Asianet Suvarna News Asianet Suvarna News

ಇಂದು ಮರೆಯದೆ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ

ರಾಷ್ಟ್ರೀಯ ಪೋಲಿಯೋ ಲಸಿಕಾ ದಿನಾಚರಣೆ | ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸುವಂತೆ ಆರೋಗ್ಯ ಇಲಾಖೆ ಮನವಿ | 

Polio vaccination for 4.3 kids on march 10
Author
Bengaluru, First Published Mar 10, 2019, 8:41 AM IST

ಬೆಂಗಳೂರು (ಮಾ. 10):  ರಾಷ್ಟ್ರೀಯ ಪೋಲಿಯೋ ಲಸಿಕಾ ದಿನಾಚರಣೆ ಅಂಗವಾಗಿ ರಾಜ್ಯಾದ್ಯಂತ ಮಾ.10ರಂದು ಭಾನುವಾರ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೋ ಹನಿ ಹಾಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಕಳೆದ ಎಂಟು ವರ್ಷದಿಂದ ಭಾರತದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವಾಗಿ ಘೋಷಿಸಿದೆ. ಆದರೆ, 2018ರಲ್ಲಿ ಪಾಕಿಸ್ತಾನ ಹಾಗೂ ಆಷ್ಘಾನಿಸ್ತಾನ ರಾಷ್ಟ್ರಗಳಲ್ಲಿ 33 ಪ್ರಕರಣ ವರದಿಯಾಗಿವೆ. ಹೀಗಾಗಿ ಮುಂಜಾಗ್ರತಾ ದೃಷ್ಟಿಯಿಂದ ಈ ವರ್ಷವೂ ಪೋಲಿಯೋ ಲಸಿಕಾ ಕಾರ್ಯಕ್ರಮ ಮುಂದುವರೆಸಲಾಗಿದೆ.

ಪ್ರಸಕ್ತ ವರ್ಷ ಐದು ವರ್ಷದೊಳಗಿನ 64,85,980 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಇದಕ್ಕಾಗಿ 32,571 ಬೂತ್‌ ಮಾಡಿದ್ದು, ಸಿಬ್ಬಂದಿಯ 51,918 ತಂಡಗಳನ್ನು ರಚಿಸಲಾಗಿದೆ. 1,20,351 ಲಸಿಕಾ ಕಾರ್ಯಕರ್ತರು, 7827 ಮಂದಿ ಮೇಲ್ವಿಚಾರಕರು, 2,481 ಸಂಚಾರಿ ತಂಡ, 4300 ಟ್ರಾನ್ಸಿಟ್‌ ತಂಡ ಕೆಲಸ ಮಾಡಲಿದ್ದು, 96 ಲಕ್ಷ ಡೋಸ್‌ ಪೋಲಿಯೋ ಲಸಿಕೆ ಒದಗಿಸಲಾಗಿದೆ. ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಐದು ವರ್ಷದೊಳಗಿನ ಮಕ್ಕಳಿಗೆ ಈ ವರ್ಷವೂ ಲಸಿಕೆ ಹಾಕಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ಆ್ಯಪ್‌ನಲ್ಲಿ ಲಸಿಕೆ ಕೇಂದ್ರ ಹುಡುಕಿ

ಪೋಲಿಯೋ ಹನಿ ಹಾಕಿಸಲು ಹತ್ತಿರದ ಲಸಿಕಾ ಕೇಂದ್ರ ಪತ್ತೆಗೆ ಸಹಕಾರಿಯಾಗುವ ಮೊಬೈಲ್‌ ಆ್ಯಪ್‌ನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದು, ಮೊಬೈಲ್‌ನಲ್ಲೇ ಲಸಿಕಾ ಕೇಂದ್ರ ಮಾಹಿತಿ ಪಡೆಯಬಹುದು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘ನಿಯರ್‌ಬೈ ವ್ಯಾಕ್ಸಿನೇಷನ್‌ ಸೆಂಟರ್‌’ (nearby vaccination centre karnataka) ಎಂದು ಟೈಪ್‌ ಮಾಡಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲಿ ಲೊಕೇಷನ್‌ ಆನ್‌ ಮಾಡಿಕೊಂಡರೆ ಆ್ಯಪ್‌ನಲ್ಲಿ ಹತ್ತಿರದಲ್ಲಿರುವ ಲಸಿಕಾ ಕೇಂದ್ರಕ್ಕೆ ನೇವಿಗೇಷನ್‌ ತೋರಿಸುತ್ತದೆ.


 

Follow Us:
Download App:
  • android
  • ios