Asianet Suvarna News Asianet Suvarna News

ಬಂದ್ ನಡುವೆ ಸಮಸ್ತ ಜನತೆಗೆ ನರೇಂದ್ರ ಮೋದಿ ಬರೆದ ಪತ್ರ...?

ಪ್ರಧಾನಿ ನರೇಂದ್ರ ಮೋದಿ ಮನ್‌ ಕಿ ಬಾತ್ ಮೂಲಕ ದೇಶದ ನಾಗರಿಕರೊಂದಿಗೆ ಮಾತನಾಡುವ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ದೇಶ ಜನರನ್ನು ಉದ್ದೇಶಿಸಿ ಒಂದು ಪತ್ರ ಬರೆದಿದ್ದಾರೆ!  ಅದು ಕನ್ನಡದಲ್ಲಿ...! ಹೌದು ಸೋಶಿಯಲ್ ಮೀಡಿಯಾದಲ್ಲಿ ಪತ್ರವೊಂದು ವೈರಲ್ ಆಗಿದೆ. ಯಾವ ಮೂಲದಿಂದ ಬಂದಿದೆ ಎಂಬುದು ಗೊತ್ತಿಲ್ಲದಿದ್ದರೂ ನೂರಾರು ವಿಚಾರಗಳು ಅಡಕವಾಗಿವೆ.

PM Narendra Modi Writes Open Letter to People of India During Bharat Bandh Viral Check
Author
Bengaluru, First Published Jan 8, 2019, 5:43 PM IST

ಬೆಂಗಳೂರು[ಜ.08]  ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಮಸ್ತ ಜನರಿಗೆ ಪತ್ರ ಬರೆದಿದ್ದಾರೆ. ಹೌದು ಮೋದಿಯವರಿಂದ ಬಂದ ಸಂದೇಶ ಎಂಬದೊಂದು ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪತ್ರ ಹೀಗಿದೆ... “ಪ್ರಿಯವಾದ ಭಾರತೀಯರಿಗೆ ನಮಸ್ಕಾರಗಳು ನಾನು ಭಾರತ ಪ್ರಧಾನಿ ನರೇಂದ್ರ ಮೋದಿ”. ನನ್ನ ಈ ಪಟ್ಟದಲ್ಲಿ ಕೂರಿಸಿ ನಾಲ್ಕೂವರೆ ವರುಷ ಆಗ್ತಾ ಬಂತು. ಈ ಸಂದರ್ಭದಲ್ಲಿ ನಾನು ನಿಮ್ಮ ಬಳಿ ಕೆಲವು ವಿಷಯ ಹಂಚಿಕೊಳ್ಳಲಿಚ್ಛಿಸುತ್ತೆನೆ. ನಾನು ಈ ಪಟ್ಟದಲ್ಲಿ ಕೂತಾಗ ಅದು ಮುಳ್ಳಿನ ಕುರ್ಚಿಯಾಗಿತ್ತು.

ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಬರಿ ಭ್ರಷ್ಟಾಚಾರ ಹಾಗೂ ಸಾಲಗಳ ಹೊರೆಯನ್ನ ಬಿಟ್ಟುಹೋಗಿತ್ತು. ಅದರ ಫಲವಾಗಿ ಪ್ರತಿ ಸರ್ಕಾರಿ ಸ್ವಾಮ್ಯವಿರುವ ಸಂಸ್ಥೆಗಳು ನಷ್ಟಗಳಲ್ಲಿ ತುಂಬಿತ್ತು. ವಿದೇಶಗಳಲ್ಲಿ ಬರೀ ಸಾಲಗಳೇ ತುಂಬಿತ್ತು.ಇರಾನಿನ ಸಾಲ 48,000 ಕೋಟಿ. U.A.E ಗೆ 40,000 ಕೋಟಿ ಸಾಲ. ದೇಶದ ತೈಲ ಕಂಪೆನಿಗಳಿಗೆ 1,33,000 ಕೋಟಿ ಸಾಲ. ವಿಮಾನಯಾನ ಸಂಸ್ಥೆಗಳಿಗೆ 58,000 ಕೋಟಿ. ರೈಲ್ವೇ ಇಲಾಖೆ 22,000 ಕೋಟಿ. B.S.N.L 1,700 ಕೋಟಿ. ದೇಶ ರಕ್ಷಣೆಗೆ ಕನಿಷ್ಠ ಆಯುಧ ಬುಲ್ಲೆಟ್ ಫ್ರೂಪ್ ಜಾಕೆಟ್‌ ಗಳಿರಲಿಲ್ಲ.ಅಕಸ್ಮಾತ್ ಯುದ್ಧ ಶುರುವಾದರೆ 4 ದಿನಕ್ಕಾಗುವಷ್ಟೂ ಬಾಂಬ್ ಇರಲಿಲ್ಲ. ಅಷ್ಟೇ ಅಲ್ಲಾ ನಿಘಾ ಘಟಕವೂ ವಿಫಲವಾಗಿತ್ತು. ಎಲ್ಲಿ ಬಾಂಬು ಸ್ಫೋಟವಾಗುತ್ತದೋ ಎಂಬ ಆತಂಕದಲ್ಲಿ ಜನ ಭಯಭೀತರಾಗಿದ್ರೂ.ಅಂತಹ ಪರಿಸ್ಥಿತಿಯಲ್ಲಿ ನಾನು ಪೀಠ ಅಲಂಕರಿಸಿದೆ.

ವೈರಲ್ ಆಯ್ತು 'ಮೋದಿ ಬಯೋಪಿಕ್' ಫಸ್ಟ್ ಲುಕ್!

ಆಗ ಈ ವ್ಯವಸ್ಥೆಯನ್ನ ಸರಿ ಮಾಡುವುದು ನನಗೆ ಸವಾಲಿನ ವಿಷಯವಾಗಿತ್ತು.ಭಾರತೀಯರ ಅದೃಷ್ಟ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಯ್ತು. ಆ ಲಾಭ ನಿಮಗೆ ಸಿಗಲಿಲ್ಲ, ನಾನು ಆ ಹಣವನ್ನ ತೆರಿಗೆಯಾಗಿ ತೆಗೆದುಕೊಂಡೆ, ನನ್ನ ತುಂಬಾ ಇಷ್ಟಪಡುವ ನೀವು ನನ್ನ ಬಗ್ಗೆ ಕೋಪಿಸಿಕೊಂಡಿರಿ, ಪರವಾಗಿಲ್ಲ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗುವುದು. ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪುಗಳೆಲ್ಲಾ ನಮಗೆ ಶಾಪವಾಯ್ತು. ಆ ಹಿಂದೆ ತೈಲ 120 ಡಾಲರ್ ಆದರೂ 85 ರೂಪಾಯಿಗೆ ಮಾರಾಟಮಾಡ್ತಿದ್ರೂ, ಅದು ಹೇಗೆ ಸಾಧ್ಯ. ಅವರು ತೈಲವನ್ನ ಸಾಲವಾಗಿ ತರ್ತಿದ್ರೂ ಜನಾಕ್ರೋಶ ಸರ್ಕಾರದ ಮೇಲೆ ಬೀಳಬಾರದೆಂದು. ಹೀಗೆ ವಿದೇಶಗಳಲ್ಲಿ 2,50,000 ಕೋಟಿ ಸಾಲ ಮಾಡಿದ್ರೂ. ಈ ಮೊತ್ತದ ವಾರ್ಷಿಕ ಬಡ್ಡಿ 25,000 ಕೋಟಿಯಾಗಿತ್ತು. ಹೀಗೆ ದೇಶ ಸಾಲದ ಸುಳಿಗೆ ಸಿಕ್ಕಿಕೊಂಡಿತ್ತು.ಸಾಲ ಮರುಪಾವತಿಸದೆ ಇಂಧನ ಪೂರೈಕೆ ಸಾಧ್ಯವಿಲ್ಲವೆಂದರು.

ದೆಹಲಿಯಲ್ಲಿ ಯಡಿಯೂರಪ್ಪ-ಅಮಿತ್ ಶಾ ಗುಪ್ತ ಸಭೆ

ಅದಕ್ಕೆ ನಾನು ಸ್ವಲ್ಪ ತೆರಿಗೆ ರೂಪದಲ್ಲಿ ವಸೂಲು ಮಾಡಬೇಕಾಯ್ತು. 2,50,000 ಕೋಟಿ ಸಾಲ ಬಡ್ಡಿ ಸಮೇತ ತೀರಿಸಿದೆ. ರೈಲ್ವೆ ಇಲಾಖೆಯ ನಷ್ಟ ತುಂಬಿದೆನು. ಹಿಂದಿನ ಸರ್ಕಾರ ಪ್ರಾರಂಭಿಸಿ ಬಿಟ್ಟುಹೋಗಿದ್ದ ಪ್ರಾಜೆಕ್ಟ್ ಗಳನ್ನ ಪೂರ್ತಿಮಾಡಿದೆ.ಬುಲ್ಲೆಟ್ ಟ್ರೈನ್ ಸ್ಪೀಡ್ ಟ್ರೈನ್ ಗಳನ್ನ ವಿದ್ಯುತ್ತೀಕರಣ ಮಾಡಿಸುತ್ತಿದ್ದೇನೆ. ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟೆ. 5 ಕೋಟಿ ಉಚಿತ ಗ್ಯಾಸ್ ಸಂಪರ್ಕ ಕೊಟ್ಟಿದ್ದೇನೆ. ಸುಮಾರು 40 ಸಾವಿರ ಕಿಲೋ ಮೀಟರ್ ರಸ್ತೆ ಸಿದ್ಧವಾಗಿದೆ.1 ಲಕ್ಷ 40 ಸಾವಿರ ಕೋಟಿ ಮುದ್ರ ಲೋನ್ ಯುವ ಜನತೆಗೆ ಕೊಟ್ಟಾಯಿತು. ನಮ್ಮಸೈನಿಕರಿಗೆ ಆಧುನಿಕ ಆಯುಧಗಳನ್ನ ಪೂರೈಸಿದೆ.ಈ ಹಣ ಎಲ್ಲಿಯದು? ಅದು ನಿಮ್ಮ ತ್ಯಾಗದ ಫಲ.

ಕೊನೆಯದಾಗಿ ಒಂದು ಮಾತು, ನೀವು ಒಂದು ಕುಟುಂಬದ ಹಿರಿಯನಾಗಿ ನಿಮ್ಮ ಕುಟುಂಬ ಸಾಲದ ಶೂಲಕ್ಕೆ ಸಿಲುಕಿದಾಗ ಒಂದಿಷ್ಟು ಹಣ ಸಿಕ್ಕರೆ ಏನು ಮಾಡುತ್ತೀರಿ?  ಸುಮ್ಮನೆ ಖರ್ಚು ಮಾಡುತ್ತೀರಾ? ಅಥವಾ  ಸಾಲ ತೀರಿಸುತ್ತೀರಾ?  ಕೊಟ್ಟವನು ಸುಮ್ಮನಿರುತ್ತಾನೆಯೇ? ಆ ಕುಟುಂಬದ ಭವಿಷ್ಯ ಏನಾಗಬೇಡ. ಪ್ರತಿ ಪಕ್ಷಗಳು ಮಾಡುವ ನಾಟಕವನ್ನ ನಂಬಬೇಡಿ. ಈ ದೇಶದ ಅಭಿವೃದ್ಧಿಗೆ ಸಹಕರಿಸಿ.ಪ್ರತಿಪಕ್ಷಗಳು ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೆ ಸಾಕು ಜನರನ್ನ ಹೇಗೆ ಮೂರ್ಖರನ್ನಾಗಿ ಮಾಡಬೇಕೆಂದು ಕಾಯ್ತಾ ಇರುತ್ತೆ. ಒಂದು ಭಾರಿ ಯೋಚಿಸಿ, ಇತರರಿಗೂ ತಿಳಿಸಿ.
-ಇಂತಿ ನಿಮ್ಮ ನರೇಂದ್ರ ಮೋದಿ.

Follow Us:
Download App:
  • android
  • ios