿ ನೀಡುವ ಬಿಲ್ ಪಾಸ್​ ಆಗಿದೆ.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಉದ್ಯೋಗ ಹಾಗೂ ಶಿಕ್ಷಣದ ಮೇಲಿನ ಮೀಸಲಾತಿ ಶೇ.10 ರಷ್ಟು  ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ವಾರ್ಷಿಕ ಆದಾಯ  8 ಲಕ್ಷಕ್ಕಿಂತ ಕಡಿಮೆ ಇರೋರಿಗೆ ಅನ್ವಯವಾಗಲಿದೆ.

Follow Us:
Download App:
  • android
  • ios