Asianet Suvarna News Asianet Suvarna News

‘ದಲಿತನ ನಾಯಕನ ಅವಧಿ ಪೂರ್ಣಕ್ಕೆ ಕಾಂಗ್ರೆಸ್ ಫುಲ್ ಸ್ಟಾಪ್’

ದಲಿತನ ನಾಯಕನ ಹುದ್ದೆಯ ಅವಧಿಯನ್ನು ಪೂರ್ಣ ಮಾಡಲು ಕಾಂಗ್ರೆಸ್ ಫುಲ್ ಸ್ಟಾಪ್ ಇಟ್ಟಿದೆ. ಉದ್ದೇಶಪುರ್ವಕವಾಗಿಯೇ ನಾಯಕನನ್ನು ಹೊರದಬ್ಬಲಾಗಿದೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. 

PM Narendra Modi Slams Congress Leaders
Author
Bengaluru, First Published Nov 19, 2018, 10:36 AM IST

ಮಹಾಸಮುಂದ್ (ಛತ್ತೀಸ್‌ಗಢ): ಕಾಂಗ್ರೆಸ್ ಹಾಗೂ ನೆಹರು-ಗಾಂಧಿ ಕುಟುಂಬದ ವಿರುದ್ಧ ಭಾವನಾತ್ಮಕ ವಿಷಯಗಳ ಮೂಲಕ ವಾಕ್‌ಪ್ರಹಾರ ನಡೆಸುವುದನ್ನು ಮುಂದುವರಿಸಿರುವ ಪ್ರಧಾನಿ ಮೋದಿ ಅವರು, ‘ದಲಿತ ನಾಯಕರಾದ ಸೀತಾರಾಂ ಕೇಸರಿ ಅವರ ಕಾಂಗ್ರೆಸ್ ಅಧ್ಯಕ್ಷಗಿರಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಸೋನಿಯಾ ಗಾಂಧಿಗೆ ಅವಕಾಶ ಕೊಡಿಸುವ ಉದ್ದೇಶದಿಂದ ಅವರನ್ನು ಅಧಿಕಾರದಿಂದ ಹೊರದಬ್ಬಲಾಯಿತು’ ಎಂದು ಟೀಕಿಸಿದರು.

ಭಾನುವಾರ ಇಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ರ್ಯಾಲಿಯಲ್ಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಒಂದೇ ಕುಟುಂಬದ ೪ ತಲೆಮಾರುಗಳು ಈ
ದೇಶವನ್ನು ಆಳಿದವು. ಅಧಿಕಾರದಿಂದ ಲಾಭ ಪಡೆದವು. ಆದರೆ ದೇಶಕ್ಕೆ ಇದರಿಂದ ಲಾಭವಾಗಲಿಲ್ಲ’ ಎಂದು ವಿಷಾದಿಸಿದರು. ‘ದಲಿತನೆಂಬ ಕಾರಣಕ್ಕೆ ಸೀತಾರಾಂ ಕೇಸರಿ ಅವರಿಗೆ ಅಧಿಕಾರ ಪೂರ್ಣಗೊಳಿಸಲು ಬಿಡಲಿಲ್ಲ. 

ಸೋನಿಯಾ ಗಾಂಧಿ ಅಧ್ಯಕ್ಷೆ ಯಾಗಬೇಕು ಎಂಬ ಉದ್ದೇಶದಿಂದ ಕೇಸರಿ ಅವರನ್ನು ಪಕ್ಷದ ಕಚೇರಿಯಿಂದ ಫುಟ್‌ಪಾತ್ ಮೇಲೆ ಹೊರದಬ್ಬಲಾಯಿತು’ ಎಂದು ಕುಟುಕಿದರು.

Follow Us:
Download App:
  • android
  • ios