Asianet Suvarna News Asianet Suvarna News

ರಾಜರಥ ಚಿತ್ರದ ಪೋಸ್ಟರ್ ಅಸಲಿಯೋ, ನಕಲಿಯೋ?

ಎರಡು ಬೇರೆ ಬೇರೆ ಚಿತ್ರಗಳು, ಬೇರೆ ಬೇರೆ ನಿರ್ದೇಶಕರು. ಆದರೂ ಪೋಸ್ಟರ್ ಒಂದೇ ರೀತಿ ಇದೆ. ಈ ಪವಾಡ ಹೇಗೆ ಸಾಧ್ಯವಾಯಿತು? ಇಲ್ಲಿ ಯಾರು ನಕಲಿ, ಯಾರು ಅಸಲಿ?

Rajaratha poster controversy

ಎರಡು ಪೋಸ್ಟರು. ಎರಡು ಸಿನಿಮಾ. ಆದರೆ ನೋಡೋದಕ್ಕೆ ಒಂದೇ ಥರ. ಈ ಕಡೆ ಪವನ್ ಕಲ್ಯಾಣ್ ನಟನೆಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರ. ಇದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ಟಾಲಿವುಡ್ ಪವರ್ ಸ್ಟಾರ್‌ನ 25ನೇ ಸಿನಿಮಾ. ಮತ್ತೊಂದು ಕಡೆ ಆರ್ಯ ಇದ್ದಾರೆ. ಕಾಲಿವುಡ್‌ನ ಈ ಹೀರೋ ಕಾಣಿಸಿಕೊಂಡಿರುವ ಪೋಸ್ಟರ್ ಕನ್ನಡದ ‘ರಾಜರಥ’ ಚಿತ್ರದ್ದು. ಎರಡು ಬೇರೆ ಬೇರೆ ಚಿತ್ರಗಳು, ಬೇರೆ ಬೇರೆ ನಿರ್ದೇಶಕರು. ಆದರೂ ಪೋಸ್ಟರ್ ಒಂದೇ ರೀತಿ ಇದೆ.

ಈ ಪವಾಡ ಹೇಗೆ ಸಾಧ್ಯವಾಯಿತು? ಇಲ್ಲಿ ಯಾರು ನಕಲಿ, ಯಾರು ಅಸಲಿ? ಪವನ್ ಕಲ್ಯಾಣ್ ಇರುವ ಪೋಸ್ಟರ್ ಇದೇ ತಿಂಗಳು 15ಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಇದೇ ಅಕ್ಟೋಬರ್ 17ಕ್ಕೆ ಆರ್ಯ ಇರುವ ‘ರಾಜರಥ’ ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

Follow Us:
Download App:
  • android
  • ios