Asianet Suvarna News Asianet Suvarna News

ನಾಲ್ಕೂವರೆ ವರ್ಷಗಳಲ್ಲಿ ಬದಲಾದ ವಾರಣಾಸಿ: ಮೋದಿ ಟ್ವೀಟ್ ವೈರಲ್

ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ 4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

PM Modi tweets changing Varanasi photos
Author
Varanasi, First Published Nov 12, 2018, 12:48 PM IST

ಪ್ರಧಾನ ಮಂತ್ರಿ ಮೋದಿ 15ನೇ ಕಾಶಿ ಯಾತ್ರೆಗೂ ಮೊದಲು ಬದಲಾಗುತ್ತಿರುವ ಬನಾರಸ್ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬನಾರಸ್‌ನಲ್ಲಾದ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಪ್ರಧಾನಿ ಮೋದಿ ಸೋಮವಾರದಂದು ಲೋಕಾರ್ಪಣೆ ಮಾಡಲಿರುವ ಯೋಜನೆಗಳ ಫೋಟೋಗಳು ಇದರಲ್ಲಿವೆ.

ವಾಸ್ತವವಾಗಿ, ಭಾನುವಾರದಂಂದು ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯಿಂದ 'ಬದಲಾಗುತ್ತಿರುವ ಬನಾರಸ್'ನ  4 ಫೋಟೋಗಳನ್ನು ಶೇರ್ ಮಾಡಲಾಗಿದೆ. ಪ್ರಧಾನಿ ಮೋದಿಯ ಈ ಟ್ವೀಟ್‌ನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಸೇರಿದಂತೆ ಎಲ್ಲಾ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ಟ್ವಿಟರ್ ಖಾತೆಯಿಂದ ರೀಟ್ವೀಟ್ ಮಾಡಲಾಗಿದೆ. ಇದಾದ ಬಳಿಕ ಜನಸಾಮಾನ್ಯರೂ ಈ ಫೋಟೋಗಳನ್ನು ಶೇರ್ ಮಾಡಲಾರಂಭಿಸಿದ್ದಾರೆ.

ಪಿಎಂ ಮೋದಿಯ ಟ್ವೀಟ್‌ನಲ್ಲಿ ರಿಂಗ್ ರೋಡ್‌ನ ನಾಲ್ಕು ಫೋಟೋಗಳನ್ನು ಶೇರ್ ಮಾಡುತ್ತಾ ''ಈ ಯೋಜನೆಗಳನ್ನು ನಾನು ನಾಳೆ ಉದ್ಘಾಟಿಸಲಿದ್ದೇನೆ. ಇದು ಕಾಶಿ ನಿವಾಸಿಗಳಿಗೆ ವ್ಯವಸ್ಥೆ ಕಲ್ಪಿಸುವ ಹಾದಿಯಾಗಲಿದೆ ಹಾಗೂ ಆರಾಮ ನೀಡಲಿದೆ. ಈ ಯಾತ್ರೆ ಸಮಯ ಹಾಗೂ ಇಂಧನ ಎರಡನ್ನೂ ಉಳಿಸಲಿದೆ'' ಎಂದಿದ್ದಾರೆ. 

ತಮ್ಮ ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ ಇನ್ಮುಂದೆ ವಾರಣಾಸಿ ತಲುಪುವುದೂ ಸುಲಭವಾಗಲಿದೆ. ಜೌನ್‌ಪುರ್, ಸುಲ್ತಾನ್‌ಪುರ್ ಹಾಗೂ ಲಕ್ನೋ ತಲುಪುವುದೂ ಸುಲಭವಾಗುತ್ತದೆ. ಇದು ಕಾಶಿಯ ಜನರ ಗೆಲುವಾಗಿದೆ. 

ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ದೀನಾಪುರ್ ಸೀವೇಜ್ ಟ್ರೀಟ್‌ಮೆಂಟ್ ಪ್ಲಾನ್‌ನ ನಾಲ್ಕು ಫೋಟೋಗಳನ್ನು ಶೇರ್ ಮಾಡುತ್ತಾ ಇದು ಕಾಶಿಯ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಗರ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಇದು ಪ್ರಭಾವ ಬೀರಲಿದೆ. ಇವೆಲ್ಲದರೊಂದಿಗಗೆ ಗಂಗಾ ನದಿಯ ಸ್ವಚ್ಛತೆಗೆ ಇದು ಮತ್ತಷ್ಟು ಶಕ್ತಿ ತುಂಬಲಿದೆ ಎಂದಿದ್ದಾರೆ.
 

Follow Us:
Download App:
  • android
  • ios