Asianet Suvarna News Asianet Suvarna News

ನೆಹರು – ಗಾಂಧಿ ಮನೆತನದ 6ನೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್

ರಾಹುಲ್ ಗಾಂಧಿ ನೆಹರು – ಗಾಂಧಿ ಮನೆತನದಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ 6ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಯಾವುದೇ ವಿರೋಧವಿಲ್ಲದೇ ರಾಹುಲ್ ಇಂದು ತಾಯಿ ಸೋನಿಯಾ ಗಾಂಧಿ ಕಳೆದ 19 ವರ್ಷಗಳಿಂದ ನಿರ್ವಹಿಸಿಕೊಂಡು ಬಂದ ಅಧ್ಯಕ್ಷ ಗಾದಿಗೆ ಆಯ್ಕೆಯಾಗಿದ್ದಾರೆ.

Rahul Gandhi is sixth Congress president from the Nehru Gandhi dynasty

ನವದೆಹಲಿ (ಡಿ.11): ರಾಹುಲ್ ಗಾಂಧಿ ನೆಹರು – ಗಾಂಧಿ ಮನೆತನದಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ 6ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಯಾವುದೇ ವಿರೋಧವಿಲ್ಲದೇ ರಾಹುಲ್ ಇಂದು ತಾಯಿ ಸೋನಿಯಾ ಗಾಂಧಿ ಕಳೆದ 19 ವರ್ಷಗಳಿಂದ ನಿರ್ವಹಿಸಿಕೊಂಡು ಬಂದ ಅಧ್ಯಕ್ಷ ಗಾದಿಗೆ ಆಯ್ಕೆಯಾಗಿದ್ದಾರೆ.

135 ವರ್ಷ ಹಳೆಯ ಕಾಂಗ್ರೆಸ್ ಪಕ್ಷಕ್ಕೆ ಇದುವರೆಗು 15 ಮಂದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ 6 ಮಂದಿ ನೆಹರು – ಗಾಂಧಿ ಮನೆತನದವರಾಗಿದ್ದಾರೆ.

ಇದೇ ಡಿಸೆಂಬರ್ 16ರಂದು ರಾಹುಲ್ ಅಧ್ಯಕ್ಷ ಪಟ್ಟವನ್ನು ಅಲಂಕರಿಸಲಿದ್ದಾರೆ. ಸ್ವಾತಂತ್ರ್ಯ ನಂತರದ ನೆಹರು ಗಾಂಧಿ ಮನೆತನದ 5ನೇ ಅಧ್ಯಕ್ಷರು ಎನಿಸಿಕೊಂಡರೆ, ಸ್ವಾತಂತ್ರ್ಯ ಪೂರ್ವದಿಂದ 6ನೇ ವ್ಯಕ್ತಿಯಾಗಿದ್ದಾರೆ.

ನೆಹರು-ಗಾಂಧಿ ಮನೆತನದಲ್ಲಿ  ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ನಂತರ ಕಾರ್ಯನಿರ್ವಹಿಸಿದ್ದರು.  ಇದೀಗ 5ನೇ ವ್ಯಕ್ತಿಯಾಗಿ ರಾಹುಲ್ ಆಯ್ಕೆ ಮಾಡಲಾಗಿದೆ.

Follow Us:
Download App:
  • android
  • ios