Asianet Suvarna News Asianet Suvarna News

ಕಂಟೇನರ್‌ನಲ್ಲಿ 39 ಹೆಣಗಳು: ಬೆಚ್ಚಿ ಬಿತ್ತು ವಿಶ್ವದ ಪ್ರಮುಖ ನಗರ!

ಟ್ರಕ್ ಕಂಟೇನರ್‌ನಲ್ಲಿ ಬರೋಬ್ಬರಿ 39 ಶವ ಪತ್ತೆ| 39 ಶವಗಳನ್ನು ನೋಡಿ ಬೆಚ್ಚಿ ಬಿದ್ದ ವಿಶ್ವದ ಪ್ರಮುಖ ನಗರ|  ಪೂರ್ವ ಲಂಡನ್‌ನ ಗ್ರೇಸ್ ಕೈಗಾರಿಕಾ ಪ್ರದೇಶದಲ್ಲಿ ನಿಂತಿದ್ದ ಅನಾಮಿಕ ಟ್ರಕ್‌| ಸಂಶಯದ ಆಧಾರದ ಮೇಲೆ ಉತ್ತರ ಐರ್ಲೆಂಡ್‌ನ 25 ವರ್ಷದ ಯುವಕನ ಬಂಧನ| ಶವಗಳನ್ನು ಹೊತ್ತು ಬಲ್ಗೇರಿಯಾದಿಂದ ಲಂಡನ್ ಹೊರ ವಲಯ ತಲುಪಿದ ಟ್ರಕ್| 

Police Confirms 39 Bodies Found In Truck Container East Of London
Author
Bengaluru, First Published Oct 23, 2019, 3:21 PM IST

ಲಂಡನ್(ಅ.23): ಬಲ್ಗೇರಿಯಾದಿಂದ ಬಂದಿದೆ ಎಂದು ಶಂಕಿಸಲಾದ ಟ್ರಕ್‌ವೊಂದರಲ್ಲಿ ಬರೋಬ್ಬರಿ 39 ಶವಗಳು ಪತ್ತೆಯಾಗಿದ್ದು, ಇಡೀ ಲಂಡನ್ ನಗರ ಬೆಚ್ಚಿ ಬಿದ್ದಿದೆ.

ಪೂರ್ವ ಲಂಡನ್‌ನ ಗ್ರೇಸ್ ಕೈಗಾರಿಕಾ ಪ್ರದೇಶದಲ್ಲಿ ನಿಂತಿದ್ದ ಅನಾಮಿಕ ಟ್ರಕ್‌ನ್ನು ಪೊಲೀಸರು ತೆರೆದು ನೋಡಿದಾಗ ಬರೋಬ್ಬರಿ 39 ಶವಗಳು ದೊರೆತಿವೆ ಎನ್ನಲಾಗಿದೆ.

ಈ ಕುರಿತು ಮಹಿತಿ ನೀಡಿರುವ ಎಸೆಕ್ಸ್ ಪೊಲೀಸ್ ಮುಖ್ಯಸ್ಥ ಆಂಡ್ರ್ಯೂ ಮರಿನರ್, ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕ ಹಾಗೂ ಉತ್ತರ ಐರ್ಲೆಂಡ್‌ನ 25 ವರ್ಷದ ಓರ್ವ ಯುವಕನನ್ನು ಸಂಶಯದ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ನಗರದ ಹೊರಗಡೆ 39 ಶವಗಳು ದೊರೆತಿರುವ ಸುದ್ದಿ ಇಡೀ ಲಂಡನ್ ನಿವಾಸಿಗರನ್ನು ಬೆಚ್ಚಿ ಬೀಳಿಸಿದ್ದು, ಬಲ್ಗೇರಿಯಾದಿಂದ ಶವಗಳನ್ನು ಹೊತ್ತ ಟ್ರಕ್ ದೇಶ ಪ್ರವೇಶಿಸಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೊರಿಸ್ ಜಾನ್ಸನ್, ಇದೊಂದು ದುರದೃಷ್ಟಕರ ಘಟನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಸ್ವಾಂತ್ವನ ಹೇಳಿದ್ದಾರೆ. 

Follow Us:
Download App:
  • android
  • ios