Asianet Suvarna News Asianet Suvarna News

ಹೆಚ್ಚಾಗ್ತಿದ್ದಾರೆ ರಾಹುಲ್ ಟ್ವಿಟ್ಟರ್ ಫಾಲೋವರ್ಸ್!: ಸೋಷಿಯಲ್ ಮಿಡಿಯಾಗಳಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಕುಂಠಿತ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್​ ಗಾಂಧಿ ಹವಾ ಜೋರಾಗ್ತಿದೆ. ದಿನದಿಂದ ದಿನಕ್ಕೆ ರಾಹುಲ್​ ಟ್ವಿಟ್ಟರ್​ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದ್ದು ಪ್ರಧಾನಿ ಮೋದಿ ವರ್ಚಸ್ಸು ಕುಂಠಿತವಾಗುತ್ತಿದೆ. ಅದರಲ್ಲೂ ನಟಿ ರಮ್ಯಾ ಕಾಂಗ್ರೆಸ್ ಜಾಲತಾಣದ ಜವಾಬ್ದಾರಿ ವಹಿಸಿಕೊಂಡ ಬಳಿಕವಂತೂ ರಾಹುಲ್​ ಗಾಂಧಿ ಫುಲ್​ ಫೇಮಸ್​ ಆಗಿದ್ದಾರೆ. ಎಷ್ಟರ ಮಟ್ಟಿದೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್, ಮೋದಿಯನ್ನೂ ಹಿಂದಿಕ್ಕುತ್ತಾರಾ ಅನ್ನೋ ಡೌಟು ಶುರುವಾಗಿದೆ.

Rahul Gandhis Followers are increasing in twitter

ನವದೆಹಲಿ(ಅ.19): ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್​ ಗಾಂಧಿ ಹವಾ ಜೋರಾಗ್ತಿದೆ. ದಿನದಿಂದ ದಿನಕ್ಕೆ ರಾಹುಲ್​ ಟ್ವಿಟ್ಟರ್​ ಫಾಲೋವರ್ಸ್ ಸಂಖ್ಯೆ ಹೆಚ್ಚಾಗ್ತಿದ್ದು ಪ್ರಧಾನಿ ಮೋದಿ ವರ್ಚಸ್ಸು ಕುಂಠಿತವಾಗುತ್ತಿದೆ. ಅದರಲ್ಲೂ ನಟಿ ರಮ್ಯಾ ಕಾಂಗ್ರೆಸ್ ಜಾಲತಾಣದ ಜವಾಬ್ದಾರಿ ವಹಿಸಿಕೊಂಡ ಬಳಿಕವಂತೂ ರಾಹುಲ್​ ಗಾಂಧಿ ಫುಲ್​ ಫೇಮಸ್​ ಆಗಿದ್ದಾರೆ. ಎಷ್ಟರ ಮಟ್ಟಿದೆ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್, ಮೋದಿಯನ್ನೂ ಹಿಂದಿಕ್ಕುತ್ತಾರಾ ಅನ್ನೋ ಡೌಟು ಶುರುವಾಗಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಬೆನ್ನಲ್ಲೇ ರಾಹುಲ್ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗುತ್ತಿದ್ದು, ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕವಂತೂ  ಟ್ವೀಟರ್'​ನಲ್ಲಿ ರಾಹುಲ್ ಹವಾ ಜೋರಾಗಿದೆ.  ಹೀಗಾಗಿ ಜನರ ಒಲವು ಕಾಂಗ್ರೆಸ್​ ಕಡೆ ವಾಲುತ್ತಿದೆಯಾ ಅನ್ನೋದು ಸದ್ಯ ಬಿಜೆಪಿಗೆ ಚಿಂತೆಯಾಗಿದೆ.

 

ಈ ಹಿಂದೆ ಪ್ರಧಾನಿ ಮೋದಿ ಹಾಗೂ ದಹಲಿ ಮುಖ್ಯಮಂತ್ರಿ ಅರವಿದ್ ಕೇಜ್ರೀವಾಲ್'ಗಿಂತಲೂ ರಾಹುಲ್ ಗಾಂಧಿ ಬಹಳಷ್ಟು ಕೆಳಗಿದ್ದರು. ಆದರೆ 2017ರ ಮೇ ಬಳಿಕವಂತೂ ಕಾಂಗ್ರೆಸ್ ಯುವರಾಜನ ಟ್ವೀಟ್'ಗಳ ರೀ ಟ್ವೀಟ್'ಗಳಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ಜೂನ್'ನಲ್ಲಿ ರೀ ಟ್ವೀಟ್ ವಿಚಾರದಲ್ಲಿ ರಾಹುಲ್ ಗಾಂಧಿ ಅರವಿಂದ್ ಕೇಜ್ರೀವಾಲ್'ರನ್ನು ಹಿಂದಿಕ್ಕಿದ್ದಾರೆ.

ಇನ್ನು ಜುಲೈನಲ್ಲಿ ಅಚ್ಚರಿ ಎಂಬಂತೆ ಪ್ರಧಾನಿ ಮೋದಿಯ ಟ್ವೀಟ್'ಗಳ ರೀಟ್ವೀಟ್ ಮಾಡುವವರ ಸಂಖ್ಯೆ ಇಳಿಮುಖವಾಗಿದ್ದವು. ಹೀಗಿರುವಾಗಲೇ ಸೆಪ್ಟೆಂಬರ್'ನಲ್ಲಿ ಕೊನೆಗೂ ರಾಹುಲ್ ಗಾಂಧಿ ಟ್ವೀಟ್'ಗಳು ರೀಟ್ವೀಟ್ ಮಾಡುವ ವಿಚಾರದಲ್ಲಿ ಮೋದಿಯನ್ನೇ ಹಿಂದಿಕ್ಕಿದ್ದಾರೆ.

ಅಕ್ಟೋಬರ್ 15ರಷ್ಟಕ್ಕೆ ರಾಹುಲ್ ಗಾಂಧಿ ಮಾಡುತ್ತಿರುವ ಪ್ರತಿಯೊಂದು ಟ್ವೀಟ್'ಗಳು ಸರಾಸರಿ 3800 ರಷ್ಟು ಬಾರಿ ರೀಟ್ವೀಟ್ ಆಗುತ್ತಿವೆ. ಇತ್ತ ಮೋದಿಯ ಟ್ವೀಟ್'ಗಳನ್ನು ರೀಟ್ವೀಟ್ ಮಾಡುವವರ ಸಂಖ್ಯೆ 2300ಕ್ಕಿಳಿದಿದೆ    

Follow Us:
Download App:
  • android
  • ios