Asianet Suvarna News Asianet Suvarna News

ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?

ಅಯೋಧ್ಯೆ ಅನಗತ್ಯ ಹೇಳಿಕೆಗೆ ಕಡಿವಾಣ ಹಾಕಲು ಪ್ರಧಾನಿ ಮೋದಿ ಮನವಿ| ತೀರ್ಪಿಗೂ ಮುನ್ನ ಅನಗತ್ಯ ಹೇಳಿಕೆ ಬೇಡ ಎಂದು ಸ್ವಪಕ್ಷೀಯರಿಗೆ ಕಿವಿಮಾತು| ಶಾಂತಿ ಸೌಹಾರ್ದತೆ ಕಾಪಾಡಲು ವಿವಾದಾತ್ಮಕ ಹೇಳಿಕೆ ನೀಡದಂತೆ ಸ್ವಪಕ್ಷೀಯರಿಗೆ ತಾಕೀತು| ತೀರ್ಪನ್ನು ಸೋಲು ಅಥವಾ ಗೆಲುವಿನ ದೃಷ್ಟಿಯಿಂದ ನೋಡದಂತೆ ಮೋದಿ ಸೂಚನೆ| ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಪ್ರಧಾನಿ ಮನವಿ|

PM Modi Advise Ministers To Avoid Unnecessary Statements On Ayodhya
Author
Bengaluru, First Published Nov 7, 2019, 1:22 PM IST

ನವದೆಹಲಿ(ನ.07): ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ಅಂತಿಮ ತೀರ್ಪು ಹೊರಬೀಳಲು ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ತೀರ್ಪಿಗೂ ಮೊದಲೇ ಯಾವುದೇ ರೀತಿಯ ಅನಗತ್ಯ ಹೇಳಿಕೆಗೆ ಮುಂದಾಗದಂತೆ ಪ್ರಧಾನಿ ಮೋದಿ ಸ್ವಪಕ್ಷೀಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.

ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!

ದೇಶದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯದ ವಾತಾವರಣ ಕಾಪಾಡುವ ಅಗತ್ಯವಿದ್ದು, ಅಯೋಧ್ಯೆ ವಿವಾದ ಸಂಬಂಧ ಅನಗತ್ಯ ಹೇಳಿಕೆಗಳನ್ನು ನೀಡದಿರಿ ಎಂದು ಕೇಂದ್ರ ಸಚಿವರೂ ಸೇರಿದಂತೆ ಬಿಜೆಪಿ ನಾಯಕರಿಗೆ ಮೋದಿ ಸೂಚಿಸಿದ್ದಾರೆ.

ಡಿಸೆಂಬರ್ 6ರಿಂದ ಮಂದಿರ ನಿರ್ಮಾಣ ಶುರು: ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದರು!

ಅಯೋಧ್ಯೆ ತೀರ್ಪಿಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟದ ಸಭೆ ನಡೆಸಿದ ಪ್ರಧಾನಿ, ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡದಿರುವಂತೆ ಸ್ಪಷ್ಟ ಸುಚನೆ ನೀಡಿದ್ದಾರೆ. 

ಅಲ್ಲದೇ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ರೀತಿಯ ತೀರ್ಪು ನೀಡಿದರೂ, ಅದನ್ನು ಸೋಲು ಅಥವಾ ವಿಜಯದ ದೃಷ್ಟಿಯಿಂದ ನೋಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

'ಅಯೋಧ್ಯೆ ಬಗ್ಗೆ ಮಾತು ಆಡುವಾಗ ಹುಷಾರ್‌' ಸಚಿವರಿಗೆ ಸಿಎಂ ವಾರ್ನಿಂಗ್

ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮೋದಿ ಸಭೆಯಲ್ಲಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios