news
By Suvarna Web Desk | 12:45 PM August 12, 2017
ರಾಜಸ್ಥಾನ: ವಿವಿಗಳಿಗೆ ಗಾಂಧಿ ಜಯಂತಿ ರಜೆ ಇಲ್ಲ!

Highlights

ರಾಜಸ್ಥಾನದ ಎಲ್ಲಾ ಸರ್ಕಾರಿ ವಿವಿಗಳಲ್ಲಿ ಈ ವರ್ಷ ಗಾಂಧಿ ಜಯಂತಿ ರಜೆಯನ್ನು ರದ್ದುಗೊಳಿಸಲಾಗಿದೆ. ರಾಜ್ಯದ ಎಲ್ಲಾ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲರ ಕಛೇರಿಯಿಂದ ಬಿಡುಗಡೆಯಾಗಿರುವ  2017-18 ಸಾಲಿನ ಶೈಕ್ಷಣಿಕ ಕ್ಯಾಲೆಂಡರ್’ನಲ್ಲಿ ಈ ವರ್ಷ ಗಾಂಧಿ ಜಯಂತಿಯ ರಜೆಯನ್ನು ರದ್ದುಗೊಳಿಸಲಾಗಿದೆ.

ಜೈಪುರ: ರಾಜಸ್ಥಾನದ ಎಲ್ಲಾ ಸರ್ಕಾರಿ ವಿವಿಗಳಲ್ಲಿ ಈ ವರ್ಷ ಗಾಂಧಿ ಜಯಂತಿ ರಜೆಯನ್ನು ರದ್ದುಗೊಳಿಸಲಾಗಿದೆ.

ರಾಜ್ಯದ ಎಲ್ಲಾ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲರ ಕಛೇರಿಯಿಂದ ಬಿಡುಗಡೆಯಾಗಿರುವ  2017-18 ಸಾಲಿನ ಶೈಕ್ಷಣಿಕ ಕ್ಯಾಲೆಂಡರ್’ನಲ್ಲಿ ಈ ವರ್ಷ ಗಾಂಧಿ ಜಯಂತಿಯ ರಜೆಯನ್ನು ರದ್ದುಗೊಳಿಸಲಾಗಿದೆ.

ಆದರೆ ರಾಮದೇವ್ (ರಾಜಸ್ಥಾನದ ಜಾನಪದ ದೇವರು), ಗುರು ನಾನಕ್ ದೇವ್, ಮಹಾವೀರ ಜಯಂತಿ ಹಾಗೂ ಮಹಾರಾಣಾ ಪ್ರತಾಪ್ ಜಯಂತಿಗಳಿಗೆ ರಜೆಯನ್ನು ಮುಂದುವರೆಸಲಾಗಿದೆ.

ಹೊಸ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್’ನಲ್ಲಿ ಮುಹರ್ರಮ್’ಗೆ 1 ತಾರೀಕಿನಂದು ಹಾಗೂ ದೀಪಾವಳಿ ಹಬ್ಬಕ್ಕೆ 13 ರಿಂದ 21ರವರೆಗೆ ರಜೆಗಳಿವೆ.

ರಾಜ್ಯ ಸರ್ಕಾರ ಹಾಗೂ ಎಲ್ಲಾ ವಿವಿಗಳೊಂದಿಗೆ ಸಮಾಲೋಚಿಸಿ ಏಕರೂಪ ಕ್ಯಾಲೆಂಡರನ್ನು ಸಿದ್ಧಪಡಿಸಲಾಗಿದೆ. ಅದನ್ನು ಕುಲಪತಿಗಳು ಹಾಗೂ ರಾಜ್ಯಪಾಲರೂ ಆಗಿರುವ ಕಲ್ಯಾಣ್ ಸಿಂಗ್’ರು ಅದಕ್ಕೆ ಅಂಕಿತ ಹಾಕಿದ್ದಾರೆ, ಎಂದು ಹೇಳಲಾಗಿದೆ.

ಈ ಸುತ್ತೋಲೆಯನ್ನು ರಡು ತಿಂಗಳುಗಳ ಹಿಂದೆ ಎಲ್ಲಾ 12 ವಿವಿಗಳಿಗೆ ಕಳುಹಿಸಲಾಗಿದೆ.    

Show Full Article


Recommended


bottom right ad