Asianet Suvarna News Asianet Suvarna News

ಮೈಸೂರು ಹುಲ್ಲಿನ ಮೇಲೆ ಮೋದಿ ವಾಕ್, KKR ತಂಡಕ್ಕೆ ದಿಗ್ಗಜರ ಸಾಥ್; ಇಲ್ಲಿವೆ ಅ.6ರ ಟಾಪ್ 10 ಸುದ್ದಿ!

ರಾಜ್ಯ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿದೆ. ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ಎರಡು ಬಣಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮುಂದಿನ ವಾರ  ಮೈಸೂರಿನ ಹುಲ್ಲು ಹಾಸಿನ ಮೇಲೆ ನಡೆದಾಡಲಿದ್ದಾರೆ. 2020ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ KKR ತಂಡಕ್ಕೆ ಇಬ್ಬರು ದಿಗ್ಗಜರನ್ನು ಸೇರಿಸಿಕೊಂಡಿದೆ.  ಆ್ಯಂಕರ್ ಅನುಶ್ರೀ , ಪಾಕ್ ಕುತಂತ್ರ ಸೇರಿದಂತೆ ಅ.6 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

PM narendra modi to KKR ipl team top 10 news of October 5
Author
Bengaluru, First Published Oct 6, 2019, 5:42 PM IST

1) ಕಾಂಗ್ರೆಸ್‌ ಒಳಜಗಳ : ಅಧ್ಯಯನಕ್ಕೆ ಶಾಸಕರ ಜತೆ ಮಿಸ್ತ್ರಿ ಸಭೆ!

PM narendra modi to KKR ipl team top 10 news of October 5

ಕಾಂಗ್ರೆಸ್‌ನ ಆಂತರಿಕ ಬೇಗುದಿಗೆ ಮುಖ್ಯ ಕಾರಣವಾಗಿರುವ ಪ್ರತಿಪಕ್ಷ ನಾಯಕನ ಹುದ್ದೆಗೆ ಯಾರು ಸೂಕ್ತ ಎಂಬುದನ್ನು ನಿರ್ಧರಿಸಲು ಹಾಗೂ ಉಭಯ ಬಣಗಳ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ಸೂತ್ರ ಪತ್ತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ಹಿರಿಯ ನಾಯಕರ ಹಾಗೂ ಶಾಸಕರ ಸಭೆ ನಡೆಸಲಿದ್ದಾರೆ. 

2) ಮೈಸೂರಿನ ಹುಲ್ಲು ಹಾಸಿನ ಮೇಲೆ ಮೋದಿ, ಕ್ಸಿ ಜಿನ್‌ಪಿಂಗ್‌ ನಡಿಗೆ!

PM narendra modi to KKR ipl team top 10 news of October 5

ಮುಂದಿನ ವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ದೇವಾಲಯ ನಗರಿ ಮಹಾಬಲಿಪುರಂ ಸಜ್ಜಾಗುತ್ತಿದೆ.  ವಿಶೇಷವೆಂದರೆ ಮೋದಿ ಹಾಗೂ ಕ್ಸಿಜಿನ್‌ಪಿಂಗ್‌ ಓಡಾಡುವ ಜಾಗದಲ್ಲಿ ಬೆಳೆಸಿದ ಹುಲ್ಲನ್ನು ಮೈಸೂರಿನಿಂದ ತರಿಸಿಕೊಳ್ಳಲಾಗಿದೆ.


3) ಶಿಶುವನ್ನು ಬಿಟ್ಟು ತಾಯಿ ಪರಾರಿ, ವೈದ್ಯರೂ ಬೀದಿಗೆಸೆದ್ರು, ನರಳಾಡ್ತಾ ಪ್ರಾಣಬಿಟ್ಟ ಕಂದ!

PM narendra modi to KKR ipl team top 10 news of October 5

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಸಮಾಜ ತಲೆತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಅವಿವಾಹಿತ ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿದ್ದು, ವೈದ್ಯರು ಕೂಡಾ ದನ್ನು ದೇವಸ್ಥಾನದ ಬಳಿ ರಸ್ತೆಗೆಸೆದು ಹೋಗಿದ್ದಾರೆ. ರಸ್ತೆ ಬದಿಯಲ್ಲಿ ನರಳಾಡುತ್ತಿದ್ದ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದೆ. 

4) IPL 2020: KKR ತಂಡ ಕೂಡಿಕೊಂಡ ಮತ್ತಿಬ್ಬರು ದಿಗ್ಗಜರು..!

PM narendra modi to KKR ipl team top 10 news of October 5

ಕಳೆದ 5 ವರ್ಷಗಳಿಂದಲೂ ಐಪಿಎಲ್ ಪ್ರಶಸ್ತಿ ಬರ ಅನುಭವಿಸುತ್ತಿರುವ ಕೋಲ್ಕತಾ ನೈಟ್‌ರೈಡ​ರ್ಸ್ ತಂಡ ಮುಂಬರುವ 2020ರ ಟೂರ್ನಿಯಲ್ಲಿ ಕಪ್ ಎತ್ತಿ ಹಿಡಿಯಲು ಪಣತೊಟ್ಟಿದೆ.ಹೀಗಾಗಿ ಇಬ್ಬರು ದಿಗ್ಗಜ ಕ್ರಿಕೆಟಿಗರನ್ನು ಕೆಕೆಆರ್ ತಂಡಕ್ಕೆ ಸೇರಿಸಿಕೊಂಡಿದೆ. 

5)  ಬೆನ್ನಿನ ಜೊತೆಗೆ ಮೆದುಳಿಗೂ ಶಸ್ತ್ರಚಿಕಿತ್ಸೆ; ಹಾರ್ದಿಕ್ ಟ್ರೋಲ್ ಮಾಡಿದ ರಾಹುಲ್!

PM narendra modi to KKR ipl team top 10 news of October 5
ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ಹಾರ್ದಿಕ್ ಪಾಂಡ್ಯ ಫೋಟೋ ಶೇರ್ ಮಾಡಿದ್ದರು. ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಎಲ್ಲರು ಹಾರೈಸಿದ್ದರು. ಇದೇ ವೇಳೆ ಕೆಎಲ್ ರಾಹುಲ್ ಪಾಂಡ್ಯಾನನ್ನು ಟ್ರೋಲ್ ಮಾಡಿದ್ದಾರೆ.


6) ಆ್ಯಂಕರ್ ಅನುಶ್ರೀ ಒಂದು ದಿನದ ಸಂಭಾವನೆ ಇಷ್ಟು!...

PM narendra modi to KKR ipl team top 10 news of October 5

ಈ ಅನುಶ್ರೀ ಮಾತನಾಡಲು ಆರಂಭಿಸಿದರೆ ಅವರನ್ನು ನೋಡುವುದಾ, ಅವರ ಮಾತು ಕೇಳುವುದಾ ಕನ್‌ಫ್ಯೂಸ್ ಆಗುತ್ತದೆ. ಸೌಂದರ್ಯ, ಅದಕ್ಕೆ ತಕ್ಕಂತೆ ಉಡುಗೆ, ಮ್ಯನರಿಸಂ, ಕನ್ನಡದ ಮೇಲಿನ ಹಿಡಿತ ಎಲ್ಲವೂ ಅನುಶ್ರೀಯವರನ್ನು ಪರ್ಫೆಕ್ಟ್ ಆಗಿಸಿವೆ. ಕನ್ನಡದ ಸ್ಟಾರ್ ನಿರೂಪಕಿಯಾಗಿ ಬೆಳೆದಿದ್ದಾರೆ.

7) ಯೂಟ್ಯೂಬ್ ನೋಡಿ ಕಳ್ಳತನಕ್ಕಿಳಿದ ಖತರ್ನಾಕ್ ಕಳ್ಳರು..!

PM narendra modi to KKR ipl team top 10 news of October 5

ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಪ್ರಯತ್ನಿಸಿದ ಇಬ್ಬರು ಕಳ್ಳರು ಪ್ರಥಮ ಪ್ರಯತ್ನದಲ್ಲೇ ಪೊಲೀಸರ ಅತಿಥಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

8) ಸರ್ಕಾರ ವಜಾಗೊಳಿಸಿ ರಾಜೀನಾಮೆ ನೀಡಲು ಒತ್ತಾಯ!

PM narendra modi to KKR ipl team top 10 news of October 5

ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲು ಅಸಮರ್ಥರಾಗಿರುವ ಸಂಸದರು ಸಾಮೂಹಿಕ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

9) ಗಾಳಿಗೆ ಶಿಕ್ಷೆ ಕೊಡಿ: ಟೆಕ್ಕಿ ಸಾವಿಗೆ 'ಬ್ಯಾನರ್ ನಾಯಕರು' ಕೊಟ್ಟ ಹೇಳಿಕೆ ನೋಡಿ!

PM narendra modi to KKR ipl team top 10 news of October 5

ತಲೆ ಮೇಲೆ ಬ್ಯಾನರ್ ಬಿದ್ದು ಮಹಿಳಾ ಟೆಕ್ಕಿಯೋರ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಹಿರಿಯ ನಾಯಕ ಸಿ. ಪೊನ್ನಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೆಕ್ಕಿ ಶುಭಶ್ರೀ ರವಿ ಸಾವಿಗೆ ಕಾರಣವಾದ ಬ್ಯಾನರ್ ಬೀಳಲು ಗಾಳಿ ಕಾರಣ ಎಂದು ಅವರು ಹೇಳಿದ್ದಾರೆ.

10) ಅಸಲಿ ಮುಖದ ಅನಾವರಣ: ಪಾಕ್ ರಾಯಭಾರ ಕಚೇರಿಯಿಂದ ಹೆಣವಾಗಲು ಉಗ್ರರಿಗೆ ಹಣ!...

PM narendra modi to KKR ipl team top 10 news of October 5

ಪಾಕಿಸ್ತಾನ ತನ್ನ ನರಿಬುದ್ಧಿ ಎಂದಿಗೂ ಬಿಡಲ್ಲ ಎಂಬುದಕ್ಕೆ ಒಂದಲ್ಲ ನೂರು ಉದಾಹರಣೆ ಸಿಗುತ್ತವೆ. ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಹವಣಿಸುತ್ತಿದ್ದು, ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯೇ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಎನ್ಐಎ ಬಹಿರಂಗಪಡಿಸಿದೆ. 

Follow Us:
Download App:
  • android
  • ios