Asianet Suvarna News Asianet Suvarna News

ನಾಡಿದ್ದು ಕಮಲ್ ಹಾಸನ್ ಪಕ್ಷ ಘೋಷಣೆ; ಪಕ್ಷ ಸ್ಥಾಪನೆಗೂ ಮುನ್ನ ರಜನಿಕಾಂತ್ ಭೇಟಿ ಮಾಡಿದ ನಟ

ಕಮಲ್, ಬುಧವಾರ ಮದುರೈನಲ್ಲಿ ತಮ್ಮ ನೂತನ ಪಕ್ಷದ ಹೆಸರು, ಚಿಹ್ನೆ ಪ್ರಕಟಿಸುವ ಮೂಲಕ ಅಧಿಕೃತವಾಗಿವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ, ಕಮಲ್ ಭಾನುವಾರ ಇಲ್ಲಿ ರಾಜಕಾರಣಿಯಾಗಿ ಪರಿವರ್ತಿತರಾಗುತ್ತಿರುವ ಇನ್ನೊಬ್ಬ ನಟ ರಜನೀಕಾಂತ್ ಅವರನ್ನು ದಿಢೀರ್ ಭೇಟಿ ಮಾಡಿದರು.

Our Styles Are Different Says Rajinikanth After Meeting Kamal Haasan

ಚೆನ್ನೈ(ಫೆ.19): ನಟ ರಜನೀಕಾಂತ್ ತಾವು ಸ್ಥಾಪಿಸಲಿರುವ ನೂತನ ಪಕ್ಷದ ಚಿಹ್ನೆ, ಅದಕ್ಕೆ ಸಂಬಂಧಿಸಿದ ಆ್ಯಪ್ ಬಿಡುಗಡೆ ಮಾಡಿದ ಬೆನ್ನಲ್ಲೇ, ತಮಿಳುನಾಡಿನ ಮತ್ತೋರ್ವ ಖ್ಯಾತ ನಟ ಕಮಲ್‌ಹಾಸನ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ.

ಕಮಲ್, ಬುಧವಾರ ಮದುರೈನಲ್ಲಿ ತಮ್ಮ ನೂತನ ಪಕ್ಷದ ಹೆಸರು, ಚಿಹ್ನೆ ಪ್ರಕಟಿಸುವ ಮೂಲಕ ಅಧಿಕೃತವಾಗಿವಾಗಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ, ಕಮಲ್ ಭಾನುವಾರ ಇಲ್ಲಿ ರಾಜಕಾರಣಿಯಾಗಿ ಪರಿವರ್ತಿತರಾಗುತ್ತಿರುವ ಇನ್ನೊಬ್ಬ ನಟ ರಜನೀಕಾಂತ್ ಅವರನ್ನು ದಿಢೀರ್ ಭೇಟಿ ಮಾಡಿದರು. ಚೆನ್ನೈನ ರಜನಿ ಅವರ ಪೋಯೆಸ್ ಗಾರ್ಡನ್‌'ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಕಮಲ್, ‘ಇದೊಂದು ಸೌಜನ್ಯದ ಭೇಟಿಯಷ್ಟೇ’ ಎಂದು ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತ ಊಹಾಪೋಹಗಳಿಗೆ ತೆರೆ ಎಳೆಯುವ ಯತ್ನ ಮಾಡಿದರು.

‘ಇದು ರಾಜಕೀಯ ಭೇಟಿ ಆಗಿರಲಿಲ್ಲ. ನಾನು ರಾಜಕೀಯ ಪ್ರವೇಶಿಸುವ ನನ್ನ ನಿರ್ಧಾರವನ್ನು ತಿಳಿಸಿದೆ. ನಾನು ರಾಜಕೀಯ ಪಯಣ ಆರಂಭಿಸುವ ಮುನ್ನ ಅನೇಕರನ್ನು ಭೇಟಿಯಾಗುತ್ತಿದ್ದೇನೆ. ಗೆಳೆತನದ ಭಾಗವೇ ಈ ಭೇಟಿ. ರಾಜಕೀಯವಲ್ಲ’ ಎಂದು ಕಮಲ್ ಸ್ಪಷ್ಟಪಡಿಸಿದರು. ರಜನೀಕಾಂತ್ ಪ್ರತಿಕ್ರಿಯಿಸಿ, ‘ಕಮಲ್ ತಮಿಳುನಾಡಿನ ಜನರ ಸೇವೆ ಮಾಡಲು ಬಯಸಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅವರು ಹೆಸರು-ಹಣ ಗಳಿಸಲು ರಾಜಕೀಯ ಪ್ರವೇಶಿಸಿಲ್ಲ. ಜನಸೇವೆ ದೃಷ್ಟಿಯಿಂದ ಆಗಮಿಸಿದ್ದಾರೆ’ ಎಂದರು.‘ಸಿನಿಮಾಗಳಲ್ಲೂ ನನ್ನ ಮತ್ತು ಅವರ ಪಾತ್ರಗಳೇ ಬೇರೆ’ ಎಂದೂ ರಜನಿ ಮಾರ್ಮಿಕವಾಗಿ ನುಡಿದರು.

ಹೊಸ ಪಕ್ಷ: ಬುಧವಾರ ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಮದುರೈವರೆಗೆ ರ್ಯಾಲಿ ನಡೆಸಲಿರುವ ಕಮಲ್, ಅಲ್ಲಿ ಹೊಸ ಪಕ್ಷದ ಹೆಸರು ಚಿಹ್ನೆ ಪ್ರಕಟಿಸಲಿದ್ದಾರೆ. ಜೊತೆಗೆ ಅಲ್ಲಿಂದಲೇ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ.

Follow Us:
Download App:
  • android
  • ios