Asianet Suvarna News Asianet Suvarna News

ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣ : ಪ್ರಮುಖ ಸಾಕ್ಷಿದಾರ ಅನುಮಾನಸ್ಪದ ಸಾವು

ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಲಾಕಲ್ ವಿರುದ್ಧ ಕುರಿಯಕೊಸೆ ಕೇರಳ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರು. ಕುರಿಯಕೊಸೆ ಸಹೋದರರಾದ ಜೋಸ್ ಕಟ್ಟುತಾರಾ, ಬಿಷಪ್ ಫ್ರಾಂಕೋ ಮುಲಾಕಲ್ ವಿರುದ್ಧ ಹೇಳಿಕೆ ನೀಡಿರುವ ಕಾರಣ ಕೊಲೆಯಾಗಿರುವುದಾಗಿ ಆರೋಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

Priest Who Was Witness In Rape Case Against Bishop Found Dead In Punjab
Author
Bengaluru, First Published Oct 22, 2018, 3:40 PM IST

ಜಲಂಧರ್ [ಅ.22]: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಫಾದರ್ ಕುರಿಯಕೊಸೆ ಕಟ್ಟುತಾರಾ [62] ಅವರು ಪಂಜಾಬಿನ ಜಲಂಧರ್'ನ ಸೇ. ಮೇರಿ ಚರ್ಚ್'ನಲ್ಲಿ ಅನುಮಾನಸ್ಪದಕವಾಗಿ ಮೃತಪಟ್ಟಿದ್ದಾರೆ.

ಸನ್ಯಾಸಿನಿಯ ಅತ್ಯಾಚಾರ ಪ್ರಕರಣ ಆರೋಪ ಎದುರಿಸುತ್ತಿರುವ ಕೇರಳದ ಬಿಷಪ್ ಫ್ರಾಂಕೋ ಮುಲಾಕಲ್ ವಿರುದ್ಧ ಇವರು ಪ್ರಮುಖ ಸಾಕ್ಷಿಯಾಗಿದ್ದರು. ಸೋಮವಾರ ಮುಂಜಾನೆ ಮೃತಪಟ್ಟಿದ್ದು ಸಾವಿಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲ. ಫಾದರ್ ಕುರಿಯಕೊಸೆ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಲಾಕಲ್ ವಿರುದ್ಧ ಕುರಿಯಕೊಸೆ ಕೇರಳ ಪೊಲೀಸರಿಗೆ ಪ್ರಮುಖ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರು. ಕುರಿಯಕೊಸೆ ಸಹೋದರರಾದ ಜೋಸ್ ಕಟ್ಟುತಾರಾ, ಬಿಷಪ್ ಫ್ರಾಂಕೋ ಮುಲಾಕಲ್ ವಿರುದ್ಧ ಹೇಳಿಕೆ ನೀಡಿರುವ ಕಾರಣ ಕೊಲೆಯಾಗಿರುವುದಾಗಿ ಆರೋಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಮುಲಕ್ಕಲ್ 2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಫ್ರಾಂಕೊ ಮುಲಕ್ಕಲ್ ಅವರನ್ನು ಜಲಂಧರ್'ನ ರೋಮನ್ ಕ್ಯಾಥೋಲಿಕ್ ಬಿಷಪ್ ಹುದ್ದೆಯಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟಯಂನ ಪಾಲದಲ್ಲಿರುವ ಜಿಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯವು ಫ್ರಾಂಕೋ ಅವರಿಗೆ ಜಾಮೀನು ನಿರಾಕರಿಸಿತ್ತು. ಹೈಕೋರ್ಟ್ ಮೆಟ್ಟಿಲೇರಿ ಶರತ್ತುಬದ್ಧ ಜಾಮೀನು ಪಡೆದಿದ್ದಾರೆ.
 
Follow Us:
Download App:
  • android
  • ios