Asianet Suvarna News Asianet Suvarna News

ನೈಸರ್ಗಿಕವಾಗಿ ಕೈ-ಕಾಲಿನಲ್ಲಿರುವ ಮೆಹೆಂದಿಯನ್ನು ತೆಗೆದುಬಿಡಿ..!

ಮೆಹೆಂದಿ ಹಾಕಿಕೊಳ್ಳುವವರೆಗೂ ಇದ್ದ ಉತ್ಸಾಹ ಅದನ್ನು ಹಾಕಿಕೊಂಡ ಮೇಲೆ ಇರದು. ಮೆಹೆಂದಿ ಚಿತ್ತಾರವನ್ನು ಬರೆದುಕೊಂಡು ಒಂದೆರಡು ದಿನಗಳಾಗುತ್ತಿದ್ದಂತೆ ಅದನ್ನು ತೆಗೆದು ಬಿಡಬೇಕು ಎನಿಸುವುದು ಸಹಜವಾಗಿರುತ್ತದೆ. ಅದನ್ನು ನೈಸರ್ಗಿಕವಾಗಿ ಅಳಿಸುವ ವಿಧಾನವನ್ನು ಇಂದು ನಿಮಗೆ ತಿಳಿಸುತ್ತೇವೆ.

Natural ways to Remove mehendi from your hands and feet

ಬೆಂಗಳೂರು (ಜ.09): ಮೆಹೆಂದಿ ಹಾಕಿಕೊಳ್ಳುವವರೆಗೂ ಇದ್ದ ಉತ್ಸಾಹ ಅದನ್ನು ಹಾಕಿಕೊಂಡ ಮೇಲೆ ಇರದು. ಮೆಹೆಂದಿ ಚಿತ್ತಾರವನ್ನು ಬರೆದುಕೊಂಡು ಒಂದೆರಡು ದಿನಗಳಾಗುತ್ತಿದ್ದಂತೆ ಅದನ್ನು ತೆಗೆದು ಬಿಡಬೇಕು ಎನಿಸುವುದು ಸಹಜವಾಗಿರುತ್ತದೆ. ಅದನ್ನು ನೈಸರ್ಗಿಕವಾಗಿ ಅಳಿಸುವ ವಿಧಾನವನ್ನು ಇಂದು ನಿಮಗೆ ತಿಳಿಸುತ್ತೇವೆ.

ಲಿಂಬು ಹುಳಿ : ಲಿಂಬು ಹುಳಿಯಿಂದ ಕೈಗೆ ಹಾಕಿಕೊಂಡ ಮೆಹೆಂದಿಯನ್ನು ಅಳಿಸಬಹುದಾಗಿದೆ.  ಇದರಲ್ಲಿ ಬ್ಲೀಚಿಂಗ್ ಗುಣಗಳಿದ್ದುದರಿಂದ ಗಾಢವಾಗಿರುವ ಬಣ್ಣವನ್ನು ತಿಳಿಗೊಳಿಸಲು ಸಹಕಾರಿಯಾಗುತ್ತದೆ.  ಒಂದು ಬಕೆಟ್’ನಲ್ಲಿ ಸ್ವಲ್ಪ ಬೆಚ್ಚಗಿರುವ ನೀರಿಗೆ ಲಿಂಬೆ ಹುಳಿ ಸ್ವಲ್ಪ ಹಾಕಿ ಇದರಲ್ಲಿ ಕೈ ಉಜ್ಜಬೇಕು. ದಿನಕ್ಕೆ ಎರಡು ಬಾರಿ ಮಾಡಿದಲ್ಲಿ ಉತ್ತಮ ರಿಸಲ್ಟ್ ಸಿಗುತ್ತದೆ.

ಟೂತ್’ಪೇಸ್ಟ್ : ಟೂತ್’ಪೇಸ್ಟ್  ಕೂಡ ಮೆಹೆಂದಿ ಬಣ್ಣ ತೆಗೆಯಲು ಸಹಕರಿಸುತ್ತದೆ. ಮೆಹೆಂದಿ ಮೇಲೆ ಪೇಸ್ಟ್ ಹಚ್ಚಿ ಅದು ಒಣಗುವವರೆಗೂ ಬಿಡಿ. ಅದು ಒಣಗಿದ ನಂತರ ಉಜ್ಜಿ ತೆಗೆಯಿರಿ.

ಬೇಕಿಂಗ್ ಸೋಡಾ :ಲಿಂಬೆ ಹುಳಿ ಹಾಗೂ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಮೆಹೆಂದಿ ಮೇಲೆ ಹಚ್ಚಿ. ಐದು ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

Natural ways to Remove mehendi from your hands and feet

ಸೋಪ್ : ಕೆಲವು ಸೋಪ್’ಗಳೂ ಕೂಡ ಮೆಹೆಂದಿಯನ್ನು ತೆಗೆಯಲು ಸಹಕಾರಿಯಾಗುತ್ತದೆ. ಸೋಪ್ ಹಾಕಿ ಚನ್ನಾಗಿ ತೊಳೆದು ನಂತರ ಮಾಯಿಶ್ಚರೈಸರ್ ಕ್ರೀಂ ಹಚ್ಚಿದರು ಉತ್ತಮ ಫಲಿತಾಂಶ ದೊರೆಯುತ್ತದೆ.

ಉಪ್ಪು ನೀರು : ಉಪ್ಪು ನೀರಿನಿಂದ ಕೈ ತೊಳೆಯುವುದು ಕೂಡ ಫಲಿತಾಂಶ ನೀಡುತ್ತದೆ. ಉಪ್ಪು ನೀರಿನಲ್ಲಿ ಕೈ ಇಡಿ, ನಂತರ ಅದು ಒಣಗುವವರೆಗೂ ಬಿಡಿ. ನಂತರ ನೀರಿನಿಂದ ತೊಳೆದು ಮಾಯಿಶ್ಚರೈಸರ್ ಕ್ರೀಂ ಹಚ್ಚುವುದರಿಂದಲೂ ಕೂಡ  ಉತ್ತಮ ಫಲಿತಾಂಶ ದೊರೆಯುತ್ತದೆ.

Natural ways to Remove mehendi from your hands and feet

Follow Us:
Download App:
  • android
  • ios