Asianet Suvarna News Asianet Suvarna News

ರೈತ ಸಮ್ಮಾನ್ ಯೋಜನೆ: ಹಣ ಬಿಡುಗಡೆ ವೇಳೆ ಮೋದಿ ಘರ್ಜನೆ!

ಪ್ರಧಾನಮಂತ್ರಿ ರೈತ ಸಮ್ಮಾನ್ ಯೋಜನೆಗೆ ಚಾಲನೆ| ಕಿಸಾನ್ ಸಮ್ಮಾನ್ ಯೋಜನೆ ದೇಶದ ರೈತರ ಹಕ್ಕು ಎಂದ ಪ್ರಧಾನಿ ಮೋದಿ| ಗೋರಖ್ ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ ಮೋದಿ| ಯೋಜನೆ ಬಗ್ಗೆ ಅಪಪ್ರಚಾರ ಮಾಡುವವರಿಗೆರ ಬುದ್ದಿ ಕಲಿಸಿ ಎಂದ ಪ್ರಧಾನಿ|

PM Modi Launched Kissan Samman Scheme in Uttar Pradesh
Author
Bengaluru, First Published Feb 24, 2019, 1:56 PM IST

ಗೋರಖ್‌ಪುರ(ಫೆ.24): ಕಿಸಾನ್ ಸಮ್ಮಾನ್ ಯೋಜನೆ ದೇಶದ ರೈತರ ಹಕ್ಕಾಗಿದ್ದು, ಈ ಯೋಜನೆ ಕುರಿತು ಅಪಪ್ರಚಾರ ಮಾಡುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಗೋರಖ್‌ಪುರದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ ಮೋದಿ, ರೈತರನ್ನುದ್ದೇಶಿಸಿ ಭಾಷಣ ಮಾಡಿದರು.

ಈ ಹಿಂದಿನ ಸರ್ಕಾರಗಳು ರೈತರ ಉದ್ಧಾರದ ಬಗ್ಗೆ ಕೆವಲ ಮಾತನಾಡುತ್ತಿದ್ದವು, ಯೋಜನೆಗಳನ್ನು ಕಾಗದಕ್ಕೆ ಅಷ್ಟೇ ಸೀಮಿತಗೊಳ್ಳುತ್ತಿದ್ದವು. ಆದರೆ ನಮ್ಮ ಸರ್ಕಾರ ರೈತರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ರೈತರಿಗೆ ಅರ್ಪಿಸಿದೆ ಎಂದು ಮೋದಿ ಹೇಳಿದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ಆದಿಯಾಗಿ ಮಹಾಘಟಬಂಧನದಲ್ಲಿರುವ ಪಕ್ಷಗಳಿಗೆ ಆತಂಕ ಉಂಟಾಗಿತ್ತು. ಈ ಘೋಷಣೆಯಿಂದ ರೈತರು ಮೋದಿ ಪರವಾಗಲಿದ್ದಾರೆ ಎಂಬ ಆತಂಕದಿಂದ ಯೋಜನೆ ಬಗ್ಗೆ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪ್ರಧಾನಿ ಹರಿಹಾಯ್ದರು.
 

 

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ! 

ರೈತರ ಖಾತೆಗೆ ಮೋದಿ ಸರ್ಕಾರದಿಂದ ಹಣ: 2ನೇ ಕಂತು ಪಡೆಯಲು ಷರತ್ತುಗಳು ಅನ್ವಯ!

ಮೋದಿ 6000 ರು. ನಗದು : ಯಾರಿಗಿದೆ? ಯಾರಿಗಿಲ್ಲ?

ನಾಳೆ 55 ಲಕ್ಷ ರೈತರ ಖಾತೆಗೆ ಕೇಂದ್ರದಿಂದ 2000 ರೂ ನಗದು

Follow Us:
Download App:
  • android
  • ios