news
By Suvarna Web Desk | 06:53 AM March 20, 2017
ಯೋಗಿ ಆದಿತ್ಯನಾಥ್’ಗೆ ಶುಭ ಕೋರಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್?

Highlights

ಫೋಟೋಶಾಪ್ ಮಾಡಲಾಗಿರುವ ಡೊನಾಲ್ಡ್ ಟ್ರಂಪ್ ಟ್ವೀಟರ್ ಖಾತೆಯಿಂದ ಶುಭಾಶಯಗಳನ್ನು ತಿಳಿಸುತ್ತಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರನಿದ್ದಂತೆ, ಅವರೊಬ್ಬ ಮಹಾನ್ ನಾಯಕ. ನಾನು ಅಮೆರಿಕಾವನ್ನು ಆಳುತ್ತಿರುವಂತೆ ಅವರು ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ. ಯುಪಿಯಲ್ಲಿರಬೇಕಾದರೆ ಯೋಗಿ ಯೋಗಿ ಎನ್ನಲೇಬೇಕು, #ಜೈಶ್ರಿರಾಮ್’ ಎಂದು ಬರೆಯಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಸಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ  ಚರ್ಚೆ ಮುಂದುವರೆದಿದೆ. ಒಂದು ಕಡೆ ಅವರ ಬೆಂಬಲಿಗರಿಂದ ವಿವಾದಾತ್ಮಕ ನಾಯಕನ ‘ಇಮೇಜ್ ಮೇಕ್ ಓವರ್’ ಪ್ರಯತ್ನಗಳು ನಡೆದರೆ, ಇನ್ನೊಂದು ಕಡೆ ವ್ಯಂಗ್ಯಭರಿತ ಪೋಸ್ಟ್/ಟ್ವೀಟ್’ಗಳು ವೈರಲ್ ಆಗುತ್ತಿವೆ.  

ಮೊನ್ನೆ ಯೋಗಿಯಂತೆಯೇ ಕಾಣುವ ಹಾಲಿವುಡ್ ನಟ ವಿನ್ ಡೀಸೆಲ್ ಅವರನ್ನು ಮುಂದಿಟ್ಟುಕೋಂಡು  ಟ್ವೀಟ್’ಗಳು ಹರಿದಾಡುತ್ತಿದ್ದರೆ, ಈಗ ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ರನ್ನು ಕೂಡಾ ಟ್ವಿಟರಟ್ಟಿಗಳು ಎಳೆತಂದಿದ್ದಾರೆ.

ಫೋಟೋಶಾಪ್ ಮಾಡಲಾಗಿರುವ ಡೊನಾಲ್ಡ್ ಟ್ರಂಪ್ ಟ್ವೀಟರ್ ಖಾತೆಯಿಂದ ಶುಭಾಶಯಗಳನ್ನು ತಿಳಿಸುತ್ತಾ, ‘ಯೋಗಿ ಆದಿತ್ಯನಾಥ್ ನನ್ನ ಸಹೋದರನಿದ್ದಂತೆ, ಅವರೊಬ್ಬ ಮಹಾನ್ ನಾಯಕ. ನಾನು ಅಮೆರಿಕಾವನ್ನು ಆಳುತ್ತಿರುವಂತೆ ಅವರು ಉತ್ತರ ಪ್ರದೇಶವನ್ನು ಆಳುತ್ತಿದ್ದಾರೆ. ಯುಪಿಯಲ್ಲಿರಬೇಕಾದರೆ ಯೋಗಿ ಯೋಗಿ ಎನ್ನಲೇಬೇಕು, #ಜೈಶ್ರಿರಾಮ್’ ಎಂದು ಬರೆಯಲಾಗಿದೆ.

ಟ್ವೀಟರ್’ನಲ್ಲಿ ಈ ಕುರಿತು ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಟ್ವೀಟ್-ಪ್ರತಿಟ್ವೀಟ್’ಗಳು ಮುಂದುವರೆದಿವೆ.

Show Full Article

Recommended

bottom right ad