Asianet Suvarna News Asianet Suvarna News

ರೈಲ್ವೆಯಲ್ಲಿ 90,000 ಹುದ್ದೆಗೆ ಅರ್ಜಿ ಅಹ್ವಾನ: ವಿಶ್ವದಲ್ಲೇ ಅತಿ ದೊಡ್ಡ ನೇಮಕಾತಿ!

ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ.

Railway Recruitment 2018 Over 90000 Jobs in Indian Railways
Author
Bengaluru, First Published Feb 16, 2018, 9:03 AM IST

ನವದೆಹಲಿ: ಭಾರತೀಯ ರೈಲ್ವೆ ದೇಶಾದ್ಯಂತ ಖಾಲಿ ಇರುವ ವಿವಿಧ ದರ್ಜೆಯ 89,409 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಉದ್ಯೋಗ ನೇಮಕಾತಿ ಪ್ರಕ್ರಿಯೆ ಎಂದು ರೈಲ್ವೆ ಹೇಳಿಕೊಂಡಿದೆ. 18-31ರ ವಯೋಮಿತಿಯ, 19900- 63200 ರು. ವೇತನ ಹೊಂದಿರುವ ವಿವಿಧ ಹುದ್ದೆಗಳಿಗೆ 2018ರ ಮಾ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಲೋಕೋಪೈಲಟ್‌, ಫಿಟ್ಟರ್‌, ತಾಂತ್ರಿಕ ಸಿಬ್ಬಂದಿ, ಕಾರ್ಪೆಂಟರ್‌, ಹೆಲ್ಪರ್‌, ಗೇಟ್‌ಮೆನ್‌ ಸೇರಿದಂತೆ ವಿವಿಧ ಹುದ್ದೆಯ ಮಾಹಿತಿಯನ್ನು, ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

Follow Us:
Download App:
  • android
  • ios