Asianet Suvarna News Asianet Suvarna News

ಶಾಲಾ ಮಕ್ಕಳ ಮಣ ಭಾರದ ಬ್ಯಾಗ್‌ಗೆ ಬಿತ್ತು ಬ್ರೇಕ್; ಬಂದಿದೆ ತೂಕದ ಮಿತಿ

ಮಣಭಾರದ ಶಾಲಾ ಬ್ಯಾಗ್ ಹೊರೆಯಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ಬರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮಂಡಳಿ (ಎನ್‌ಸಿಇಆರ್‌ಟಿ), ತರಗತಿ ಆಧಾರದ ಮೇಲೆ ಬ್ಯಾಗ್ ತೂಕ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ. 

No homework for students of classes 1 and 2 : HRD ministry
Author
Bengaluru, First Published Nov 27, 2018, 7:40 AM IST

ಬೆಂಗಳೂರು (ನ. 27): ಮಣಭಾರದ ಶಾಲಾ ಬ್ಯಾಗ್ ಹೊರೆಯಿಂದ ವಿದ್ಯಾರ್ಥಿಗಳನ್ನು ಪಾರು ಮಾಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ ಬರುವ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಮಂಡಳಿ (ಎನ್‌ಸಿಇಆರ್‌ಟಿ), ತರಗತಿ ಆಧಾರದ ಮೇಲೆ ಬ್ಯಾಗ್ ತೂಕ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ. 

ಇದೇ ವೇಳೆ 1 ಹಾಗೂ 2 ನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್ ನೀಡಕೂಡದು ಎಂದೂ ಅದು ಸೂಚಿಸಿದೆ. ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಈ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಿದೆ. ಇದೇ ವೇಳೆ ೧ ಮತ್ತು ೨ನೇ ತರಗತಿಯ ಮಕ್ಕಳಿಗೆ ಹೋಮ್ ವರ್ಕ್ ನೀಡುವುದಕ್ಕೆ ನಿರ್ಬಂಧ ವಿಧಿಸಿರುವ ಎನ್ ಸಿಇಆರ್‌ಟಿ, ‘ಗಣಿತ ಮತ್ತು ಭಾಷೆಯನ್ನು ಹೊರತುಪಡಿಸಿದರೆ ಮಿಕ್ಕ ಯಾವ ವಿಷಯಗಳನ್ನೂ 1 ಹಾಗೂ ೨ನೇ ತರಗತಿ ಮಕ್ಕಳಿಗೆ ಬೋಧಿಸುವಂತಿಲ್ಲ. ಇನ್ನು 3 ರಿಂದ 5 ನೇ ಕ್ಲಾಸಿನ ಮಕ್ಕಳಿಗೆ ಭಾಷೆ, ಗಣಿತ ಹಾಗೂ ಇವಿಎಸ್ ವಿಷಯಗಳನ್ನು ಬಿಟ್ಟು ಮಿಕ್ಕ ವಿಷಯ ಬೋಧಿಸುವಂತಿಲ್ಲ’ ಎಂದಿದೆ.

ಶೀಘ್ರ ರಾಜ್ಯದಿಂದಲೂ ಸುತ್ತೋಲೆ:ಈ ಕುರಿತು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್, ರಾಜ್ಯದಲ್ಲಿ ಈಗಾಗಲೇ ಶಾಲಾ ಬ್ಯಾಗ್ ತೂಕ ಎಷ್ಟಿರಬೇಕು ಎಂಬುದರ ಬಗ್ಗೆ ಸರ್ವೆ ನಡೆಸಲಾಗಿದೆ. ಡಿಎಸ್‌ಇಆರ್‌ಟಿಯ ಮಾರ್ಗಸೂಚಿ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಹ ಸಂಗ್ರಹಿಸಲಾಗಿದೆ. ಸುತ್ತೋಲೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದರು. 

Follow Us:
Download App:
  • android
  • ios