Asianet Suvarna News Asianet Suvarna News

ಪಂಚರಾಜ್ಯ ಚುನಾವಣೆಯ ಸೋಲಿಗೆ ಮೋದಿ ವಿಧೇಯ ಪ್ರತಿಕ್ರಿಯೆ!

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯು ವಿಧಾಸಬಾ ಚುನಾವಣೆಗಳಲ್ಲಿ ಅನಿರೀಕ್ಷಿತ ಸೋಲನುಭವಿಸಿದ್ದರೆ, ಕಾಂಗ್ರೆಸ್ ಸಂಭ್ರಮಿಸುತ್ತಿದೆ. ಹೀಗಿದ್ದರೂ ಕಪ್ರಧಾನಿ ಮೋದಿ ಈ ಸೋಲನ್ನು ಅತ್ಯಂತ ವಿಧೇಯರಾಗಿ ಸ್ವೀಕರಿಸಿದ್ದಾರೆ.

prime minister narendra modi  humbly accepts the 5 states verdict
Author
New Delhi, First Published Dec 12, 2018, 11:58 AM IST

ನವದೆಹಲಿ[ಡಿ.12]: ಡಿಸೆಂಬರ್ 11, ಮಂಗಳವಾರದಂದು ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಗೆ ಅನಿರೀಕ್ಷಿತ ಸೋಲನ್ನೆದುರಿಸಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷಕ್ಕಾದ ಈ ಸೋಲನ್ನು ಅತ್ಯಂತ ವಿದೇಯತೆಯಿಂದ ಸ್ವೀಕರಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಗೆದ್ದ ಪಕ್ಷಗಳಿಗೆ ಅಭಿನಂದಿಸಿರುವ ಮೋದಿ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಧನ್ಯವದ ತಿಳಿಸಿದ್ದಾರೆ.

ನಾವು ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ತಮ್ಮ ಸೇವೆ ಮಾಡಲು ಅವಕಾಶ ನೀಡಿದ್ದ ಛತ್ತೀಸ್‌ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಜನತೆಗೆ ನಮ್ಮ ಧನ್ಯವಾದಗಳು. ಈ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಜನರ ಏಳಿಗೆಗಾಗಿ ದಣಿವಿಲ್ಲದೆ ಶ್ರಮಿಸಿದೆ ಎಂದಿದ್ದಾರೆ.

ತಮ್ಮ ಎರಡನೇ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ತೆಲಂಗಾನದಲ್ಲಿ ಜಯಗಳಿಸಿದ ಕೆಸಿಆರ್‌ಗೆ ಅಭಿನಂದಿಸಿರುವ ಮೋದಿ 'ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅಭಿನಂದನೆಗಳು. ತೆಲಂಗಾಣದಲ್ಲಿ ಅದ್ಭುತ ಜಯಗಳಿಸಿದ ಕೆಸಿಆರ್‌ಗಾರು ಹಾಗೂ ಮಿಜೋರಾಂನಲ್ಲಿ ಆಕರ್ಷಕ ಜಯ ಗಳಿಸಿದ ಮಿಜೋ ನ್ಯಾಷನಲ್ ಫ್ರಂಟ್‌ಗೂ ಶುಭಾಷಯಗಳು ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತರ ಪರಿಶ್ರಮವನ್ನೂ ಶ್ಲಾಘಿಸಿರುವ ಮೋದಿ 'ರಾಜ್ಯ ವಿಧಾನಸಭಾ ಚುನಾವಣೆಗೆ ಹಗಲಿರುಳೆನ್ನದೆ ದುಡಿದ ಬಿಜೆಪಿ ಕುಟುಂಬದ ಕಾರ್ಯಕರ್ತರು ಕಠಿಣ ಶ್ರಮಕ್ಕೆ ನನ್ನದೊಂದು ಸೆಲ್ಯೂಟ್. ಗೆಲುವು ಮತ್ತು ಸೋಲು ಇವೆರಡೂ ಜೀವನದ ಅವಿಭಾಜ್ಯ ಅಂಗ. ಈ ದಿನದ ಫಲಿತಾಂಶ ನಾವು ಜನಸೇವೆಯಲ್ಲಿ ಮತ್ತಷ್ಟು ತೊಡಗಲು ಮತ್ತು ಭಾರತದ ಅಭಿವೃದ್ಧಿಗೆ ಮತ್ತಷ್ಟು ಒತ್ತುಕೊಡಲು ಪ್ರೇರೇಪಿಸಲಿದೆ" ಎಂದಿದ್ದಾರೆ.

ಒಟ್ಟಾರೆಯಾಗಿ ಈ ಮೂರು ಟ್ವೀಟ್‌ಗಳ ಮೂಲಕ ಮೋದಿ ಬಿಜೆಪಿ ಸೋಲನ್ನು ಸಮನಾಗಿ ಸ್ವೀಕರಿಸಿದ್ದಾರೆ.

Follow Us:
Download App:
  • android
  • ios