news
By Suvarna Web Desk | 08:34 PM November 14, 2017
ಬೆಂಗಳೂರು ಮೆಟ್ರೋದಲ್ಲಿ ಸಂಚರಿಸಿದ  ನಾರಾಯಣ ಮೂರ್ತಿ ದಂಪತಿ

Highlights

ಇದೇ ವೇಳೆ ಮೆಟ್ರೋ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ನಿಲ್ದಾಣಗಳ ಕುರಿತು ಮಾಹಿತಿ ಪಡೆದರು

ಬೆಂಗಳೂರು(ನ.14): ಇನ್ಫೋಸಿಸ್ ಸಂಸ್ಥಾಪಕ, ಪದ್ಮಭೂಷಣ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊಟ್ಟಮೊದಲ ಬಾರಿ ‘ನಮ್ಮ ಮೆಟ್ರೋ’ ರೈಲಿನಲ್ಲಿ ಪ್ರಯಾಣ ಮಾಡಿದರು. ಮಲ್ಲೇಶ್ವರದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆರ್.ವಿ. ಕಾಲೇಜು ಬಳಿಯಿರುವ ನಿಲ್ದಾಣದಿಂದ ಮಲ್ಲೇಶ್ವರದ ಮಂತ್ರಿ ಮಾಲ್‌ವರೆಗೂ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ಇದೇ ವೇಳೆ ಮೆಟ್ರೋ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ನಿಲ್ದಾಣಗಳ ಕುರಿತು ಮಾಹಿತಿ ಪಡೆದರು. ಅಲ್ಲದೆ, ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿನ ಸ್ವಚ್ಛತೆ ಕುರಿತು ಸಂತಸ ವ್ಯಕ್ತ ಪಡಿಸಿ, ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

Show Full Article


Recommended


bottom right ad