Asianet Suvarna News Asianet Suvarna News

ಅಲಹಾಬಾದ್‌ ರೈಲು ನಿಲ್ದಾಣದಲ್ಲಿ ಇನ್ನು ಕನ್ನಡ!

ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌) ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ರೈಲುಗಳ ಕುರಿತಾಗಿ ಸಾರ್ವಜನಿಕ ಘೋಷಣೆ ಕೂಗುವ ವ್ಯವಸ್ಥೆ ಜಾರಿ 

public boards in kannada at allahabad railway station
Author
Allahabad, First Published Jan 17, 2019, 10:49 AM IST

ನವದೆಹಲಿ[ಜ.17]: ಕುಂಭಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಅಲಹಾಬಾದ್‌ (ಪ್ರಯಾಗ್‌ರಾಜ್‌) ರೈಲ್ವೆ ನಿಲ್ದಾಣದಲ್ಲಿ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ರೈಲುಗಳ ಕುರಿತಾಗಿ ಸಾರ್ವಜನಿಕ ಘೋಷಣೆ ಕೂಗುವ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾ.4ರವರೆಗೂ ನಡೆಯಲಿರುವ ಕುಂಭಮೇಳಕ್ಕೆ ಆಗಮಿಸುವ ಹಿಂದಿಯೇತರ ಭಾಷಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ.

ಕನ್ನಡ, ಇಂಗ್ಲಿಷ್‌, ಗುಜರಾತಿ, ಮರಾಠಿ, ತಮಿಳು ಮತ್ತು ಮಲಯಾಳಂಗಳಲ್ಲಿ ಸ್ವಯಂಕೃತವಾಗಿ ತರ್ಜುಮೆ ಮಾಡುವ ಸಾಫ್ಟ್‌ವೇರ್‌ ವ್ಯವಸ್ಥೆಯನ್ನು ಅಲಹಾಬಾದ್‌ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಅಲ್ಲದೆ, 2ನೇ ಪುಣ್ಯ ಸ್ನಾನ ಆರಂಭವಾಗುವ ಜ.21ರ ಒಳಗಾಗಿ ಇದೇ ವ್ಯವಸ್ಥೆಯನ್ನು ನೈನಿ, ಅಲಹಾಬಾದ್‌ ಚೌಕಿ ಹಾಗೂ ಸಂಗಮ್‌ ಏರಿಯಾ(ರೈಲ್ವೆ ಕ್ಯಾಂಪ್‌)ರೈಲ್ವೆ ನಿಲ್ದಾಣಗಳಲ್ಲಿಯೂ ಆರಂಭಿಸಲಾಗುತ್ತದೆ.

ಈ ಬಗ್ಗೆ ಬುಧವಾರ ಮಾತನಾಡಿದ ಉತ್ತರ ಕೇಂದ್ರ ರೈಲ್ವೆ ವಕ್ತಾರ ಗೌರವ್‌ ಕೃಷ್ಣ ಬನ್ಸಾಲ್‌ ಅವರು, ‘ಕುಂಭಮೇಳಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಾಗಲೇ, ಹೆಚ್ಚು ಭಾಷೆಗಳಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿದ್ದರೆ ಚೆನ್ನಾಗಿರುತ್ತದೆ ಎಂಬುದಾಗಿ ಮನವರಿಕೆಯಾಗಿತ್ತು. ಇದರ ಪ್ರಯುಕ್ತ ಕೃತಕ ಬುದ್ಧಿಮತೆಯನ್ನು ಉಪಯೋಗಿಸಿ ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ರೈಲುಗಳ ಬಗ್ಗೆ ವಿವರಣೆ ನೀಡುವ ವ್ಯವಸ್ಥೆಯನ್ನು ಅಲಹಾಬಾದ್‌ ಜಂಕ್ಷನ್‌ನಲ್ಲಿ ಅಳವಡಿಸಲಾಗಿದೆ,’ ಎಂದಿದ್ದಾರೆ.

Follow Us:
Download App:
  • android
  • ios