news
By Suvarna Web Desk | 09:55 PM November 14, 2017
ದೇಶದ ಸಮಸ್ಯೆಗೆ ರಾಜಕಾರಣಿಗಿಂತ ಅಧಿಕಾರಿಗಳೇ ಹೆಚ್ಚು ಕಾರಣ: ಕನ್ನಡಿಗನಿಂದ ಪ್ರಧಾನಿಗೆ ಗೊತ್ತಾಯಿತು

Highlights

ಕನ್ನಡಿಗನಿಂದ ಪ್ರಧಾನಿಗೆ ಗೊತ್ತಾಯಿತು

ಮೋದಿ ಆಪ್ತ ಪತ್ರಕರ್ತ ಅರಕಲಗೂಡು ಸೂರ್ಯಪ್ರಕಾಶ್ ಪ್ರಸಾರ ಭಾರತಿ ಮುಖ್ಯಸ್ಥರಾಗಿ ಮೂರು ವರ್ಷದ ಅವಧಿ ಮುಕ್ತಾಯವಾಗಿದ್ದು, ಇನ್ನೂವರೆಗೂ ಅವರನ್ನು ಮುಂದುವರೆಸುವ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. ಪ್ರಸಾರ ಭಾರತಿ ಮುಖ್ಯಸ್ಥ ಎಂದರೆ ತಿಂಗಳಿಗೊಮ್ಮೆ ಮೀಟಿಂಗ್ ಅಟೆಂಡ್ ಮಾಡಿ ಸಂಬಳ-ಸಾರಿಗೆ ತೆಗೆದುಕೊಂಡು ಹೋಗುವ ಪದ್ಧತಿ ಇದ್ದಾಗ ಕಳೆದ ಮೂರು ವರ್ಷಗಳಲ್ಲಿ ಒಳಗೆ ಹೋರಾಟ ಮಾಡಿ ಕಾನೂನಿನಲ್ಲಿ ಇರುವ

ಸ್ವಾಯತ್ತೆಯನ್ನು ನಿಜವಾಗಿ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದೇ ಸೂರ್ಯಪ್ರಕಾಶರಿಗೆ ಮುಳುವಾದಂತೆ ಕಾಣುತ್ತಿದೆ. ಅಂದ ಹಾಗೆ ಜೀವನವಿಡೀ ಪತ್ರಕರ್ತರಾಗಿ ಕೆಲಸ ಮಾಡಿರುವ ಸೂರ್ಯಪ್ರಕಾಶರಿಗೆ ಕಳೆದ ಮೂರು ವರ್ಷಗಳಲ್ಲಿ ಅಧಿಕಾರಶಾಹಿ ಕೆಲಸ ಮಾಡುವ ವಿಧಾನ ನೋಡಿ ದೇಶದ ಸಮಸ್ಯೆಗೆ ರಾಜಕಾರಣಿಗಿಂತ ಅಧಿಕಾರಿಗಳೇ ಹೆಚ್ಚು ಕಾರಣ ಎಂದು ಮನವರಿಕೆ ಆಗಿದೆಯಂತೆ.

(ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ, ಕನ್ನಡಪ್ರಭ)

Show Full Article


Recommended


bottom right ad