Asianet Suvarna News Asianet Suvarna News

ಮತ್ತೆ ಇಳಿದು ಕಡಿಮೆಯಾಯ್ತು ಪೆಟ್ರೋಲ್, ಡೀಸೆಲ್ ದರ

ತಿಂಗಳಪೂರ್ತಿ ನಿರಂತರವಾಗಿ ಇಳಿಯುತ್ತಿರುವ ಪೆಟ್ರೋಲ್, ಡೀಸೆಲ್ ದರ ಮತ್ತೊಮ್ಮೆ ಇಳಿಕೆಯಾಗಿದೆ. ಇದೊಂತರ ಗ್ರಾಹಕರಿಗೆ ಗುಡ್ ನ್ಯೂಸ್ ಆಗಿದೆ. 

Petrol Diesel Price Drop Yet Again
Author
Bengaluru, First Published Nov 14, 2018, 1:38 PM IST

ನವದೆಹಲಿ :  ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾದ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರ  ನಿರಂತರವಾಗಿ ಇಳಿಮುಖವಾಗುತ್ತಿದೆ. ಬುಧವಾರ ಮತ್ತೊಮ್ಮೆ ಪೆಟ್ರೋಲ್ ಡೀಸೆಲ್ ದರದಲ್ಲಿ ಕೆಲ ಪೈಸೆಗಳಷ್ಟು ಇಳಿಕೆಯಾಗಿದೆ. 

ಪ್ರತೀ ಲೀಟರ್ ಪೆಟ್ರೋಲ್ ದರ 12 ಪೈಸೆ, ಪ್ರತೀ ಲೀಟರ್ ಡೀಸೆಲ್ ದರದ ಮೇಲೆ 13 ಪೈಸೆ ಇಳಿಕೆಯಾಗಿದೆ. 

ಸೆಪ್ಟೆಂಬರ್ ಮೊದಲ ವಾರದಿಂದಲೇ ಪೆಟ್ರೋಲ್, ಡೀಸೆಲ್ ದರವು ಇಳಿಯುತ್ತಾ ಸಾಗಿದ್ದು, ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 77.43 ಡೀಸೆಲ್ ದರ  72.19 ರು.ಗಳಷ್ಟಿದೆ. 

ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, 100ರ ಗಡಿ ದಾಟುವತ್ತ ಸಾಗಿತ್ತು.

Follow Us:
Download App:
  • android
  • ios