Asianet Suvarna News Asianet Suvarna News

ರಾಹುಲ್​ ಗಾಂಧಿ ರಾಜಕೀಯ ನಾಯಕ ಎಂದು ಒಪ್ಪಲಾರೆ: ಹಿರಿಯ ಕಾಂಗ್ರೆಸ್ ನಾಯಕ

ಕರ್ನಾಟಕದ ಮಾಜಿ ರಾಜ್ಯಪಾಲ, ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ  ಹೊಸ ಬಾಂಬ್ ಸಿಡಿಸಿದ್ದು, ಇದು ರಾಷ್ಟ್ರರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

Rahul Gandhi not a leader Says Congress veteran Hansraj Bhardwaj
Author
Bengaluru, First Published Nov 15, 2018, 9:46 PM IST

ನವದೆಹಲಿ, [ನ.15] : ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್​ ಭಾರದ್ವಾಜ್​ ಅವರು ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಅಸಮಧಾನ ಹೊರಹಾಕಿದ್ದಾರೆ.

ಇಂದು [ಗುರುವಾರ] ನವದೆಹಲಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಮಾತನಾಡಿರುವ ಹಂಸರಾಜ್ ಭಾರದ್ವಾಜ್‌, ರಾಹುಲ್‌ ಗಾಂಧಿ ಒಬ್ಬ ರಾಜಕೀಯ ನಾಯಕ ಎಂಬುದನ್ನು ನಾನು ಒಪ್ಪಲಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ರಾಹುಲ್​ ಗಾಂಧಿ ಒಬ್ಬ ರಾಜಕೀಯ ನಾಯಕ ಎಂಬುದನ್ನು ನಾನು ಇನ್ನೂ ಒಪ್ಪಲಾರೆ. ರಾಹುಲ್​ ಗಾಂಧಿ ಇನ್ನೂ ಕಲಿಯಬೇಕಾದ್ದು ಬಹಳಷ್ಟಿದೆ. ಜನ ಆತನನ್ನು ಅಂಗೀಕರಿಸಿದಾಗ ಆತ ಒಬ್ಬ ನಾಯಕನಾಗಿ ಹೊರ ಹೊಮ್ಮುತ್ತಾನೆ ಎಂದು ಹಂಸರಾಜ್​ ಭಾರದ್ವಾಜ್ ಹೇಳಿದ್ದಾರೆ. 

ಇನ್ನು, ಕಾಂಗ್ರೆಸ್​ ಯಾಕೆ ಸೋಲುತ್ತಿದೆ ಎಂಬ ಮಾಧ್ಯಮಗಳ  ಪ್ರಶ್ನೆಗೆ ಉತ್ತರಿಸಿದ ಅವರು, ಅದು ಜಾತಿ ರಾಜಕಾರಣದಲ್ಲಿ ಮುಳುಗಿದೆ ಎಂದರು. ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಹಂಸರಾಜ್ ಭಾರದ್ವಾಜ್‌ ಅವರು ತಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. 

Follow Us:
Download App:
  • android
  • ios