Asianet Suvarna News Asianet Suvarna News

ಹಂತಹಂತವಾಗಿ ಏಕ ಶ್ರೇಣಿ- ಏಕ ಪಿಂಚಣಿ ವ್ಯವಸ್ಥೆ ಜಾರಿ: ಪ್ರಧಾನಿ ಮೋದಿ

ಬಹಳ ಸಮಯದಿಂದ ಬಾಕಿವುಳಿದಿರುವ ಏಕ ಶ್ರೇಣಿ- ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ನನ್ನ ಆಸೆ.  ಆದರೆ, ದುರಾದೃಷ್ಟವಶಾತ್ ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಆದುದರಿಂದ ಅದನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದೆಂದು ಪ್ರಧಾನಿ ಮೋದಿ ಹೇಳಿದ್ದಾರೆ.

OROP will be implemented in stages Says PM Modi

ಬಂಡಿಪೋರಾ, ಜಮ್ಮು ಮತ್ತು ಕಾಶ್ಮೀರ: ಬಹಳ ಸಮಯದಿಂದ ಬಾಕಿವುಳಿದಿರುವ ಏಕ ಶ್ರೇಣಿ- ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ನನ್ನ ಆಸೆ.  ಆದರೆ, ದುರಾದೃಷ್ಟವಶಾತ್ ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಆದುದರಿಂದ ಅದನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದೆಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್ ಕಣಿವೆಗೆ ತೆರಳಿದ ಪ್ರಧಾನಿ ಮೋದಿ, ಯೋಧರೊಂದಿಗೆ ಸುಮಾರು 2 ತಾಸುಗಳನ್ನು ಕಳೆದು, ಸಿಹಿ ತಿನ್ನಿಸುವ ಮೂಲಕ ಆಚರಿಸಿದರು.

ಸೇನೆ ಹಾಗೂ ಯೋಧರ ಶ್ರೇಯೋಭಿವೃದ್ಧಿಗೆ ಸರ್ಕಾರವು ಸರ್ವರೀತಿಯಲ್ಲೂ ಬದ್ಧವಾಗಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಯೋಧರ ತ್ಯಾಗ ಬಲಿದಾನಗಳನ್ನು ಪ್ರಶಂಸಿಸಿದ ಮೋದಿ, ಯೋಧರು ತನ್ನ ಕುಟುಂಬ ಸದಸ್ಯರಿದ್ದಂತೆ ಎಂದು ಹೇಳಿದ್ದಾರೆ.  

ಸಮವಸ್ತ್ರ, ಅದು ಭೂಸೇನೆ, ವಾಯುಸೇನೆ ಅಥವಾ ನೌಕಾಸೇನೆ, ಯಾವುದೇ ಆಗಿರಲಿ, ಅದು ಗೌರವಕ್ಕೆ ಪಾತ್ರವಾಗಿದೆ. ಯೋಧರ ಜೊತೆ ಸಮಯ ಕಳೆಯುವುದರಿಂದ ಹೊಸ ಚೈತನ್ಯ ಸಿಗುತ್ತದೆ ಎಂದು  ಈ ಸಂದರ್ಭದಲ್ಲಿ ಹೇಳಿದ್ದಾರೆ.

Follow Us:
Download App:
  • android
  • ios