Asianet Suvarna News Asianet Suvarna News

ಪಾಕ್‌ಗೆ ನೀರು ನಿಲ್ಲಿಸುವೆ: ಪ್ರಧಾನಿ ಮೋದಿ ಅಚ್ಚರಿಯ ಘೋಷಣೆ!

ಪಾಕಿಸ್ತಾನಕ್ಕೆ ಭಾರತದಿಂದ ಹರಿಯುವ ನೀರು ನಿಲ್ಲಿಸುವುದಾಗಿ ಹೇಳಿದ ಪ್ರಧಾನಿ| ಹರಿಯಾಣ, ರಾಜಸ್ಥಾನದ ನೀರು ಪಾಕ್‌ಗೆ ಹರಿಯದಂತೆ ಕ್ರಮ ಕೈಗೊಳ್ಳುವ ಭರವಸೆ| ಹರಿಯಾಣಧ ಚರ್ಕಿ ದಾದ್ರಿಯಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ| ಪಾಕಿಸ್ತಾನಕ್ಕೆ ನೀರು ನಿಲ್ಲಿಸಿ ನಿಮ್ಮ ಮನೆಗಳಿಗೆ ನೀರು ತರುವುದಾಗಿ ಹೇಳಿದ ಪ್ರಧಾನಿ| ರೈತರ ಹೊಲಗಳಿಗೆ ನೀರು ಹರಿಸುವುದಾಗಿ ಪ್ರಧಾನಿ ಭರವಸೆ| 'ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ'|

PM Modi Says India Will Not Allow Water To Flow Pakistan
Author
Bengaluru, First Published Oct 15, 2019, 8:12 PM IST

ಚರ್ಕಿ ದಾದ್ರಿ(ಅ.15): ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಶೀಘ್ರದಲ್ಲೇ ಮತ್ತೊಮ್ಮೆ ಸೂಕ್ತ ಪಾಠ ಕಲಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಹರಿಯಾಣದ ಚಕ್ರಿ ದಾದ್ರಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ನೀರು ಹರಿಯದಂತೆ ತಡೆ ಹಿಡಿಯಲು ತಮ್ಮ ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿದರು.

ಕಳೆದ 70 ವರ್ಷಗಳಿಂದ ಭಾರತ ಮತ್ತು ಹರಿಯಾಣದ ರೈತರಿಗೆ ಸೇರಿದ ನೀರು ಪಾಕಿಸ್ತಾನಕ್ಕೆ ಹರಿದಿದೆ. ಆದರೆ ನಿಮ್ಮ ಮೋದಿ ಸರ್ಕಾರ ಈ ನೀರು ಪಾಕ್‌ಗೆ ಹರಿಯುವುದನ್ನು ತಡೆದು ನಿಮ್ಮ ಮನೆಗಳಿಗೆ ಹರಿಸಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನ ರೈತರಿಗೆ ಹಕ್ಕಿದೆ. ಹೀಗಾಗಿ ಈ ನೀರು ಪಾಕ್‌ಗೆ ಹರಿಯುವುದನ್ನು ತಡೆದು ನಿಮ್ಮ ಹೊಲಗಳಿಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೋದಿ ನುಡಿದರು.

ತಮಿಳುನಾಡಿನಲ್ಲಿ ಚೀನಾ ಅಧ್ಯಕ್ಷರೊಂದಿಗೆ ನಡೆದ ಅನೌಪಚಾರಿಕ ಶೃಂಗಸಭೆ ಕುರಿತು ಉಲ್ಲೇಖಿಸಿದ ಪ್ರಧಾನಿ, ಕ್ಸಿ ದಂಗಲ್ ಸಿನಿಮಾವನ್ನು ತುಂಬ ಮೆಚ್ಚಿಕೊಂಡಿದ್ದು, ಭಾರತದ ಹೆಣ್ಣುಮಕ್ಕಳ ಅದ್ಭುತ ಪ್ರದರ್ಶನವನ್ನು ಮೆಚ್ಚಿದ್ದಾರೆ ಎಂದದು ಹೇಳಿದರು. ಚೆನ್ನಾಗಿ ಬಿಂಬಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಬಬಿತಾ ಪೋಗಟ್ ಹರಿಯಾಣಧ ವಿಧಾನಸಭಾ ಚುನಾವಣೆಯಲ್ಲಿ ದಾದ್ರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ವಿಶೇಷ.

Follow Us:
Download App:
  • android
  • ios