Asianet Suvarna News Asianet Suvarna News

ಉಗ್ರ ಅಜರ್ ಮಸೂದ್ ತಲೆ ತಂದವರಿಗೆ 51 ಲಕ್ಷ ರೂಪಾಯಿ: ಬಿಜೆಪಿ ನಾಯಕನ ಆಫರ್

ಬಿಜೆಪಿ ನಾಯಕನೊಬ್ಬ ಪುಲ್ವಾಮಾ ದಾಳಿಯ ಸಂಚು ರೂಪಿಸಿದ್ದ ಉಗ್ರ ಅಜರ್ ಮಸೂದ್ ತಲೆ ತಂದವರಿಗೆ 51 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

Pulwama Attack bjp leader announces a prize of rs 51 lakh for masood azhar beheads
Author
New Delhi, First Published Feb 19, 2019, 4:24 PM IST

ನವದೆಹಲಿ[ಫೆ.19]: ಬಿಜೆಪಿ ನಾಯಕ ಹಾಗೂ ರಾಜ್ಯ ಬಿಜೆಪಿ ವ್ಯವಹಾರ ಕೋಶದ ಸಂಯೋಜಕ ವಿನೀತ್ ಅಗರ್ ವಾಲ್ ಶಾರ್ದಾ ಪಾಕಿಸ್ತಾನದ ಉಗ್ರ ಅಜರ್ ಮಸೂದ್ ತಲೆ ಕಡಿದು ತಂದವರಿಗೆ 51 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಬಿಜೆಪಿ ನಾಯಕ ತಿಳಿಸಿರುವ ಅನ್ವಯ ಈ ಮೊತ್ತದಲ್ಲಿ 11 ಲಕ್ಷ ರೂಪಾಯಿ ತಮ್ಮದೇ ಆಗಿದ್ದು, ಉಳಿದ 40 ಲಕ್ಷ ರೂಪಾಯಿ ಮೊತ್ತ ಜನರಿಂದ ಸಂಗ್ರಹಿಸಿ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 48 ಗಂಟೆಯೊಳಗೆ ಬಿಕನೇರ್ ಬಿಟ್ಟು ಹೋಗಿ: ಪಾಕ್ ನಾಗರಿಕರಿಗೆ ಡಿಸಿ ಖಡಕ್ ಆದೇಶ

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಬಿಜೆಪಿ ನಾಯಕ ವಿನೀತ್ ಶಾರ್ದಾ 'ಪುಲ್ವಾನಾದಲ್ಲಿ ಯೋಧರ ಮೇಲೆ ನಡೆದ ದಾಳಿಗೆ ದೆಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ ಹಾಗೂ ಶೋಕದಲ್ಲಿದೆ. ಆದರೆ ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕ್ ಗೆ ನರೇಂದ್ರ ಮೋದಿ ತಕ್ಕ ಪಾಠ ಕಲಿಸುತ್ತಾರೆಂಬ ಭರವಸೆ ದೇಶದ ಜನರಿಗಿದೆ' ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯು ಜನರಿಂದ ಹಣ ಸಂಗ್ರಹಿಸಿ ಹುತಾತ್ಮರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿಯೂ ತಿಳಿಸಿದ್ದಾರೆ.

ಪುಲ್ವಾಮಾ ದಾಳಿಯ ಯೋಜನೆ ರೂಪಿಸಿದ್ದ ಮೌಲಾನಾ ಮಸೂದ್ ಅಜರ್ ಇಂದು ಭಾರತದ ಮುಷ್ಟಿಯ್ಲಲಿಲ್ಲ, ಆದರೆ 25 ವರ್ಷಗಳ ಹಿಂದೆ ಆತ ಭಾರತದ ವಶದಲ್ಲಿದ್ದ. ಈ ವೇಳೆ ತನಿಖೆ ನಡೆಸುತ್ತಿದ್ದಾಗ ಯಾವುದೇ ವಿಚಾರ ಬಾಯ್ಬಿಡದ ಅಜರ್ ಕಪಾಳಕ್ಕೆ ಯೋಧರೊಬ್ಬರು ಒಂದೇಟು ಬಾರಿಸುತ್ತಿದ್ದಂತೆ ಹೆದರಿ, ಉಗ್ರರ ಚಟುವಟಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಹೇಳಿದ್ದ. ಪೋರ್ಚುಗೀಸ್‌ ಪಾಸ್‌ಪೋರ್ಟ್‌ ಮೇಲೆ ಕಾಶ್ಮೀರಕ್ಕೆ ಆಗಮಿಸಿದ್ದ ಅಜರ್‌ನನ್ನು 1994ರಲ್ಲಿ ಬಂಧಿಸಲಾಗಿತ್ತು.

Follow Us:
Download App:
  • android
  • ios