Asianet Suvarna News Asianet Suvarna News

ರಫೇಲ್ ಡೀಲ್ ತೀರ್ಪು: ಮೋದಿಗೆ ಜಯ, ರಾಹುಲ್‌ಗೆ ಮುಖಭಂಗ!

ವಿವಾದಾತ್ಮಕ ‘ರಫೇಲ್‌ ಯುದ್ಧವಿಮಾನ ಖರೀದಿ’ ವಿಚಾರವಾಗಿ ಸುಪ್ರೀಂನಲ್ಲಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ.

No Rafale Deal Probe Top Court Says No Proof Of Commercial Favouritism
Author
New Delhi, First Published Dec 14, 2018, 11:19 AM IST

ನವದೆಹಲಿ[ಡಿ.14]: ವಿವಾದಾತ್ಮಕ ‘ರಫೇಲ್‌ ಯುದ್ಧ ವಿಮಾನ ಖರೀದಿ’ಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆಗೆ ಒಳಪಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ರಫೇಲ್ ಡೀಲ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಮೇಲಿನ ಸಂಕಟ ನಿವಾರಣೆಯಾಗಿದೆ.

"

ಸುಪ್ರೀಂ ಕೋರ್ಟ್‌ಗೆ ರಫೇಲ್ ಒಪ್ಪಂದ ವಿವರ ಸಲ್ಲಿಸಿದ ಕೇಂದ್ರ!

ರಫೇಲ್ ಡೀಲ್ ಪ್ರಕರಣದ ವಿಚಾರವಾಗಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ 'ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ವಿಮಾನ ಖರೀದಿ ಒಪ್ಪಂದ ಹಾಗೂ ಖರೀದಿ ಪ್ರಕ್ರಿಯೆ ಕುರಿತಾಗಿ ಯಾವುದೇ ಅನುಮಾನಗಳಿಲ್ಲ' ಎಂದು ಸ್ಪಷ್ಟಪಡಿಸಿದೆ. 

ರಿಲಾಯನ್ಸ್ ಓಡಿಹೋದರೆ ಏನು ಕಥೆ..?

ಮುಖ್ಯ ನ್ಯಾಯಾಧೀಶ ನ್ಯಾ. ರಂಜನ್‌ ಗೊಗೋಯ್‌ ನೇತೃತ್ವದ ಪೀಠ ನವೆಂಬರ್‌ 14ರಂದು ತೀರ್ಪು ಕಾಯ್ದಿರಿಸಿತ್ತು. ವಕೀಲ ಎಂ.ಎಲ್‌. ಶರ್ಮಾ ಎಂಬುವವರು ಈ ಪ್ರಕರಣದ ಮೊದಲ ಅರ್ಜಿದಾರಾಗಿದ್ದರು. ನಂತರ ವಿನೀತ್‌ ದಂಡಾ ಎಂಬ ಇನ್ನೊಬ್ಬ ವಕೀಲರು ನ್ಯಾಯಾಲಯದ ಉಸ್ತುವಾರಿಯ ತನಿಖೆ ನಡೆಯಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆಪ್‌ ಮುಖಂಡ ಸಂಜಯ್‌ ಸಿಂಗ್‌, ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ, ಅರುಣ್‌ ಶೌರಿ, ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್‌ ಕೂಡ ಅರ್ಜಿ ಸಲ್ಲಿಸಿ, ಸಿಬಿಐಗೆ ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಕೋರ್ಟ್‌ ಆದೇಶಿಸಬೇಕು ಎಂದು ಕೋರಿದ್ದರು.

ಈ ಎಲ್ಲ ಅರ್ಜಿಗಳನ್ನು ಒಗ್ಗೂಡಿಸಿ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತ್ತು.

ರಫೇಲ್ ಡೀಲ್ : ಅಂಬಾನಿ ಜೊತೆಗಿದ್ದಾರೆ 30 ಪಾಲುದಾರರು

ಸಮರ್ಥಿಸಿದ್ದ ಕೇಂದ್ರ:

ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಜತೆಗಿನ 36 ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದ ನಿಯಮಾನುಸಾರ ನಡೆದಿದೆ ಎಂದು ವಾದಿಸಿದ್ದ ಕೇಂದ್ರ ಸರ್ಕಾರ, ಖರೀದಿ ಮೊತ್ತವನ್ನು ಬಹಿರಂಗಪಡಿಸಲು ಮಾತ್ರ ನಿರಾಕರಿಸಿತ್ತು. ಒಪ್ಪಂದದಲ್ಲಿ ‘ಬೆಲೆಯನ್ನು ಬಹಿರಂಗಪಡಿಸುವುದಿಲ್ಲ’ ಎಂಬ ಷರತ್ತು ವಿಧಿಸಲಾಗಿದೆ ಎಂದು ಅದು ಕಾರಣ ನೀಡಿತ್ತು.

ರಫೇಲ್ ಡೀಲ್’ನಲ್ಲಿ ಭಾರಿ ಹಗರಣ, ರಾಷ್ಟ್ರೀಯ ಭದ್ರತೆ ರಾಜಿ: ಕಾಂಗ್ರೆಸ್

ಹೀಗಾಗಿ ಸದ್ಯದ ಮಟ್ಟಿಗೆ ಬೆಲೆ ಹೊರತುಪಡಿಸಿದರೆ ಮಿಕ್ಕ ಎಲ್ಲ ಖರೀದಿ ಪ್ರಕ್ರಿಯೆಯ ಬಗ್ಗೆ ಮಾತ್ರ ತಾನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು.

ಆದರೆ ಅಂದಾಜು 58 ಸಾವಿರ ಕೋಟಿ ರು. ಮೌಲ್ಯದ ಒಪ್ಪಂದ ಇದಾಗಿದೆ ಎಂದು ಹೇಳಲಾಗಿದೆ. ನಿಯಮ ಗಾಳಿಗೆ ತೂರಿ, ರಕ್ಷಣಾ ಸಲಕರಣೆಗಳ ಉತ್ಪಾದನೆಯ ಗಂಧ ಗಾಳಿ ಗೊತ್ತಿರದ ಅನಿಲ್‌ ಅಂಬಾನಿಯವರ ಕಂಪನಿಯನ್ನು ಡಸಾಲ್ಟ್‌ ಕಂಪನಿಯು ತನ್ನ ಪಾಲುದಾರನನ್ನಾಗಿ ಮಾಡಿಕೊಂಡಿದೆ. ಅಂಬಾನಿ ಕಂಪನಿ ಆಯ್ಕೆಯ ಹಿಂದೆ ಮೋದಿ ಸರ್ಕಾರದ ಪ್ರಭಾವವಿದೆ ಎಂಬುವುದು ಪ್ರತಿಪಕ್ಷಗಳ ಆರೋಪವಾಗಿತ್ತು.

ಒಂದು ಕಡೆ ಕಾನೂನು ಸಮರ, ಇನ್ನೊಂದೆಡೆ ರಾಜಕೀಯ; ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ!

ವಿಪಕ್ಷಗಳಿಗೆ ತೀವ್ರ ಹಿನ್ನಡೆ:

ಇಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕೇಂದ್ರ ಸರ್ಕಾರಕ್ಕೆ ರಿಲೀಫ್ ನೀಡಿದೆ. ಒಂದು ವೇಳೆ ಸರ್ವೋಚ್ಛ ನ್ಯಾಯಾಲಯ​​ ತನಿಖೆಗೆ ಆದೇಶಿಸಿದ್ದರೆ ಮೋದಿ ಸರ್ಕಾರಕ್ಕೆ ಇದು ತೀವ್ರ ಹಿನ್ನಡೆಯಾಗುತ್ತಿತ್ತು. ಅಲ್ಲದೇ ಪ್ರಧಾನಿ ಸ್ಥಾನದಲ್ಲಿರುವ ಮೋದಿ ವರ್ಚಸ್ಸಿಗೆ ದೊಡ್ಡ ಹೊಡೆತ ನೀಡುತ್ತಿತ್ತು. ಇತ್ತ ವಿಪಕ್ಷಗಳು ಕೂಡಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಈ ಪ್ರಕರಣವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೀಗ ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ.

Follow Us:
Download App:
  • android
  • ios