Asianet Suvarna News Asianet Suvarna News

ವರುಣನ ಆರ್ಭಟಕ್ಕೆ ಹೈನುಗಾರಿಕೆ ತತ್ತರ: ಚಾಮರಾಜನಗರ ಹಾಲು ಒಕ್ಕೂಟಕ್ಕೆ ಭಾರೀ ನಷ್ಟ

ರಾಜ್ಯದಲ್ಲಿ ಸುರಿಯುತ್ತಿರೋ ಎಡೆಬಿಡದೆ ಮಳೆ ಮಾಡಿರುವ ಅನಾಹುತ ಒಂದೆರೆಡಲ್ಲ. ಹೈನುಗಾರಿಕೆ ಉದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿರೋ ವರುಣ ಇನ್ನೊಂದೆಡೆ ಹಾಲು ಒಕ್ಕೂಟದ ಮಾಲೀಕರಿಗೆ ಕಣ್ಣೀರು ತರಿಸಿದೆ. ಅರೇ ಮಳೆಗೂ, ಹಾಲು ಒಕ್ಕೂಟಕ್ಕೂ ಅದೇನು ಸಂಬಂಧ ಅಂತೀರಾ ಇಲ್ಲಿದೆ ನೋಡಿ ವಿವರ.

Rain effect on Milk Production

ಬೆಂಗಳೂರು(ಅ.19): ರಾಜ್ಯದಲ್ಲಿ ಸುರಿಯುತ್ತಿರೋ ಎಡೆಬಿಡದೆ ಮಳೆ ಮಾಡಿರುವ ಅನಾಹುತ ಒಂದೆರೆಡಲ್ಲ. ಹೈನುಗಾರಿಕೆ ಉದ್ಯಮಕ್ಕೂ ಭಾರೀ ಹೊಡೆತ ನೀಡಿದೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿರೋ ವರುಣ ಇನ್ನೊಂದೆಡೆ ಹಾಲು ಒಕ್ಕೂಟದ ಮಾಲೀಕರಿಗೆ ಕಣ್ಣೀರು ತರಿಸಿದೆ. ಅರೇ ಮಳೆಗೂ, ಹಾಲು ಒಕ್ಕೂಟಕ್ಕೂ ಅದೇನು ಸಂಬಂಧ ಅಂತೀರಾ ಇಲ್ಲಿದೆ ನೋಡಿ ವಿವರ.

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ ಚಾಮರಾಜನಗರ ಹಾಲು ಒಕ್ಕೂಟಕ್ಕೆ ಭಾರೀ ನಷ್ಟು ಉಂಟು ಮಾಡಿದ್ದಾನೆ. ಸಮೃದ್ಧ ಮಳೆಯಿಂದ ದನಕರುಗಳಿಗೆ ಒಳ್ಳೆ ಮೇವು ಸಿಕ್ಕಿದೆ. ಇದರಿಂದ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದ್ದುಲಕ್ಷಾಂತರ ಲೀಟರ್ ಒಕ್ಕೂಟಕ್ಕೆ ಬರುತ್ತಿದೆ. ಇದು ಹಾಲಿನ ಬೇಡಿಕೆಯ್ನು ತಗ್ಗಿಸಿದೆ. ಪರಿಣಾಮ ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 45 ಕೋಟಿ ನಷ್ಟವಾಗಿದೆ.

ಬೇಡಿಕೆ ಕಡಿಮೆ ಹಿನ್ನೆಲೆ ರೈತರಿಗೆ ನೀಡುತ್ತಿದ್ದ ಹಾಲಿನ ದರವನ್ನೂ 2 ರುಪಾಯಿ 50ಪೈಸೆ ಇಳಿಕೆ ಮಾಡಲಾಗಿದೆ. ಅದರಿಂದಲೂ ಆದಾಯ ಬರುತ್ತಿಲ್ಲ. ಹೊರ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಹಾಲಿನ ಬೇಡಿಕೆ ಕಡಿಮೆ ಆಗಿರೋದು ನಷ್ಟಕ್ಕೆ ಕಾರಣವಾಗಿದೆ.

ಒಟ್ಟಾರೆ ಮಳೆ ಹೆಚ್ಚಾಗಿ ಹಸುಗಳಿಗೆ  ಮೇವು ಸಿಕ್ಕಿರುವುದು ರೈತರಿಗೆ ಖುಷಿ ತಂದಿದೆ. ಆದರೆ ಒಕ್ಕೂಟಕ್ಕೆ ಹೊರೆಯಾಗಿ ಪರಿಣಮಿಸಿರೋದು ಮಾತ್ರ ವಿಪರ್ಯಾಸ.

Follow Us:
Download App:
  • android
  • ios