news
By Suvarna Web Desk | 11:03 AM January 12, 2018
ಹೆಬ್ಬಾಳ ಸುತ್ತ ಮುತ್ತ ಇಂದಿನಿಂದ ವಿದ್ಯುತ್ ಕಟ್

Highlights

ನಗರದ ಹೆಬ್ಬಾಳ ಹಾಗೂ ನಾಗವಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದಿಂದ (ಜ.12) ಸುಮಾರು 20 ದಿನ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡಲಿದೆ. ಈ ಭಾಗದಲ್ಲಿ ಪದೇ ಪದೇ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಮುಂದಾಗಿರುವ ಕೆಪಿಟಿಸಿಲ್ 66/11 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾವರದ ವ್ಯಾಪ್ತಿಯ ಮಾರ್ಗದಲ್ಲಿ ಜ.12 ರಿಂದ ಜ.31ರ ವರೆಗೆ ದುರಸ್ತಿ ಮಾಡಲಿದೆ.

ಬೆಂಗಳೂರು (ಜ.12): ನಗರದ ಹೆಬ್ಬಾಳ ಹಾಗೂ ನಾಗವಾರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರದಿಂದ (ಜ.12) ಸುಮಾರು 20 ದಿನ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡಲಿದೆ. ಈ ಭಾಗದಲ್ಲಿ ಪದೇ ಪದೇ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಮುಂದಾಗಿರುವ ಕೆಪಿಟಿಸಿಲ್ 66/11 ಕೆವಿ ಸಾಮರ್ಥ್ಯದ ವಿದ್ಯುತ್ ಸ್ಥಾವರದ ವ್ಯಾಪ್ತಿಯ ಮಾರ್ಗದಲ್ಲಿ ಜ.12 ರಿಂದ ಜ.31ರ ವರೆಗೆ ದುರಸ್ತಿ ಮಾಡಲಿದೆ.

ಇದರ ಪರಿಣಾಮವಾಗಿ ಶುಕ್ರವಾರದಿಂದ 20 ದಿನ ವಿದ್ಯುತ್ ಪೂರೈಕೆಯಲ್ಲಿ ತೀವ್ರ ಸ್ವರೂಪದಲ್ಲಿ ವ್ಯತ್ಯಯ ಕಂಡು ಬರಲಿದೆ. ಎಲ್.ಆರ್ ಬಂಡೆ, ಗೆದ್ದಲಹಳ್ಳಿ, ಬಾಣಸವಾಡಿ, ಎಚ್‌ಬಿಆರ್ ಹಾಗೂ ವಿದ್ಯಾನಗರದ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ಆರಂಭಿಸಿ ಕಯೋಟ್ ಕಂಡಕ್ಟರ್ ಉಪಕರಣ ಅಳವಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್.ಆರ್.ಬಂಡೆ ವ್ಯಾಪ್ತಿಯಲ್ಲಿ ಮೊದಲು ದುರಸ್ತಿ ಕಾರ್ಯ ಆರಂಭವಾಗಲಿದೆ. ಹೆಚ್ಚು ದಿನಗಳ ಕಾಲ ದುರಸ್ತಿ ಕೈಗೊಳ್ಳುವುದರಿಂದ ಅಷ್ಟೂ ದಿನ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಆಗಾಗ್ಗೆ ವಿದ್ಯುತ್ ಬಂದು ಹೋಗಲಿದೆ.

ದುರಸ್ತಿ ಕಾರ್ಯದಿಂದ ಗ್ರಾಹಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಸೀಮಿತ ಅವಧಿಯಲ್ಲಿ ದುರಸ್ತಿ ನಡೆದರೂ, ಆಗಾಗ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಬಹುದು. ಆದರೆ, ಫೀಡರ್, ಪರಿವರ್ತಕ, ಮಾರ್ಗ ಬದಲಾವಣೆ ಸಮಯದಲ್ಲಿ ಮಾತ್ರ ವಿದ್ಯುತ್ ಕೆಲ ಸಮಯ ಅಡೆತಡೆಯಾಗಲಿದೆ ಎಂದು ತಿಳಿಸಲಾಗಿದೆ. ವಿದ್ಯುತ್ ವ್ಯತ್ಯಯದ ಪ್ರದೇಶಗಳು: ಎಚ್.ಬಿ.ಆರ್  3ನೇ ಹಂತ, ಟೀಚರ್ಸ್ ಕಾಲೋನಿ, ರಾಮದೇವ ಗಾರ್ಡನ್, ಯಾಸಿನ್‌ನಗರ, ಸುಭಾಷ್ ಲೇಔಟ್, ಆಯಿಲ್ ಮಿಲ್ ರಸ್ತೆ, ಮಂಗಳಾ ಲೇಔಟ್, ಕರಿಯಣ್ಣ ಪಾಳ್ಯ, ಕೆಎಸ್‌ಎಫ್‌ಸಿ ಲೇಔಟ್, ಕಾಚರಕನಹಳ್ಳಿ, ಅರವಿಂದ ನಗರ, ಲೋಕೇಶ್ ಟೆಂಟ್ ರಸ್ತೆ, ಭಾರತಿಯಾರ್ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆಯ ಕೆಲ ಭಾಗಗಳು, ಮೇಯರ್ ಶಂಕರ್ ರಸ್ತೆ, ಜಲ ವಾಯು ವಿಹಾರ್, ಎಚ್‌ಆರ್‌ಬಿಆರ್ ಲೇಔಟ್‌ನ 2ನೇ ಹಂತ, 3ನೇ ಹಂತ, ಬಿಟಿಎಸ್ ಡಿಪೋ ಹಿಂಭಾಗ, ರಾಮಯ್ಯ ಲೇಔಟ್, ಹಾರ್ಮನಿ ಅಪಾರ್ಟ್‌ಮೆಂಟ್, ನಾಗದೇವಿ ಕೈಗಾರಿಕಾ ಪ್ರದೇಶ, ಕರಿಯಣ್ಣಪಾಳ್ಯ, ಕುಮಾರಚಂದ್ರ ಲೇಔಟ್, ಜಾನಕಿರಾಮ್ ಲೇಔಟ್, ಬಾಣಸವಾಡಿ ರೈಲ್ವೇ ನಿಲ್ದಾಣ ರಸ್ತೆ, ಡಾನ್ ಬಾಸ್ಕೋ ಚರ್ಚ್, ಲಿಂಗರಾಜಪುರ ಗ್ರಾಮ, ಹೆಣ್ಣೂರು ಮುಖ್ಯ ರಸ್ತೆ, ರಶದ್‌ನಗರ, ಗೋವಿಂದಪುರ ಮುಖ್ಯರಸ್ತೆ, ಫರೀದ ಶೂ ಫ್ಯಾಕ್ಟರಿ, ಕಾಡುಗೊಂಡನಹಳ್ಳಿ, ಅರೇಬಿಕ್ ಕಾಲೇಜ್, ಗೋವಿಂದಪುರ ಗ್ರಾಮ ೫ನೇ ಹಂತ, ಎಚ್‌ಬಿಆರ್ ನಾಗವಾರ ಮುಖ್ಯರಸ್ತೆ, ಎನ್‌ಜೆಕೆ ಗಾಮೆಂರ್ಟ್ಸ್.  ಥಣಿಸಂದ್ರ, ಹೆಗಡೆ ನಗರ, ಕೆ.ನಾರಾಯಣಪುರ, ಎನ್.ನಾಗೇನಹಳ್ಳಿ, ಕೆ.ನಾರಾಯಣಪುರ, ಎನ್. ಎನ್.ಹಳ್ಳಿ, ಬಾಲಾಜಿ ಲೇಔಟ್‌ನ ೧ರಿಂದ 3ನೇ ಹಂತದವರೆಗಿನ ಪ್ರದೇಶ,  ರೈಲ್ವೆ ಮೆನ್ಸ್ ಲೇಔಟ್, ಬಿಡಿಎಸ್ ಲೇಔಟ್, ಸೆಂಟ್ರಲ್ ಎಕ್ಸೈಜ್, ಬೈರವಿ ಅಪಾರ್ಟ್‌ಮೆಂಟ್, ಎಚ್‌ಬಿಆರ್ 3ನೇ ಬ್ಲಾಕ್, ಶೋಭಾ ಅಪಾರ್ಟ್‌ಮೆಂಟ್ ಥಣಿಸಂದ್ರ, ಹೆಣ್ಣೂರು ಬಂಡೆ, ಸಾಮುದ್ರಿಕಾ ಎಕ್ಲೇವ್, ಗ್ರೆಸ್ ಗಾರ್ಡನ್, ಕ್ರಿಸ್ತಜ್ಯೋತಿ ಕಾಲೇಜು, ಕೆ.ನಾರಾಯಣಪುರ, ಬಿಳಿ ಶಿವಾಲೆ, ಆಶಾಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಾಗರಗಿರಿ ಟೌನ್‌ಶಿಪ್, ಕೆ.ನಾರಾಯಣಪುರ ಅಡ್ಡರಸ್ತೆ, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್‌ಐ ಗೇಟ್, ಬೈರತಿ ಗ್ರಾಮ, ಬೈರತಿ ಕ್ರಾಸ್, ಎವರ್‌ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್‌ಮೆಂಟ್, ಹಿರೇಮಠ್ ಲೇಔಟ್, ಟ್ರಿನಿಟಿ ಫಾರ್ಚೂನ್. 

ಮೈಕೆಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುರಾಗ ಲೇಔಟ್, ಕಾವೇರಿ ಲೇಔಟ್, ಕುವೆಂಪು ಲೇಔಟ್, ಆತ್ಮಾವಿದ್ಯಾ ನಗರ ಬೈರತಿ ಗ್ರಾಮ, ದೊಡ್ಡಗುಬ್ಬಿ ಕ್ರಾಸ್, ಸಂಗಮ್ ಎಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮಗೌಡ ಲೇಔಟ್, ಬಿಇಎಲ್ ಕಾರ್ಪೋರೇಟ್ ಆಫೀಸ್, ಚಾಣಕ್ಯ ಲೇಔಟ್, ನಾಗವಾರ, ಎಂ.ಎಸ್.ರಾಮಯ್ಯ ನಾರ್ತ್ ಸಿಟಿ, ಥಣಿಸಂದ್ರ ಮುಖ್ಯರಸ್ತೆ, ಆಶೀರ್ವಾದ ನಗರ, ಅಮರಜ್ಯೋತಿ ಲೇಔಟ್, ರಾಚನೇಹಳ್ಳಿ ಮುಖ್ಯರಸ್ತೆ, ಮೇಸ್ತ್ರೀ ಪಾಳ್ಯ, ರಾಯಲ್ ಎಕ್ಲೇವ, ಶ್ರೀರಾಮಪುರ ಗ್ರಾಮ, ವಿಎಚ್‌ವಿಸಿಎಸ್ ಲೇಔಟ್, ದಾಸರಹಳ್ಳಿ ಪ್ರದೇಶ, ಎಕೆ ಆಶ್ರಮ ರಸ್ತೆ, ದೇವೇಗೌಡ ರಸ್ತೆ, ಆರ್‌ಟಿ ನಗರ 1 ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಟರಿ ಏರಿಯಾ, ಕೆ.ಚನ್ನಸಂದ್ರ, ಚಳ್ಳಿಕೆರೆ, ಜಯಂತಿ ಗ್ರಾಮ, ಹೊಯ್ಸಳನಗರ. 

ಹೊರಮಾವು, ಅಗರ, ಹೆಣ್ಣೂರು ಗ್ರಾಮ, ಮೇಘನಾಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ಎಸ್. ಪಾಳ್ಯ, ಆರ್.ಎಸ್.ಪಾಳ್ಯ, ಕಮ್ಮನಹಳ್ಳಿ ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಈರಪ್ಪ ರೆಡ್ಡಿ ಲೇಔಟ್, ಚಿಕ್ಕಬಾಣಸವಾಡಿ, ಬಿ.ಎಸ್.ಪಾಳ್ಯ, ಜಿಎನ್‌ಆರ್ ಗಾರ್ಡನ್, ಪೋಲೊಟಿನ್ ಸ್ಕೂಲ್, ಕ್ಯಾಲಸನಹಳ್ಳಿ, ಹಿದಾಯತ್‌ನಗರ, ಕೆ.ಜಿ.ಹಳ್ಳಿ, ಲಿಡ್ಕರ್ ಕಾಲೋನಿ, ಚುನಲೈನ್, ನಾಗವಾರ ಮುಖ್ಯರಸ್ತೆ, ಬಿಡಬ್ಲ್ಯೂಎಸ್ ಎಸ್‌ಬಿ ಹೊರಮಾವು, 3ನೇ ಹಂತ, ಗೋವಿಂದಪುರ, ಎಚ್‌ಬಿಆರ್ ಲೇಔಟ್, ಕರಾವಳಿ ರಸ್ತೆ, ಎಚ್‌ಬಿಆರ್ ೩ನೇ ಬ್ಲಾಕ್ ರಾಮಯ್ಯ ಲೇಔಟ್, ನಾಗದೇವಿ ಇಂಡಸ್ಟ್ರೀಸ್, ನೀಲಗಿರಿ ರಸ್ತೆ, ಅರವಿಂದನಗರ, ಮಂಗಳ ಲೇಔಟ್, ಆಯಿಲ್‌ಮಿಲ್ ರಸ್ತೆ, ಬಾಣಸವಾಡಿ ಒಎಂಬಿಆರ್ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ರಾಮಮೂರ್ತಿ ನಗರ ಮುಖ್ಯರಸ್ತೆ ಅಣ್ಣಯ್ಯ ರೆಡ್ಡಿ ಲೇಔಟ್, ಲಕ್ಷ್ಮಮ ಲೇಔಟ್, ಎನ್‌ಜಿಇಎಫ್ ಪೂರ್ವ, ಚನ್ನಸಂದ್ರ, ಪಿಲ್ಲರೆಡ್ಡಿ ನಗರ, ಎನ್‌ಜಿಎಫ್ ಪೂರ್ವ, ಕಸ್ತೂರಿನಗರ, ಕನೋಪಿ ಅಪಾರ್ಟ್‌ಮೆಂಟ್, ಮಲ್ಲಪ್ಪ ಲೇಔಟ್, ಬ್ಯಾಂಕ್ ಅವೆನ್ಯೂ, ನಂಜಪ್ಪ ಲೇಔಟ್, ಬಾಬೂಸಾಪಾಳ್ಯ, ಪ್ರಕೃತಿ ಲೇಔಟ್, ಸುಬ್ಬಯ್ಯನಪಾಳ್ಯ, ರಾಮಸ್ವಾಮಿಪಾಳ್ಯ, ಎಚ್ ಬಿಆರ್ ಲೇಔಟ್ 1ನೇ ಬ್ಲಾಕ್, ಕಮ್ಮನಹಳ್ಳಿ 80 ಅಡಿ ರಸ್ತೆ, ಸೇನಾವಿಹಾರ್, ರೇವಾ ಕಾಲೇಜು, ನಿರಂತರ ಲೇಔಟ್, ನೇತಾಜಿನಗರ, ವಿದ್ಯಾನಗರ ಹಾಗೂ ಸುತ್ತಲಿನ ಪ್ರದೇಶಗಳು.

Show Full Article


Recommended


bottom right ad