Asianet Suvarna News Asianet Suvarna News

ರಜನಿಕಾಂತ್ ಕಮಲ ವೇದಿಕೆ ಸಿದ್ಧ ; ಇಲ್ಲಿದೆ ಇಂಟರೆಸ್ಟಿಂಗ್ ರಿಪೋರ್ಟ್

ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಂದು ಬಾರಿ ಪ್ರಧಾನಿಯಾಗಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಆದರೆ ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಹವಾ ಅಷ್ಟಿಲ್ಲ. ಹೀಗಾಗಿಯೇ ಬಿಜೆಪಿ ಈ ಭಾಗದ ದಿಗ್ಗಜ ನಾಯಕರನ್ನು ಪಕ್ಷ ಸೆಳೆದು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಪ್ಲಾನ್ ಮಾಡುತ್ತಿದೆ

Rajinikanth Holds Flurry Of Meetings With BJP In Delhi As Speculation Over Political Merger Intensifies
Author
Bengaluru, First Published Sep 7, 2018, 7:51 PM IST

ಚೆನ್ನೈ[ಸೆ.07]: ರಜನಿಕಾಂತ್.. ಅಭಿಮಾನಿಗಳ ಪಾಲಿನ ಸೂಪರ್ ಸ್ಟಾರ್. ಭಾರತದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಅಭಿಮಾನಿಗಳ ಹೊಂದಿರುವ ನಟ.. ರಜನಿಕಾಂತ್ ಯಾವಾಗ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ. ಯಾವ ಪಕ್ಷದಿಂದ ರಾಜಕೀಯ ಜೀವನ ಆರಂಭಿಸ್ತಾರೆ. ಇಲ್ಲವೇ ತಮ್ಮದೇ ಪಾರ್ಟಿ ಘೋಷಣೆ ಮಾಡ್ತಾರೆ.. ಹೀಗೆ ಹಲವು ಪ್ರಶ್ನೆಗಳು ರಾಜಕೀಯ ರಂಗದಲ್ಲಿ ಚರ್ಚೆಯಾಗುತ್ತಿದೆ. ಇದೆಲ್ಲದರ ಮಧ್ಯೆಯೇ ತಲೈವಾ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಜೊತೆ ಸರಣಿ ಸಭೆ ನಡೆಸಿರುವುದು ದಕ್ಷಿಣಭಾರತದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿ ದಿಗ್ಗಜರನ್ನು ಭೇಟಿ ಮಾಡಿದ ಸೂಪರ್ ಸ್ಟಾರ್
ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಂದು ಬಾರಿ ಪ್ರಧಾನಿಯಾಗಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ಆದರೆ ಉತ್ತರಭಾರತಕ್ಕೆ ಹೋಲಿಸಿದರೆ ದಕ್ಷಿಣಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಹವಾ ಅಷ್ಟಿಲ್ಲ. ಹೀಗಾಗಿಯೇ ಬಿಜೆಪಿ ಈ ಭಾಗದ ದಿಗ್ಗಜ ನಾಯಕರನ್ನು ಪಕ್ಷ ಸೆಳೆದು ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಪ್ಲಾನ್ ಮಾಡುತ್ತಿದೆ. ಇತ್ತೀಚೆಗೆ ಮಲಯಾಳಂ ಸೂಪರ್ ಸ್ಟಾರ್  ಮೋಹನ್ ಲಾಲ್ ಪ್ರಧಾನಿ ಮೋದಿ ಭೇಟಿ ನಂತರ, ತಮಿಳು ಸೂಪರಸ್ಟಾರ್ ರಜನಿಕಾಂತ್ ದೆಹಲಿಯಲ್ಲಿ ಬಿಜೆಪಿ ನಾಯಕರ ಭೇಟಿ ಭಾರಿ ಚರ್ಚೆಗೆ ಕಾರಣವಾಗಿದೆ.

5 ದಿನದಲ್ಲಿ 7 ಬಾರಿ ಸಭೆ
ರಜನಿ  ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರ ಜೊತೆ ಸತತ 5 ದಿನದಲ್ಲಿ 7 ಸರಣಿ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ರಜನಿಕಾಂತ್ ರಾಜಕೀಯ ಪ್ರವೇಶದ ಘೋಷಣೆ ಮಾಡಿದರು. ಆದರೆ ಇನ್ನೂ ಪಕ್ಷ ಘೋಷಣೆ ಮಾಡಿಲ್ಲ. ಈ ಬೆನ್ನಲ್ಲೇ ಬಿಜೆಪಿ ದೆಹಲಿ ನಾಯಕರ ಭೇಟಿ ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸಿದೆ. ಮುಂದಿನ ದಿನಗಳಲ್ಲಿ ರಜನಿಕಾಂತ್ ಪಾರ್ಟಿ ಘೋಷಣೆ ಮಾಡಿದರೂ, ಬಿಜೆಪಿ ಜೊತೆ ಪಕ್ಷ ವಿಲೀನಗೊಳಿಸಿ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳ ಮತಕ್ಕೆ ಕಮಲ ಸ್ಕೆಚ್
ರಜನಿಕಾಂತ್ ಬಿಜೆಪಿ ಸೇರಿದರೆ ದಕ್ಷಿಣ ಭಾರತದಲ್ಲಿ ಪ್ರಚಾರ ನಡೆಸುವ ಮೂಲಕ ಅಭಿಮಾನಿಗಳ ಮತ ಸೆಳೆಯಲು ಅನುಕೂಲ ಎಂಬುದು ಬಿಜೆಪಿ ಲೆಕ್ಕಾಚಾರ. ಇನ್ನೊಂದೆಡೆ ಪ್ರಧಾನಿ ಮೋದಿಯನ್ನು ಇತ್ತೀಚೆಗೆ ಸೂಪರ್ ಸ್ಟಾರ್ ಮೋಹನಲಾಲ್ ಭೇಟಿ ಮಾಡಿದ್ದರು. ಮುಂದಿನ ಲೋಕಸಭೆಯಲ್ಲಿ ಶಶಿ ತರೂರ್ ವಿರುದ್ಧ ತಿರುವಂತನಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಇದರ ನಡುವೆ ಆರ್ ಎಸ್ ಎಸ್ ಕೂಡ ಈ ಇಬ್ಬರು ದಿಗ್ಗಜ ನಾಯಕರನ್ನು ಸೆಳೆಯಲು ಮುಂದಾಗಿದೆ ಎನ್ನುತ್ತಿವೆ ರಾಜಕೀಯ ಮೂಲಗಳು. ಒಟ್ಟಿನಲ್ಲಿ ತಮಿಳುನಾಡು- ಕೇರಳ ಪಾರುಪತ್ಯಕ್ಕೆ ಬಿಜೆಪಿಯ ಇಬ್ಬರು ಸೂಪರ್  ಸ್ಟಾರ್ ಗಳನ್ನು ಸೆಳೆಯಲು ಮುಂದಾಗಿರುವುದು ರಾಜಕೀಯವಾಗಿ ಭಾರಿ ಕುತೂಹಲ ಮೂಡಿಸಿದೆ.
 

Follow Us:
Download App:
  • android
  • ios