Asianet Suvarna News Asianet Suvarna News

ಡಾನ್ಸ್ ಬಾರ್‌ಗಳು ಮತ್ತೆ ಓಪನ್: ಸುಪ್ರೀಂ ಸಮ್ಮತಿ!

ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದನ್ನು ಪ್ರಕಟಿಸಿದ್ದು, ಮತ್ತೆ ಡಾನ್ಸ್ ಬಾರ್‌ಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ಡಾನ್ಸ್ ಬಾರ್‌ಗಳನ್ನು ತೆರೆಯುವವರಿಗೆ ಕೆಲ ಷರತ್ತುಗಳನ್ನೂ ವಿಧಿಸಿದೆ.

No bar on dance bars in Mumbai rules Supreme Court
Author
Mumbai, First Published Jan 17, 2019, 3:55 PM IST

ಮುಂಬೈ[ಜ.17]: ಸುಪ್ರೀಂ ಕೋರ್ಟ್ ಮುಂಬೈನಲ್ಲಿ ಕೆಲ ಷರತ್ತುಗಳ ಮೇರೆಗೆ ಡಾನ್ಸ್ ಬಾರ್‌ಗಳನ್ನು ನಡೆಸಲು ಅವಕಾಶ ನೀಡಿದೆ. ನ್ಯಾಯಾಲಯವು ಮಹಾರಾಷ್ಟ್ರ ಸರ್ಕಾರವು ಜಾರಿಗೊಳಿಸಿದ್ದ 2016ರ ಕಾನೂನನ್ನು ಕೆಲ ಬದಲಾವಣೆಗಳೊಂದಿಗೆ ಮಾನ್ಯತೆ ನೀಡಿದೆ. ಇದ ಅನ್ವಯ ಡಾನ್ಸ್ ಬಾರ್‌ಗಳಲ್ಲಿ ಡಾನ್ಸರ್ ಗಳ ಮೇಲೆ ಹಣ, ನೋಟುಗಳನ್ನು ಎಸೆಯಲು ಅವಕಾಶವಿಲ್ಲ, ಆದರೆ ಟಿಪ್ಸ್ ನೀಡಬಹುದಾಗಿದೆ.

ಸುಪ್ರೀಂ ಕೋರ್ಟ್ ನ ಈ ತೀರ್ಪಿನ ಬಳಿಕ ಮುಂಬೈನಲ್ಲಿ ಇನ್ಮುಂದೆ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಡಾನ್ಸ್ ಬಾರ್ ಗಳು ಕಾರ್ಯ ನಿರ್ವಹಿಸಬಹುದಾಗಿದೆ. ತೀರ್ಪಿನೊಂದಿಗೆ ಕೆಲ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯ ಬಾರ್ ನಲ್ಲಿ ಯವುದೇ ಅಶ್ಲೀಲತೆ ಇರಬಾರದೆಂದು ಆದೇಶಿಸಿದೆ. ಇಹೀಗಾಗಿ ಮಹಾರಾಷ್ಟ್ರ ಸರ್ಕಾರದ ಮೇಲಿರುವ 3 ವರ್ಷದ ಶಿಕ್ಷೆಯನ್ನು ಮುಂದುವರೆಸಿದೆ. ಅಲ್ಲದೇ ಡಾನ್ಸ್ ಬಾರ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವೆಂದಿದೆ.

ಡಾನ್ಸ್ ಬಾರ್‌ಗಳಲ್ಲಿ ಯಾವುದಕ್ಕೆ ಅವಕಾಶ? ಯಾವುದಕ್ಕೆ ಕಡಿವಾಣ?

1] ಡಾನ್ಸ್ ಬಾರ್‌ಗಳಲ್ಲಿ ಇನ್ಮುಂದೆ ಏರಿಯಾ ಹಾಗೂ ಗ್ರಾಹಕರ ನಡುವೆ ಯಾವುದೇ ಅಂತರವಿರುವುದಿಲ್ಲ. ಈ ಹಿಂದೆ ಸರ್ಕಾರವು ಗ್ರಾಹಕರು ಹಾಗೂ ಡಾನ್ಸರ್ ಗಳ ನಡುವೆ 3 ಅಡಿ ಎತ್ತರದ ಗೋಡೆ ನಿರ್ಮಿಸಲು ಆದೇಶಿಸಿತ್ತು. ಈ ಮೂಲಕ ಗ್ರಾಹರು ನೃತ್ಯ ಆಸ್ವಾದಿಸಬಹುದಾಗಿತ್ತಾದರೂ, ಡಾನ್ಸರ್‌ಗಳನ್ನು ಮುಟ್ಟುವ ಅವಕಾಶವಿರಲಿಲ್ಲ.

2] ನ್ಯಾಯಾಲಯವು ತನ್ನ ಆದೇಶದಲ್ಲಿ ಮುಂಬೈಯಂತಹ ನಗರದಲ್ಲಿ ಧಾರ್ಮಿಕ ಹಾಗೂ ಶೈಕ್ಷಣಿಕ ಸ್ಥಳಗಳಿಂದ 1 ಕಿ. ಮೀಟರ್ ಅಂತರದಲ್ಲಿ ಡಾನ್ಸ್ ಬಾರ್‌ಗಳಿರಬೇಕೆಂಬ ನಿಯಮ ಅರ್ಥಹೀನ. ಹೀಗಾಗಿ ಮುಂಬೈನಲ್ಲಿ ಡಾನ್ಸ್ ಬಾರ್ ಗಳ ಸಂಖ್ಯೆ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ.

3] ಗ್ರಾಹಕರು ಡಾನ್ಸರ್‌ಗಳಿಗೆ ಟಿಪ್ಸ್ ನೀಡಬಹುದು ಆದರೆ ಅವರ ಮೇಲೆ ಹಣ ನೋಟುಗಳನ್ನು ಸುರಿಯುವಂತಿಲ್ಲ.

4] ಡಾನ್ಸರ್ ಹಾಗೂ ಮಾಲಿಕರ ನಡುವೆ ನೀಡಬೇಕಾದ ವೇತನವನ್ನು ಸರ್ಕಾರ ನಿಗಧಿಪಡಿಸುವುದು ಸರಿಯಲ್ಲ ಎಂದಿರುವ ಕೋರ್ಟ್, ಇದು ಮಾಲೀಕರು ಹಾಗೂ ಡಾನ್ಸರ್ ಗಳ ನಡುವಿನ ವೈಯುಕ್ತಿಕ ಒಪ್ಪಂದ ಎಂದಿದೆ.

5] ಸುಪ್ರೀಂನ ಈ ಮಹತ್ವದ ಆದೇಶದ ಬಳಿಕ ಮುಂಬೈನಲ್ಲಿ ಸಂಜೆ 6 ರಿಂದ ರಾತ್ರಿ 11.30ರವರೆಗೆ ಡಾನ್ಸ್ ಬಾರ್ ಗಳು ತೆರೆದುಕೊಳ್ಳಲಿವೆ.

Follow Us:
Download App:
  • android
  • ios